ಹೆಲ್ಮೆಟ್ ಧರಿಸದೇ ಸ್ಕೂಟರ್​​ ಓಡಿಸಿದ ವಧು; ಪೋಲಿಸರಿಂದ ಸಿಕ್ತು ಬಂಪರ್​​ ಬಹುಮಾನ

| Updated By: ಅಕ್ಷತಾ ವರ್ಕಾಡಿ

Updated on: Jun 14, 2023 | 3:42 PM

ಮದುವೆಯ ದಿನ ಯುವತಿಯೊಬ್ಬಳು ಹೆಲ್ಮೆಟ್ ಧರಿಸದೇ ಸ್ಕೂಟರ್​​ ಓಡಿಸಿ ಸಖತ್​​ ಆಗಿ ರೀಲ್ಸ್​​ ಮಾಡಿ ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿದ್ದಾಳೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಆಕೆಯ ವಿಡಿಯೋಗೆ ದೆಹಲಿ ಪೋಲಿಸರು ಪ್ರತಿಕ್ರಿಯಿಸಿ ಬಂಪರ್​ ಬಹುಮಾನ ನೀಡಿದ್ದಾರೆ.

ಹೆಲ್ಮೆಟ್ ಧರಿಸದೇ ಸ್ಕೂಟರ್​​ ಓಡಿಸಿದ ವಧು; ಪೋಲಿಸರಿಂದ ಸಿಕ್ತು ಬಂಪರ್​​ ಬಹುಮಾನ
ಹೆಲ್ಮೆಟ್ ಧರಿಸದೇ ಸ್ಕೂಟರ್​​ ಓಡಿಸಿದ ವಧು
Image Credit source: Twitter
Follow us on

ಮದುವೆಯ ದಿನ ಯುವತಿಯೊಬ್ಬಳು ಹೆಲ್ಮೆಟ್ ಧರಿಸದೇ ಸ್ಕೂಟರ್​​ ಓಡಿಸಿ ಸಖತ್​​ ಆಗಿ ರೀಲ್ಸ್​​ ಮಾಡಿ ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿದ್ದಾಳೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಆಕೆಯ ವಿಡಿಯೋಗೆ ದೆಹಲಿ ಪೋಲಿಸರು ಪ್ರತಿಕ್ರಿಯಿಸಿ ಬಂಪರ್​ ಬಹುಮಾನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ರೀಲ್ಸ್​​ ಮಾಡುವ ಹುಚ್ಚು ಹೆಚ್ಚಾಗಿ ಬಿಟ್ಟಿದೆ. ಇಲ್ಲೊಬ್ಬಳು ಯುವತಿ ತನ್ನ ಮದುವೆಯ ದಿನದಂದು ಅದ್ದೂರಿಯಾಗಿ ರೆಡಿಯಾಗಿ ಸ್ಕೂಟಿಯಲ್ಲಿ ರೈಡ್​​ ಹೊರಟ್ಟಿದ್ದಾಳೆ. ಆದರೆ ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಈ ವಧು ಭಾರೀ ಸುದ್ದಿಯಾಗಿದ್ದಾಳೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ದೆಹಲಿ ಪೊಲೀಸರು ಸಂಚಾರ ನಿಯಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಜತೆಗೆ ಹೀಗೆ ನಿಯಮ ಉಲ್ಲಂಘಿಸಿದರೆ ಅದರ ಅಡ್ಡ ಪರಿಣಾಮಗಳನ್ನೂ ಎದುರಿಸಬೇಕಾದೀತು. ಜೊತೆಗೆ ಆಕೆಯ ಮೇಲೆ ದಂಡ ವಿಧಿಸಿರುವುದನ್ನು ಪೊಲೀಸರು ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.

ವೀಡಿಯೊವನ್ನು ಇಲ್ಲಿದೆ ನೋಡಿ:


 ಇದನ್ನೂ ಓದಿ: ‘ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ’ ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?

ವೀಡಿಯೊದ ಮೊದಲ ಭಾಗವು ವಧು ತನ್ನ ಮದುವೆಯ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಸ್ಕೂಟರ್ ಓಡಿಸುತ್ತಿರುವುದನ್ನು ಮತ್ತು ಆಕೆಯ ಮೇಲೆ ದಂಡ ವಿಧಿಸಿರುವ ಚಲನ್​​​​​​ ಅನ್ನು ಕೂಡ ಕಾಣಬಹುದು. ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:42 pm, Wed, 14 June 23