ಊಟದ ವಿರಾಮದ ಸಮಯವನ್ನು ಹೆಚ್ಚು ತೆಗೆದುಕೊಂಡಿದ್ದಕ್ಕಾಗಿ ಮಹಿಳಾ ಉದ್ಯೋಗಿಯನ್ನು ಆಕೆಯ ಬಾಸ್ ವಜಾಗೊಳಿಸಿದ್ದಾರೆ. LadBible ವರದಿಯ ಪ್ರಕಾರ, ಆಸ್ಟ್ರೇಲಿಯಾ ಮೂಲದ ರಿಯಲ್ ಎಸ್ಟೇಟ್ ಕಂಪನಿಯ ಮುಖ್ಯಸ್ಥ ಟ್ರಾಯ್ ಹೋಮ್ಸ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಮಹಿಳಾ ಉದ್ಯೋಗಿಯ ಬಗ್ಗೆ ಕಥೆಯನ್ನು ಹಂಚಿಕೊಂಡಿದ್ದಾರೆ. 2014 ರಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಸಂದರ್ಶನವೊಂದರಲ್ಲಿ ಯುವತಿಯೊನ್ನು ವೈಯಕ್ತಿಕ ಸಹಾಯಕ್ಕಾಗಿ ನೇಮಿಸಿಕೊಂಡಿದ್ದರು.
ಹೋಮ್ಸ್ ಪ್ರಕಾರ, ಸಂಬಳದ ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ಈ ಯುವತಿಗೆ ನೀಡಲಾಗಿತ್ತು. ಯುವತಿಯನ್ನು ನೇಮಕ ಮಾಡಿದ ಕೆಲವೇ ವಾರಗಳಲ್ಲಿ ಆಕೆಯ ನಡವಳಿಕೆಯಿಂದ ಬೇಸರಗೊಂಡಿದ್ದೇನೆ ಎಂದು ಬಾಸ್ ಹೇಳಿದ್ದಾರೆ. ಏಕೆಂದರೆ ಅವಳು ತನ್ನ ಸೂಚನೆಗಳನ್ನು ಪಾಲಿಸದೇ, ಆಫೀಸಿನಿಂದ ಹೊರಡುತ್ತಾಳೆ. ಬ್ರೇಕ್ ತೆಗೆದು ಹೋದರೆ ಗಂಟೆ ಗಟ್ಟಲೆ ಬರುವುದೇ ಇಲ್ಲ. ಎಲ್ಲಿಗೆ ಹೋಗಿದ್ದೀರಿ ಎಂದು ಕೇಳಿದಾಗ ವಿಭಿನ್ನವಾಗಿ ವರ್ತಿಸುತ್ತಿದ್ದಳು” ಎಂದು ಬಾಸ್ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ
ಇತ್ತೀಚಿನ ದಿನಗಳಲ್ಲಿ ಊಟದ ವಿರಾಮ ತೆಗೆದುಕೊಂಡರೆ ಗಂಟೆಗಳವರೆಗೆ ಕಣ್ಮರೆಯಾಗುತ್ತಿದ್ದಳು. ಎಷ್ಟೋ ಸಲ ಮಧ್ಯಾಹ್ನದ ಊಟ ಮುಗಿಸಿ ಕೆಲಸಕ್ಕೆ ಬಾರದೆ ಯಾವುದೋ ಸಬೂಬು ಹೇಳಿ ಮನೆಗೆ ಹೋಗುತ್ತಿದ್ದಳು. ಕೆಲವೊಮ್ಮೆ ಲಿಫ್ಟ್ ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಕ್ಯಾಂಟೀನ್ ತುಂಬಾ ಜನದಟ್ಟಣೆಯಿಂದ ಕೂಡಿರುತ್ತದೆ ಮತ್ತು ಸರದಿಯಲ್ಲಿ ನಿಂತು ತಿನ್ನಲು ತಡವಾಯಿತು ಎಂದು ಹೇಳುತ್ತಿದ್ದಳು. ಈ ಎಲ್ಲಾ ಕಾರಣಗಳಿಂದಾಗಿ ಆಕೆಯನ್ನು ನಾನು ಕೆಲಸದಿಂದ ವಜಾಗೊಳಿಸಿದೆ ಎಂದು ಬಾಸ್ ಕೇಳಿಕೊಂಡಿರುವುದು ವರದಿಯಾಗಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ