Viral Video: ಈ ಸೇತುವೆ ಹೇಗಿದೆ ನೋಡಿ; ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ

|

Updated on: Jan 23, 2024 | 6:16 PM

ವೈರಲ್ ವೀಡಿಯೊದಲ್ಲಿ ಇರುವ ಸೇತುವೆಯನ್ನು ಎರಡು ಪರ್ವತಗಳ ನಡುವೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಶೆಂಗ್ಜಿಯಾಂಗ್ಜು ಕಣಿವೆಯ ಮೇಲೆ ನಿರ್ಮಿಸಲಾಗಿದೆ, 460 ಅಡಿ ಎತ್ತರವಿದ್ದು,328 ಅಡಿ ಅಂದರೆ 100 ಮೀಟರ್ ಉದ್ದವಿದೆ.

Viral Video: ಈ ಸೇತುವೆ ಹೇಗಿದೆ ನೋಡಿ; ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ
Ruyi Bridge
Image Credit source: Pinterest
Follow us on

ವಿಶ್ವದಾದ್ಯಂತ ಸಾಕಷ್ಟು ಪ್ರವಾಸಿತಾಣಗಳಿವೆ. ಕೆಲವು ಪ್ರದೇಶಗಳಿಗೆ ತಲುಪಿದ ಕೂಡಲೇ ಪ್ರಶಾಂತತೆಯ, ಅಲ್ಲಿನ ಸೌಂದರ್ಯದಿಂದ ನಿಮ್ಮನ್ನು ನೀವು ಕಳೆದುಕೊಳುತ್ತೀರೀ. ಅದರಂತೆ ಕೆಲವೊಂದು ಪ್ರದೇಶಗಳು ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಇದೀಗಾ ಅಂತದ್ದೇ ಸೇತುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಎರಡು ಬೆಟ್ಟಗಳ ನಡುವೆ ಇರುವ ಈ ಸೇತುವೆ ಸಾಕಷ್ಟು ಎತ್ತರದಲ್ಲಿದೆ. ಡ್ರೋನ್​​ ಮೂಲಕ ಚಿತ್ರೀಕರಿಸಿದ ಈ ವಿಡಿಯೋ ಒಂದು ಕ್ಷಣ ನಡುಕ ಹುಟ್ಟಿಸುವುದಂತೂ ಖಂಡಿತಾ.

ವೈರಲ್ ವೀಡಿಯೊದಲ್ಲಿ ಇರುವ ಸೇತುವೆಯನ್ನು ಎರಡು ಪರ್ವತಗಳ ನಡುವೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಶೆಂಗ್ಜಿಯಾಂಗ್ಜು ಕಣಿವೆಯ ಮೇಲೆ ನಿರ್ಮಿಸಲಾಗಿದೆ, 460 ಅಡಿ ಎತ್ತರವಿದ್ದು,328 ಅಡಿ ಅಂದರೆ 100 ಮೀಟರ್ ಉದ್ದವಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವತಿ

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ @gunsnrosesgirl3 ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. 12 ಸೆಕೆಂಡುಗಳ ವೀಡಿಯೊವನ್ನು ಇದುವರೆಗೆ 73,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನೂರಾರು ಜನರು ವೀಡಿಯೊಗೆ ಲೈಕ್​​ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. “ಈ ಸೇತುವೆ ಆಧುನಿಕ ತಂತ್ರಜ್ಞಾನಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, “ನಾನು ಎಷ್ಟೋ ಸೇತುವೆಗಳನ್ನು ನೋಡಿದ್ದೇನೆ, ಆದರೆ ಇಂತಹ ಸೇತುವೆಯನ್ನು ನೋಡಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:16 pm, Tue, 23 January 24