ಜಗತ್ತಿನಲ್ಲಿ ಎಲ್ಲಾ ರೀತಿಯ ಉದ್ಯೋಗಗಳೂ ಇವೆ. ಕೆಲವರು ಕಷ್ಟ ಪಟ್ಟು ಹಣ ಸಂಪಾದಿಸಿದರೆ, ಇನ್ನೂ ಕೆಲವರು ತಮ್ಮ ಟ್ಯಾಲೆಂಟ್ ಅನ್ನು ಉಪಯೋಗಿಸಿಕೊಂಡು ಯುಟ್ಯೂಬ್ ಮತ್ತಿತರೆ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳಲ್ಲಿ ವ್ಲಾಗ್, ವಿಡಿಯೋಗಳನ್ನು ಹರಿ ಬಿಡುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ. ಅದೇ ರೀತಿ ಇಲ್ಲೊಂದು ಇನ್‌ಫ್ಲುಯೆನ್ಸರ್ ಯುವತಿಯರಿಗೆ ಶ್ರೀಮಂತ ವ್ಯಕ್ತಿಯನ್ನು ಬುಟ್ಟಿಗೆ ಬೀಳಿಸಿ ಮದುವೆಯಾಗುವುದು ಹೇಗೆ ಎಂಬ ಟಿಪ್ಸ್ ನೀಡುವ ಮೂಲಕವೇ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದಾಳೆ. ಇದೀಗ ಈಕೆಯ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಚೀನಾದ ಚುವಾನ್ ಕ್ಯು ಅಲಿಯಾಸ್ ಕ್ಯುಕ್ಯು ಬಿಗ್ ವುಮನ್ ಪ್ರಖ್ಯಾತ ಇನ್‌ಫ್ಲುಯೆನ್ಸರ್‌ಗಳಲ್ಲಿ ಒಬ್ಬಳಾಗಿದ್ದಾಳೆ. ಈಕೆ ಲೈವ್-ಸ್ಟ್ರೀಮ್‌ನಲ್ಲಿ ಹುಡುಗಿರಿಗೆ ಶ್ರೀಮಂತ ವ್ಯಕ್ತಿಗಳನ್ನು ಪಟಾಯಿಸುವುದು ಹೇಗೆ, ಆ ಮೂಲಕ ಶ್ರೀಮಂತಿಕೆಯನ್ನು ಗಳಿಸುವುದು ಹೇಗೆ ಎಂಬ ಟಿಪ್ಸ್ ನೀಡುವ ಮೂಲಕವೇ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿದ್ದಾಳೆ. ಈಕೆ ತನ್ನ ವಿವದಾತ್ಮಕ ಟಿಪ್ಸ್‌ಗಳಿಂದಲೇ ಹೆಸರುವಾಸಿಯಾಗಿದ್ದಾಳೆ.
ಇತ್ತೀಚಿನ ವರದಿಗಳ ಪ್ರಕಾರ ಕ್ಯುಕ್ಯು ಬಿಗ್ ವುಮನ್ ತನ್ನ ಲೈವ್ ಸ್ಟ್ರೀಮ್ ಭೋದನೆಗಳ ಮೂಲಕ ವಾರ್ಷಿಕವಾಗಿ $19 ಮಿಲಿಯನ್ ಡಾಲರ್ (ಅಂದಾಜು 163 ಕೋಟಿ ರೂ.) ಗಳಿಸುತ್ತಾಳಂತೆ. ಆಕೆ ಲೈವ್ ಸ್ಟ್ರೀಮ್‌ನಲ್ಲಿ ಪ್ರೀತಿಸುವ ಹುಡುಗನನ್ನು ಹೇಗೆ ಆಯ್ಕೆ ಮಾಡಬೇಕು ವಿಶೇಷವಾಗಿ ಶ್ರೀಮಂತ ವ್ಯಕ್ತಿಯನ್ನು ಹೇಗೆ ಪಟಾಯಿಸಬೇಕು ಆ ಮೂಲಕ ಸುಲಭ ದಾರಿಯಲ್ಲಿ ಶ್ರೀಮಂತಿಕೆಯನ್ನು ಹೇಗೆ ಗಳಿಸಬಹುದು ಎಂಬ ವಿವಾದಾತ್ಮಕ ಟಿಪ್ಸ್‌ಗಳನ್ನೇ ನೀಡುತ್ತಿರುತ್ತಾಳೆ.
ಮತ್ತಷ್ಟು ಓದಿ: Viral Video: ಫೋಟೋ ಶೂಟ್ ವೇಳೆ ಬಂದ ರೈಲು, ಪ್ರಾಣ ಉಳಿಸಿಕೊಳ್ಳಲು ಕಂದಕಕ್ಕೆ ಹಾರಿದ ದಂಪತಿ; ವಿಡಿಯೋ ವೈರಲ್
ಈಕೆಯ ಈ ನಡೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾದರೂ ಚೀನಾದಲ್ಲಿ ಆಕೆಯ ಜನಪ್ರಿಯತೆ ಕಡಿಮೆಯಾಗಿಲ್ಲ. ಹೌದು ಈಗಲೂ ಆಕೆ ಮಹಿಳೆಯರಿಗೆ ಶ್ರೀಮಂತ ವ್ಯಕ್ತಿಯನ್ನು ಪಟಾಯಿಸುವ ಟಿಪ್ಸ್ ನೀಡುವ ಮೂಲಕ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ