Brain Activity: ಹಂಗೇರಿಯ ಡಿಜಿಟಲ್ ಕಲಾವಿದ ಗರ್ಗೆಲಿ ಡುಡಾಸ್ (Gergely Dudas) ತಮ್ಮ ಫೇಸ್ಬುಕ್ ಖಾತೆಯಲ್ಲಿ ಆಗಾಗ ತಮ್ಮ ಫಾಲೋವರುಗಳ ಮೆದುಳಿಗೆ ಆಗಾಗ ಕಸರತ್ತನ್ನು ಕೊಡುತ್ತಿರುತ್ತಾರೆ. ಈ ಬಾರಿ ಅವರು ಪೋಸ್ಟ್ ಮಾಡಿದ ಚಿತ್ರ ಹಣ್ಣು ಮತ್ತು ತರಕಾರಿಗಳ ರಾಶಿಯದು. ಈ ರಾಶಿಯ ಮಧ್ಯೆ ಮೂರು ಪಕ್ಷಿಗಳನ್ನು (Birds) ಅಡಗಿಸಿಟ್ಟಿದ್ದಾರೆ. ಅವುಗಳನ್ನು ಪತ್ತೆ ಹಚ್ಚುವ ಕೆಲಸ ನಿಮ್ಮದು. ಇಲ್ಲಿ ಬಾಳೆಹಣ್ಣು, ಟೊಮ್ಯಾಟೋ, ಪೇರಳೆ, ಕುಂಬಳಕಾಯಿ, ಬದನೆಕಾಯಿ ಹೀಗೆ ಮುಂತಾದವುಗಳನ್ನು ಸುರಿಯಲಾಗಿದೆ. 10 ಸೆಕೆಂಡುಗಳಲ್ಲಿ ನೀವು ಆ ಮೂರು ಪಕ್ಷಿಗಳನ್ನು ಹುಡುಕಬೇಕು. ಸವಾಲು ಸ್ವೀಕರಿಸಲು ಸಿದ್ಧರಿದ್ದೀರಾ?
ಇದನ್ನೂ ಓದಿ : Viral Video: ಮರುಜನ್ಮ; 20 ವರ್ಷದ ಮಗನಿಗೆ ಕಿಡ್ನಿ ದಾನ ಮಾಡಿದ ಅಪ್ಪ
14 ಗಂಟೆಗಳ ಹಿಂದೆ ಫೇಸ್ಬುಕ್ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 500 ಜನರು ಪ್ರತಿಕ್ರಿಯಿಸಿದ್ದಾರೆ. ಆಹ್! ಪಕ್ಷಿಗಳು ಕಂಡವು, ಇದು ನಿಜಕ್ಕೂ ತುಂಬಾ ಚೇತೋಹಾರಿಯಾದ ಸವಾಲು, ಮತ್ತಷ್ಟು ಇಂಥ ಸವಾಲುಗಳಿಗಾಗಿ ಕಾಯುತ್ತಿದ್ದೇವೆ ಎಂದು ಕೆಲವರು ಹೇಳಿದ್ದಾರೆ.
ನನಗೆ ಆ ಮೂರೂ ಪಕ್ಷಿಗಳು ಕಂಡವು. ಆದರೆ ಪ್ರತೀ ಪೇರಳೆ ಹಣ್ಣುನ್ನು ನೋಡಿ ನೋಡಿದಾಗೆಲ್ಲ ಇದು ಪಕ್ಷಿಯೇ ಎಂದು ಅಂದುಕೊಳ್ಳುತ್ತಿದ್ದೆ ಎಂದಿದ್ದಾರೆ ಒಬ್ಬರು. ನನಗೆ ಒಂದೂ ಹಕ್ಕಿ ಸಿಗಲಿಲ್ಲ, ಕೋಪ ಬಂತು ಎಂದಿದ್ದಾರೆ ಇನ್ನೊಬ್ಬರು. ಶರತ್ಕಾಲದ ಈ ಬಣ್ಣಗಳು ನನಗೆ ಅತ್ಯಂತ ಪ್ರಿಯ ಎಂದಿದ್ದಾರೆ ಮತ್ತೊಬ್ಬರು. ನನಗೆ ಹತ್ತು ಸೆಕೆಂಡುಗಳು ಸಾಕಾಗಲಿಲ್ಲ ಆದರೆ ಹಣ್ಣುಗಳು ಕಂಡವು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ: Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ
ಈತನಕ ಪಕ್ಷಿಗಳನ್ನು ಹುಡುಕಲು ಸಾಧ್ಯವೇ ಆಗಿಲ್ಲವೆಂದುಕೊಳ್ಳುವವರು ಬೇಸರಿಸಿಕೊಳ್ಳಬೇಕಿಲ್ಲ. ನೆಟ್ಟಿಗರಲ್ಲಿ ಅನೇಕರು ಕೂಡ ನಿಮ್ಮ ಹಾಗೆ ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ನಿಮಗೆ ಸಹಾಯವಾಗಲೆಂದು ಈ ಕೆಳಗಿನ ಚಿತ್ರ ಕೊಡುತ್ತಿದ್ದೇವೆ.
ಮತ್ತಷ್ಟು ಇಂಥ ಸವಾಲುಳ್ಳ ಚಿತ್ರಗಳಿಗಾಗಿ ಕಾಯುತ್ತಾ ಇರಿ. ಈ ದಿನ ನಿಮ್ಮಲ್ಲಿ ಚೈತನ್ಯವನ್ನು ತರಲಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ