Counseling Centre : ಹನುಮಂತನ ಬಾಲ ಗೊತ್ತಲ್ಲ? ಹಾಗೇ ನಮ್ಮ ನಿತ್ಯದ ಸಮಸ್ಯೆಗಳು. ಹೀಗಿರುವಾಗ ಪರಿಹಾರಕ್ಕಾಗಿ ಎಷ್ಟಂತ ನಮ್ಮ ತಲೆಯನ್ನೇ ಓಡಿಸೋದು? ಆಗಾಗ ಸ್ವಲ್ಪ ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರು ಎಷ್ಟಂತ ನಮಗಾಗಿಯೇ ಸಮಯ ಮೀಸಲಿಡುತ್ತಾರೆ? ಮತ್ತು ಅವರಿಗೂ ಅವರವರದೇ ಸಮಸ್ಯೆಗಳು. ಹಾಗಾಗಿ ವೃತ್ತಿಪರ ಸಲಹೆಗಾರರ ಸಹಾಯವನ್ನು ಪಡೆಯುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ನಟಿ, ನಿರೂಪಕಿ ಶಾಲಿನಿಯವರು ಶುರು ಮಾಡಿರುವ ಲೈಫ್ ಇಷ್ಟೇನೇ ಸಲಹಾ ಕೇಂದ್ರದ ಬಗ್ಗೆ ನಿಮಗೆ ಗೊತ್ತಿಲ್ಲವಾದರೆ ಒಮ್ಮೆ ಈ ವಿಡಿಯೋಗಳನ್ನು ನೋಡಿ.
ಶಾಲಿನಿಯ ಆನ್ಲೈನ್ ಸಲಹಾ ಕೇಂದ್ರದಲ್ಲಿ ಯಾವ ಸಮಸ್ಯೆಗೂ ತಕ್ಷಣವೇ ಪರಿಹಾರ ಲಭ್ಯ ಎನ್ನುವಂತಿದೆ. ಆದರೆ ಇದು ಉಚಿತವಲ್ಲ. ನೀವಿಲ್ಲಿ ಮೊದಲೇ ಹಣ ಪಾವತಿಸಬೇಕು ಮತ್ತು ಪ್ಯಾಕೇಜ್ ಸಬ್ಸ್ಕ್ರೈಬ್ ಮಾಡಿಕೊಳ್ಳಬೇಕು. ಆ ಪ್ಯಾಕೇಜಿನಡಿ ಬರುವ ಸಮಸ್ಯೆಗಳಿಗೆ ಮಾತ್ರ ಇಲ್ಲಿ ಪರಿಹಾರ ನೀಡಲಾಗುತ್ತದೆ. ಅಕಸ್ಮಾತ್ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದಿರೋ ಪ್ಯಾಕೇಜ್ ಅಪ್ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.
ಸಾಕಷ್ಟು ಜನರು ಈ ವಿಡಿಯೋಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ಗಂಡಂದಿರ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಒಬ್ಬರು ಹೇಳಿದ್ದಾರೆ. ಮಗು ಜೊತೆ ಅತ್ತರೆ ನೀವೂ ಜೋರಾಗಿ ಅಳಬೇಕು, ಆಗ ಅದು ನಿಲ್ಲಿಸತ್ತೆ ಎಂದು ಶಾಲಿನಿಗೇ ಸಲಹೆ ಕೊಟ್ಟಿದ್ದಾರೆ ಇನ್ನೂ ಒಬ್ಬರು. ಇನ್ನಷ್ಟು ವಿಡಿಯೋಸ್ ಮಾಡಿ, ನಿಜಕ್ಕೂ ಇದು ಒಳ್ಳೆಯ ಕಾನ್ಸೆಪ್ಟ್ ಎಂದಿದ್ದಾರೆ ಮತ್ತೂ ಒಬ್ಬರು. ಈ ಸೀರೀಸ್ ನಿಲ್ಲಿಸಬೇಡಿ, ಮುಂದುವರಿಸಿ ಎಂದು ಅನೇಕರು ಕೇಳಿಕೊಂಡಿದ್ದಾರೆ.
ವಿ.ಸೂ : ಶಾಲಿನಿಯವರ ಸಲಹೆಗಳಿಗೆ ನಾವಂತೂ ಜವಾಬ್ದಾರರಲ್ಲ! ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:53 am, Thu, 25 May 23