Viral Video: ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಗ್ರಹ, ಮೈ ರೋಮಾಂಚನಗೊಳಿಸಿದ ಎಐ ವಿಡಿಯೋ 

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮವು ಸಾಂಗವಾಗಿ ನೆರವೇರಿದೆ. ಸೋಮವಾರದಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ  ನಡೆದಿದ್ದು, ಬಾಲ ರಾಮನ ವಿಗ್ರಹವನ್ನು ಕಂಡು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ.  ಇದೀಗ ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ, ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ವಿಗ್ರಹವು ಕಣ್ಣು ಮಿಟುಕಿಸುತ್ತಾ ಮುಗುಳ್ನಗೆ ಬೀರುತ್ತಿರುವ  ಎ.ಐ ಜನರೇಟೆಡ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 

Viral Video: ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಗ್ರಹ, ಮೈ ರೋಮಾಂಚನಗೊಳಿಸಿದ ಎಐ ವಿಡಿಯೋ 
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 23, 2024 | 4:39 PM

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿನಿಂದ ಕೋಟ್ಯಾಂತರ ಹಿಂದುಗಳು  ಪ್ರಭು ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಬಹಳ ಕಾತುರದಿಂದ ಕಾಯುತ್ತಿದ್ದರು. ಇದೀಗ  ಭವ್ಯ ರಾಮ ಮಂದಿರದ ಕನಸು  ಸಾಕಾರಗೊಂಡಿದ್ದು, ಸೋಮವಾರಂದು ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.  ಈ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರ ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ. ಅಲ್ಲದೆ  ಬಾಲ ರಾಮನ ಸುಂದರ ಮೂರ್ತಿಯನ್ನು ಕಂಡು ರಾಮ ಭಕ್ತರ ಕಣ್ಣಲ್ಲಿ ಆನಂದ ಭಾಷ್ಪವೇ ಹರಿದಿದೆ.  ಸಾಮಾಜಿಕ ಜಾಲತಾಣದಲ್ಲಂತೂ ಎಲ್ಲಿ ನೋಡಿದರೂ ಬಾಲ ರಾಮನ ವಿಗ್ರಹದ ಸುಂದರ ಪೋಟೋಗಳೇ ಹರಿದಾಡುತ್ತಿವೆ. ಈ ನಡುವೆ ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತಹ ಬಾಲ ರಾಮನ ಮೂರ್ತಿಯ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲಾವಿದನ ಕಲ್ಪನೆಯಲ್ಲಿ ಮೂಡಿದ ನಗು ಮೊಗದ ಬಾಲ ರಾಮನನ್ನು ಕಂಡು ನೆಟ್ಟಿಗರು  ಮನಸೋತಿದ್ದಾರೆ.

@happymi ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತ ರಾಮ ಲಲ್ಲಾ ಮೂರ್ತಿಯು  ಸುಂದರ ವಿಡಿಯೋವೊಂದನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಂತಹ ಬಾಲ ರಾಮನ ಮೂರ್ತಿಯು ಕಣ್ಣು ಮಿಟುಕಿಸುತ್ತಾ, ಮುಗುಳ್ನಗೆ ಬೀರುತ್ತಿರುವ ಮನಮೋಹಕ ದೃಶ್ಯವನ್ನು ಕಾಣಬಹುದು. ಬಾಲ ರಾಮನ ಈ ಸುಂದರ  ವಿಡಿಯೋವನ್ನು ಕಂಡು ಮೈ ರೋಮಾಂಚನಗೊಂಡಿತು ಎಂದು ನೆಟ್ಟಿಗರು  ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮಕ್ಕಳು ಮಾತ್ರ ಅಲ್ಲ, ಈ ನಾಯಿ ಮರಿಗೂ ಮೊಬೈಲ್​ ಕೊಟ್ಟಿಲ್ಲ ಅಂದ್ರೆ ನಿದ್ದೆನೇ ಮಾಡಲ್ಲ!

ಜನವರಿ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 40 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮಾಡುವ ಮೂಲಕ  ಬಾಲ ರಾಮನ ವಿಗ್ರಹದ  ಎ.ಐ ಜನರೇಟೆಡ್ ವಿಡಿಯೋಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Tue, 23 January 24

Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್