Ergonomic: ಬೆಂಗಳೂರಿನ ಆಟೊ ಚಾಲಕನೊಬ್ಬ (Auto Driver) ಆಫೀಸ್ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಫೋಟೋ ವೈರಲ್ ಆಗಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಇಂಥ ಕುರ್ಚಿಯನ್ನು ಉಪಯೋಗಿಸುತ್ತಾರೆ. ಆದರೆ ಆಟೋ ಓಡಿಸಲು ಈ ಕುರ್ಚಿ ಯಾಕೆ ಬೇಕು? ಎನ್ನುವ ಕುತೂಹಲ ನೆಟ್ಟಿಗರಲ್ಲಿ ಉಂಟಾಗಿದೆ. ಈತನಕ ಈ ಪೋಸ್ಟ್ ಅನ್ನು 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 3,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 200 ಜನರು ರೀಪೋಸ್ಟ್ ಮಾಡಿದ್ದಾರೆ. 60 ಜನರು ಪ್ರತಿಕ್ರಿಯಿಸಿದ್ದಾರೆ. ಅನುಜ್ ಬನ್ಸಾಲ್ X ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Viral: ತಾಂತ್ರಿಕ ದೋಷವೋ ವಂಚನೆಯೋ; ನಿಮ್ಮ ಇತ್ತೀಚಿನ ಸ್ವಿಗ್ಗಿ ಬಿಲ್ ನೋಡಿದ್ದೀರಾ?
ಈ ಪೋಸ್ಟಿನಡಿ ನೆಟ್ಟಿಗರು ತಮ್ಮ ವಿಭಿನ್ನ ಆಲೋಚನೆ, ಅಭಿಪ್ರಾಯಗಳನ್ನು ಹರಿಬಿಡುತ್ತಿದ್ದಾರೆ. ಕೆಳಬೆನ್ನಿನ ಆರೋಗ್ಯವೂ ಪ್ರತಿಯೊಬ್ಬರಿಗೂ ಮುಖ್ಯ, ಅದರಲ್ಲೇನಿದೆ? ಎಂದಿದ್ದಾರೆ ಒಬ್ಬರು. ಕೆಲಸ ಮಾಡುವಾಗ ಎರ್ಗಾನಾಮಿಕ್ ಕುರ್ಚಿಗಳನ್ನು ಬಳಸಿದರೆ ಅಪಾಯ ಕಡಿಮೆ ಎಂದಿದ್ದಾರೆ ಇನ್ನೊಬ್ಬರು. ಇದು ಪೀಕ್ ಬೆಂಗಳೂರು ಕ್ಷಣ ಎಂದಿದ್ದಾರೆ ಮತ್ತೊಬ್ಬರು. ಈ ಬ್ರೋ ಅಲ್ಟ್ರಾ-ರಿಯಲಿಸ್ಟಿಕ್ ಡ್ರೈವಿಂಗ್ ಸೆಟಪ್ ಹೊಂದಿದ್ದಾರೆ ಎಂದಿದ್ದಾರೆ ಮಗದೊಬ್ಬರು.
Why should techbros have all the fun? 😏 pic.twitter.com/A5hnd0sDC8
— Anuj Bansal (@anuj63) September 22, 2023
ಇವನು ಆಟೋ ಓಡಿಸುವುದರೊಂದಿಗೆ ಈ ಕುರ್ಚಿಯಲ್ಲಿಯೇ ಕುಳಿತು ಪಾರ್ಟ್ಟೈಮ್ ಕೆಲಸವನ್ನೂ ಮಾಡುತ್ತಿರಬಹುದು ಎಂದು ಪುಣೆಯ ಆಟೋಚಾಲಕನೊಬ್ಬ ಆನ್ಲೈನ್ ಟ್ರೇಡಿಂಗ್ ಮಾಡುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಒಬ್ಬರು. ಯಾಕೆ ಆಟೋ ಡ್ರೈವರ್ಗಳು ತಮಗೆ ಬೇಕಾದಂಥ ಕುರ್ಚಿಯಲ್ಲಿ ಕುಳಿತುಕೊಳ್ಳವುದು ತಪ್ಪೇನಿದೆ? ಟೆಕ್ಕಿಗಳು ಮಾತ್ರ ಇಂಥ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾ ಎಂದಿದ್ದಾರೆ ಕೆಲವರು. ಬೆನ್ನಿನ ಸಮಸ್ಯ ಇರಬಹುದು ಅದಕ್ಕೇ ಈ ಕುರ್ಚಿ ಜೋಡಿಸಿರಬೇಕು ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : Viral Video: ರೈಲಿನಲ್ಲಿ ಹೀಗೊಂದು ದೊಡ್ಡಕೂಸಿನ ಜೋಳಿಗೆ; ಬುದ್ಧಿವಂತನಿಗೆ ಜಯವಾಲಿ ಎಂದ ನೆಟ್ಟಿಗರು
ತನ್ನ ಆರೋಗ್ಯ ಕಾಪಾಡಿಕೊಳ್ಳಲು ತನಗೇನು ಬೇಕೋ ಆ ವ್ಯವಸ್ಥೆ ಮಾಡಿಕೊಂಡಿದ್ದಾನೆ, ತಪ್ಪೇನಿದೆ? ಎಂದಿದ್ಧಾರೆ ಒಬ್ಬರು. ಈಗಷ್ಟೇ ಬಂದ ಸುದ್ದಿ, ಈ ಚಾಲಕ ಆಟೋರಿಕ್ಷಾ ಸಂಘದ ಅಧ್ಯಕ್ಷನಂತೆ ಎಂದಿದ್ದಾರೆ ಮತ್ತೊಬ್ಬರು.
ಈ ಫೋಟೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ