Love Story: 80ರ ವ್ಯಕ್ತಿಯನ್ನು ಮದುವೆಯಾಗಲು ತನ್ನ ಕುಟುಂಬ ತೊರೆದು ಬಂದ 23ರ ಯುವತಿ

ಈ ಲವ್ ಸ್ಟೋರಿ ಚೀನಾದ ಹೆಬೈ ಪ್ರಾಂತ್ಯದದ್ದು. ವಾಸ್ತವವಾಗಿ, ಇಲ್ಲಿ 23 ವರ್ಷದ ಯುವತಿಯೊಬ್ಬಳು ನರ್ಸಿಂಗ್ ಹೋಂನಲ್ಲಿ ಭೇಟಿಯಾದ 80 ವರ್ಷದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧಕ್ಕೆ ಮನೆಯವರು ಒಪ್ಪದ ಕಾರಣ, ಯುವತಿ ತನ್ನ ಪೋಷಕರನ್ನು ತೊರೆದು ಬಂದು ವಯಸ್ಸಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ.

Love Story: 80ರ ವ್ಯಕ್ತಿಯನ್ನು ಮದುವೆಯಾಗಲು ತನ್ನ ಕುಟುಂಬ ತೊರೆದು ಬಂದ 23ರ ಯುವತಿ
23 year old girl marries 80 year old man

Updated on: Jun 14, 2024 | 1:33 PM

ಚೀನಾದ ಒಂದು ವಿಶಿಷ್ಟ ಪ್ರೇಮಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ. ಇಲ್ಲಿ 23 ವರ್ಷದ ಹುಡುಗಿ 80 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದಕ್ಕಾಗಿ ಆಕೆ ಕೆಲದಿನಗಳ ಹಿಂದೆಯೇ ತನ್ನ ಕುಟುಂಬವನ್ನು ತೊರೆದು ಬಂದಿದ್ದಾಳೆ. “ನಮ್ಮಿಬ್ಬರ ಆಸಕ್ತಿಗಳು ಮತ್ತು ಹವ್ಯಾಸಗಳು ಒಂದೇ ಆಗಿದ್ದು, ಇದು ನಮ್ಮನ್ನು ಪರಸ್ಪರ ಹತ್ತಿರಕ್ಕೆ ತರಲು ಕಾರಣವಾಯಿತು” ಎಂದು ಯುವತಿ ಹೇಳಿರುವುದು ವರದಿಯಾಗಿದೆ.

ಈ ಲವ್ ಸ್ಟೋರಿ ಚೀನಾದ ಹೆಬೈ ಪ್ರಾಂತ್ಯದದ್ದು. ವಾಸ್ತವವಾಗಿ, ಇಲ್ಲಿ 23 ವರ್ಷದ ಯುವತಿಯೊಬ್ಬಳು ನರ್ಸಿಂಗ್ ಹೋಂನಲ್ಲಿ ಭೇಟಿಯಾದ 80 ವರ್ಷದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಹೆಬೈ ಪ್ರಾಂತ್ಯದ ನರ್ಸಿಂಗ್ ಹೋಂನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವಾಗ ಹುಡುಗಿ 80 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ನಂತರ ಇಬ್ಬರೂ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಮಳೆಗೆ ನಡುರಸ್ತೆಯಲ್ಲೇ ಪ್ರೇಮಿಗಳ ರೋಮ್ಯಾಂಟಿಕ್ ಡ್ಯಾನ್ಸ್; ವಿಡಿಯೋ ವೈರಲ್​​

ಈ ಸಂಬಂಧಕ್ಕೆ ಮನೆಯವರು ಒಪ್ಪದ ಕಾರಣ, ಯುವತಿ ತನ್ನ ಪೋಷಕರನ್ನು ತೊರೆದು ಬಂದು ವಯಸ್ಸಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಡುಗಿ ಹಣಕ್ಕಾಗಿ ಮುದುಕನನ್ನು ಮದುವೆಯಾಗಿರಬೇಕು ಎಂದು ಜನರು ಹೇಳುತ್ತಾರೆ, ಕೆಲವರು ಇದನ್ನು ವಯಸ್ಸಿಗೆ ಮೀರಿದ ಪ್ರೇಮಕಥೆ ಎಂದು ಕರೆಯುತ್ತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: