Viral:ಮೀನಲ್ಲಾ ಅಣ್ಣಾ ಅದು ಮೊಸಳೆ, ಬದುಕಿದೆಯಾ ಬಡ ಜೀವವೇ!

ಪ್ರಕೃತಿಯಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಅಚ್ಚರಿಗಳು ನಮಗಾಗಿ ಕಾದಿರುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕೆಲವೊಂದು ಖುಷಿ ತರಿಸಬಹುದು ಕೆಲವೊಂದು ಭಯಾನಕವಾಗಿರಬಹುದು. ನದಿಯಲ್ಲಿ ನೀರಿನಲ್ಲಿದ್ದ ವ್ಯಕ್ತಿಗೆ ಅಪಾಯವನ್ನು ತಂದೊಡ್ಡುವ ಕ್ಷಣವೊಂದು ಒಮ್ಮೆಲೆ ಬಂದು ಕಣ್ಮರೆಯಾಗುತ್ತದೆ. ಈ ವೈರಲ್ ವಿಡಿಯೋವನ್ನು bajaellentell ಎಂಬ ಖಾತೆಯಿಂದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

Viral:ಮೀನಲ್ಲಾ ಅಣ್ಣಾ ಅದು ಮೊಸಳೆ, ಬದುಕಿದೆಯಾ ಬಡ ಜೀವವೇ!
ನದಿ

Updated on: Feb 24, 2025 | 9:07 AM

ನೀರು ಕಂಡಾಕ್ಷಣ ಈಜಬೇಕೆನ್ನುವ ಹಂಬಲ ಮೂಡುವುದು ಸಹಜ, ವ್ಯಕ್ತಿಯೊಬ್ಬರು ದೋಣಿಯಲ್ಲಿ ನದಿಗೆ ಇಳಿದು ನೀರಿನಲ್ಲಿ ಮಜಾ ಮಾಡುತ್ತಿದ್ದರು. ಆದರೆ ಪ್ರಕೃತಿಯಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಅಚ್ಚರಿಗಳು ನಮಗಾಗಿ ಕಾದಿರುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕೆಲವೊಂದು ಖುಷಿ ತರಿಸಬಹುದು ಕೆಲವೊಂದು ಭಯಾನಕವಾಗಿರಬಹುದು.

ನದಿಯಲ್ಲಿ ನೀರಿನಲ್ಲಿದ್ದ ವ್ಯಕ್ತಿಗೆ ಅಪಾಯವನ್ನು ತಂದೊಡ್ಡುವ ಕ್ಷಣವೊಂದು ಒಮ್ಮೆಲೆ ಬಂದು ಕಣ್ಮರೆಯಾಗುತ್ತದೆ. ಈ ವೈರಲ್ ವಿಡಿಯೋವನ್ನು bajaellentell ಎಂಬ ಖಾತೆಯಿಂದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ನೀರಿನ ಕೆಳಗಿರುವ ಅಪಾಯದ ಅರಿವಿಲ್ಲದೆ ಶರ್ಟ್​ ಬಿಚ್ಚಿಕೊಂಡಿದ್ದ ವ್ಯಕ್ತಿ ಒಮ್ಮೆಲೆ ಬೆಚ್ಚಿಬಿದ್ದಿದ್ದರು.

ತಂಪಾದ ನೀರನ್ನು ಆನಂದಿಸುತ್ತಿರುವಾಗ ಇದ್ದಕ್ಕಿದ್ದಂತೆ ಕಾಲಿಗೇನೋ ತಾಗಿತೆಂದು ಕೈಯಲ್ಲಿ ಹಿಡಿದು ನೋಡಿದಾಗ ಅದು ಮೀನಾಗಿರಲಿಲ್ಲ, ಮೊಸಳೆಯಾಗಿತ್ತು. ತಕ್ಷಣ ಭಯದಿಂದ ಅದನ್ನು ದೂರ ಎಸೆದು ಓಡಿಬಂದು ದೋಣಿಹತ್ತಿ ಬಜಾವಾಗುವ ದೃಶ್ಯ ಒಮ್ಮೆಲೆ ಯಾರನ್ನಾದರೂ ಭಯಗೊಳಿಸುವಂತಿದೆ.

ಮತ್ತಷ್ಟು ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕುಗಳನ್ನು 7 ಸೆಕೆಂಡುಗಳಲ್ಲಿ ಹುಡ್ಕೋಕಾಗುತ್ತಾ?

ಈ ವೈರಲ್ ವೀಡಿಯೊ ಅಪ್‌ಲೋಡ್ ಆದ ಎರಡೇ ದಿನಗಳಲ್ಲಿ 637,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ, ಆಘಾತಕ್ಕೊಳಗಾದ ಸಾವಿರಾರು ವೀಕ್ಷಕರು ಈ ಕ್ಷಣದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈಗ ದೊಡ್ಡ ಮೀನು ಹಿಡಿದಿದ್ದೇನೆ ಎಂದುಕೊಂಡಿರಬೇಕು ಎಂದು ಬರೆದರೆ ಮತ್ತೊಬ್ಬರು ಪುರುಷರು ಧೈರ್ಯವಂತರು ಎಂದು ಬರೆದಿದ್ದಾರೆ, ಮತ್ತೊಬ್ಬರು ನಿಮಗೆ ಬದುಕಲು ಮತ್ತೊಂದು ಅವಕಾಶ ಸಿಕ್ಕಿದೆ ಅಭಿನಂದನೆಗಳು ಎಂದು ಬರೆದಿದ್ದಾರೆ. ಈ ರೋಮಾಂಚಕಾರಿ ವೀಡಿಯೊ ಪ್ರಕೃತಿ ಅನಿರೀಕ್ಷಿತ ಎಂಬುದನ್ನು ನೆನಪಿಸುತ್ತದೆ, ಮತ್ತು ಕೆಲವೊಮ್ಮೆ ನಮ್ಮ ಅಣತಿಗೆ ಮೀರಿ ಏನೇನೋ ಸಂಭವಿಸಿಬಿಡುತ್ತವೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:56 am, Mon, 24 February 25