
Paneer Lover : ಪನೀರ್ ಎಂದರೆ ಅನೇಕರಿಗೆ ಹಸಿವು ದುಪ್ಪಟ್ಟಾಗುತ್ತದೆ, ಅದರಲ್ಲೂ ಮಕ್ಕಳಿಗಂತೂ ಕೇಳಲೇಬೇಡಿ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿರುವ ಈ ಫೋಟೋ ನೋಡಿದ ಮೇಲೆ ಪನೀರ್ ಪ್ರಿಯರ ಮನಸಿನಲ್ಲಿ ಏನು ಓಡುತ್ತದೆಯೋ? ನೆಟ್ಟಿಗರಂತೂ ಆಹಾರ ಸುರಕ್ಷತೆ, ಶುಚಿತ್ವದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆಹಾರ ತಯಾರಿಸುವ ಜಾಗ, ನೈರ್ಮಲ್ಯದ ಬಗ್ಗೆ ತಾವು ಕಂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶುಚಿತ್ವವನ್ನು ನಿರ್ಲಕ್ಷಿಸಿದಲ್ಲಿ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎನ್ನುವುದನ್ನು ಹೇಳಿದ್ದಾರೆ. ರಸ್ತೆಬದಿ ಸಿಗುವ ಪನೀರ್ ಖಾದ್ಯಗಳನ್ನು ಬಾಯಿಚಪ್ಪರಿಸಿ ತಿನ್ನುವ ಮಂದಿ ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು ಎನ್ನುವಂತಿದೆ ಈ ಪೋಸ್ಟ್.
ಇದನ್ನೂ ಓದಿ : Viral Video: ಹುಲಿಗಳನ್ನು ಸಾಕಲಾಗದು; ಈ ಯುವತಿ ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎನ್ನುತ್ತಿರುವ ನೆಟ್ಟಿಗರು
ಪೇರಿಸಿಟ್ಟ ಪನೀರ್ ತುಂಡುಗಳ ಮೇಲೆ ಅಸಹ್ಯಕರವಾಗಿ ಕುಳಿತಿರುವ ವ್ಯಕ್ತಿಯ ಫೋಟೋವನ್ನು X ನಲ್ಲಿ @zhr_jafri ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನಂತರ ಬ್ರ್ಯಾಂಡ್ ಇಲ್ಲದ ಪನೀರ್ ಅನ್ನು ಎಂದಿಗೂ ಖರೀದಿಸಬೇಡಿ ಎಂದಿದ್ದಾರೆ. ಈ ಪೋಸ್ಟ್ ಅನ್ನು ಅಕ್ಟೋಬರ್ 28 ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 61,000 ಜನರು ಈ ಫೋಟೋ ನೋಡಿದ್ದಾರೆ. ಸುಮಆರು 300 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಮನೆಯಲ್ಲಿ ಪನೀರ್, ಚೀಸ್ ಮತ್ತು ತುಪ್ಪ ತಯಾರಿಸಲು ಹೆಚ್ಚು ಶ್ರಮ ಮತ್ತು ಸಮಯ ತೆಗೆದುಕೊಳ್ಳುತ್ತದೆ, ಪರ್ವಾಗಿಲ್ಲ. ಆದರೆ ನಾವಂತೂ ಎಂದಿಗೂ ಹೊರಗಿನಿಂದ ಈ ಪದಾರ್ಥಗಳನ್ನು ಖರೀದಿಸುವುದಿಲ್ಲ ಎಂದಿದ್ದಾರೆ ಅನೇಕರು. ಬ್ರ್ಯಾಂಡ್ವುಳ್ಳವರು ಕೂಡ ಉತ್ತಮವಾಗಿ ಪನೀರ್ ತಯಾರಿಸುತ್ತಾರೆ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದ್ದಾರೆ ಕೆಲವರು. ಎಲ್ಲರೂ ಮನೆಯಲ್ಲೇ ಪನೀರ್ ತಯಾರಿಸಿ, ಇದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ ಎಂದಿದ್ದಾರೆ ಮತ್ತೊಂದಿಷ್ಟು ಜನ.
ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ
ಬ್ರ್ಯಾಂಡ್ ಇರದ ಪನೀರ್, ಬಜೆಟ್ ಸ್ನೇಹಿ ಎಂದು ಅನೇಕರು ಖರೀದಿಸುತ್ತಾರೆ. ಆದರೆ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ ಎಂದಿದ್ದಾರೆ ಒಬ್ಬರು. ಒಟ್ಟಾರೆ ಪನೀರ್ ತಿನ್ನಲೇಬಾರದು ಎನ್ನಿಸಿಬಿಟ್ಟಿತು ಈ ಫೋಟೋ ನೋಡಿದ ಮೇಲೆ ಎಂದಿದ್ದಾರೆ ಇನ್ನೊಬ್ಬರು. ರಸ್ತೆಬದಿಯಂತೂ ಪನೀರ್ ಖಾದ್ಯ ತಿನ್ನಲೇಬೇಡಿ ಎಂದಿದ್ದಾರೆ ಮತ್ತೊಬ್ಬರು.
ಹಾಗಿದ್ದರೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ