Viral: ನಾಲ್ಕು  ಇಂಚಿನ ಬಾಲದೊಂದಿಗೆ ಜನಿಸಿದ  ಮಗು; ಬೆರಗಾದ ವೈದ್ಯ ಲೋಕ  

Baby Born With Tail: ನೆರೆ ರಾಷ್ಟ್ರ ಚೀನಾದಲ್ಲಿ ವೈದ್ಯ ಲೋಕವನ್ನೇ ಬೆರಗಾಗಿಸುವ ಅಚ್ಚರಿಯ ಘಟನೆಯೊಂದು ನಡೆದಿದ್ದು, ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದೆ. ಈ ಕುರಿತ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ. ಅಷ್ಟಕ್ಕೂ ನವಜಾತ ಶಿಶುವಿನಲ್ಲಿ   ಮಂಗನಂತೆ ಬಾಲ  ಏಕೆ ಬೆಳೆಯಿತು,  ಇದರ ಹಿಂದಿನ ಕಾರಣವನ್ನು ತಿಳಿಯಿರಿ. 

Viral: ನಾಲ್ಕು  ಇಂಚಿನ ಬಾಲದೊಂದಿಗೆ ಜನಿಸಿದ  ಮಗು; ಬೆರಗಾದ ವೈದ್ಯ ಲೋಕ  
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 16, 2024 | 3:42 PM

ಪ್ರಪಂಚದಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಘಟನೆಗಳು ಹಿಂಗೂ ನಡೆಯಲು ಸಾಧ್ಯಾನಾ ಅಂತ ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತದೆ. ಸದ್ಯ ಅಂತಹ ಸುದ್ದಿಯೊಂದು ಇದೀಗ ವೈರಲ್ ಆಗಿದ್ದು, ನೆರೆ ರಾಷ್ಟ್ರ ಚೀನಾದಲ್ಲಿ ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದೆ. ಈ ಘಟನೆ ವೈದ್ಯ ಲೋಕವನ್ನೇ ಬೆರಗಾಗಿಸಿದೆ.

ವರದಿಗಳ ಪ್ರಕಾರ ಚೀನಾದ ಹ್ಯಾಂಗ್ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಈ ಮಗುವಿನ ಬೆನ್ನಿನ ಭಾಗದಲ್ಲಿ ಬಾಲವಿರುವುದು ಪತ್ತೆಯಾಗಿದೆ. ಇದೊಂದು ಅಸಹಜ ಬೆಳವಣಿಗೆಯಾಗಿದ್ದು, ಬೆನ್ನುಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಕಾರಣದಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.  ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರೋಸರ್ಜರಿ ವಿಭಾಗದ ವೈದ್ಯ ಡಾ ಲೀ  ನವಜಾತ ಶಿಶುವಿನ ಬೆನ್ನಿನ ಭಾಗದಲ್ಲಿ ಬಾಲ ಇರುವುದನ್ನು ಪತ್ತೆ ಹಚ್ಚಿದ್ದು, ಈ ಕುರಿತ ವಿಡಿಯೋವೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮಗುವಿನ ದೇಹದಲ್ಲಿ ಬಾಲ ಏಕೆ ಬೆಳೆಯಿತು?

ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷದಿಂದ  ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗುತ್ತದೆ ಎಂದು ಡಾ. ಲೀ ಹೇಳಿದ್ದಾರೆ. ಇದು ಬೆನ್ನು ಹುರಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಸಹಜವಾಗಿ ಜೋಡಿಸಲ್ಪಟ್ಟಿರುವ ಒಂದು ರೀತಿಯ ಸ್ಥಿತಿಯಾಗಿದ್ದು, ಇದರಿಂದ ಬಾಲ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಿತಿ ಯಾರಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ಸಂಭವಿಸಿದರೆ ಅದು ನರ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ʼಸೈನಿಕ ಕರಡಿʼ ಇದರ ನೈಜ್ಯ ಕಥೆ ಇಲ್ಲಿದೆ 

ಈ ಹಿಂದೆಯೂ ಬಾಲದೊಂದಿಗೆ ಮಗು ಜನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ:

ಬಾಲದೊಂದಿಗೆ ಮಗು ಜನಿಸಿದ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ.  ವರದಿಗಳ ಪ್ರಕಾರ 2017 ರ ವರೆಗ ಇಂತಹ 195 ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ಬ್ರೆಜಿಲ್ ನಲ್ಲಿ ಹೆಣ್ಣು ಮಗು ಹಾಗೂ 2022 ರಲ್ಲಿ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಬಾಲದೊಂದಿಗೆ ಜನಿಸಿದ ಪ್ರಕರಣವೂ ವರದಿಯಾಗಿದೆ.  ಇದೀಗ ಚೀನಾದಲ್ಲಿಯೂ ಇಂತಹ ಅಚ್ಚರಿಯ ಪ್ರಕರಣ ವರದಿಯಾಗಿದ್ದು, ವೈದ್ಯ ಲೋಕವನ್ನು ಬೆರಗಾಗಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ