ಛತ್ತೀಸ್‌ಗಢ (ಸುರ್ಗುಜಾ): ಮಗು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದೆ. ಅಳು ವಿಪರೀತವಾಗುತ್ತಿದ್ದಂತೆ ಪೋಷಕರಲ್ಲಿ ಸಹಜವಾಗಿ ಗೊಂದಲ,ಭಯ ಉಂಟಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಕೊನೆಗೆ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದ್ದು, ಮಗುವಿನ ಗಂಟಲಿನಲ್ಲಿ ಏನೋ ಸಿಲುಕಿರುವುದು ಕಂಡುಬಂದಿದೆ. ಆದ್ದರಿಂದ ಉಸಿರಾಟದ ತೊಂದರೆಯುಂಟಾಗಿ ಮಗು ಅಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಿಸಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ತೆಂಗಿನ ಕಾಯಿ ತುಂಡನ್ನು ಹೊರತೆಗೆದಿದ್ದಾರೆ. ಮಗುವಿನ ಶ್ವಾಸನಾಳದ ಬಳಿ ತೆಂಗಿನ ಕಾಯಿ ತುಂಡು ಸಿಕ್ಕಿಹಾಕಿಕೊಂಡಿತ್ತು. ವೈದ್ಯರ ತಂಡ ಎಚ್ಚರಿಕೆಯಿಂದ ಕಾಯಿಯನ್ನು ಹೊರತೆಗೆದಿದ್ದಾರೆ. ಈ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯವರು ಎಂದು ಹೇಳಲಾಗಿದೆ. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸ್ವಲ್ಪ ವಿಳಂಬ ಮಾಡಿದ್ದರೆ ಮಗು ಪ್ರಾಣಕ್ಕೆ ಕಂಟಕವಾಗುತ್ತಿತ್ತು ಎಂದು ಎನ್ನುತ್ತಾರೆ ವೈದ್ಯರು. ಆಸ್ಪತ್ರೆ ಅಧೀಕ್ಷಕ ಡಾ.ಜೆ.ಕೆ.ರೈಲ್ವಾನಿ ಮಾತನಾಡಿ, ಡಿ.29ರಂದು ಬೆಳಗ್ಗೆ ಜಯನಗರ ಪಟ್ಟಣದ ನಿವಾಸಿ ರಾಮದೇವ್ ಅವರ 8 ತಿಂಗಳ ಮಗ ಆದಿತ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದಾಗ ಮಗುವಿನ ಗಂಟಲಲ್ಲಿ ಏನೋ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಬಳಿಕ ಆಪರೇಷನ್‌ಗೆ ಸಿದ್ಧತೆ ನಡೆಸಿದ್ದು, ಮಗುವಿನ ಜೀವ ಉಳಿಸುವ ಜವಾಬ್ದಾರಿಯನ್ನು ಡಾ.ಉಷಾ, ಡಾ.ಅನುಪಮ್ ಮಿಂಜ್, ಡಾ.ಪ್ರಿನ್ಸಿ, ಅನಸ್ತೇಶಿಯಾ ವಿಭಾಗದ ಡಾ.ಶಿವಾಂಗಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯರಿಗೆ ವಹಿಸಲಾಯಿತು. ಆದರೆ ಆಪರೇಷನ್ ವೇಳೆ ಅರಿವಳಿಕೆ ನೀಡುವುದು ಸವಾಲಾಗಿ ಪರಿಣಮಿಸಿದೆ.8 ತಿಂಗಳ ಮಗು ಆದಿತ್ಯನನ್ನು ಪ್ರಜ್ಞೆಗೆ ತರಲು ವೈದ್ಯರು ಹರಸಾಹಸ ಪಡಬೇಕಾಯಿತು. ಕೊನೆಗೂ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ