Viral News: ಮದುವೆಯಾಗಲು ಬಯಸುತ್ತೇನೆ ಆದರೆ ಹುಡುಗಿಯ ಬಳಿ ಅವೆಲ್ಲ ಇರಬೇಕು ಎಂದ ವರ, ವಿಷಯ ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!

|

Updated on: May 17, 2023 | 4:12 PM

ಇಲ್ಲಿ ಇನ್ನೊಂದು ಟ್ವಿಸ್ಟ್.. 12 ಯುವಾನ್ ಸಂಬಳ ಕೇಳಿದ ಈ ವರಮಹಾಶಯನ ಸಂಬಳ ಎಷ್ಟು ಗೊತ್ತಾ? ಅದು ಕೇವಲ 6 ಸಾವಿರ ಯುವಾನ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 71 ಸಾವಿರ ರೂಪಾಯಿಯಷ್ಟೇ!

Viral News: ಮದುವೆಯಾಗಲು ಬಯಸುತ್ತೇನೆ ಆದರೆ ಹುಡುಗಿಯ ಬಳಿ ಅವೆಲ್ಲ ಇರಬೇಕು ಎಂದ ವರ, ವಿಷಯ ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!
ಮದುವೆಯಾಗಲು ಬಯಸುತ್ತೇನೆ ಆದರೆ ಹುಡುಗಿಯ ಬಳಿ ಅವೆಲ್ಲ ಇರಬೇಕು
Image Credit source: news18.com
Follow us on

ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಹುಡುಗಿಯರು ಸಿಗದ ಕಾರಣ ಹುಡುಗರು ಮದುವೆಯಾಗುವುದಿಲ್ಲ. ಎಷ್ಟೋ ಯುವಕರು ‘ಮದುವೆಯಾಗಲು ಅವಕಾಶ ಕೊಡಿ’ ಎಂದು ಸರಕಾರಕ್ಕೇ ತಮ್ಮ ಅಳಲು ತೋಡಿಕೊಂಡ ಪ್ರಕರಣಗಳನ್ನು ನೋಡಿದ್ದೇವೆ. ಕರ್ನಾಟಕದಲ್ಲಿ ಸರ್ಕಾರ ರಚನೆಯಾದರೆ ಹುಡುಗರನ್ನು ಮದುವೆಯಾಗುವ ಹುಡುಗಿಯರಿಗೆ ನಗದು ಹಣ ನೀಡುವುದಾಗಿಯೂ ಭರವಸೆ ನೀಡಿರುವುದುಂಟು. ಹೀಗಿರುವಾಗ ನಮ್ಮ ನೆರೆಯ ಚೀನಾ ದೇಶದ ಹುಡುಗನೊಬ್ಬ ಚೀನಾ ಗೋಡೆಯಂತೆ ಉದ್ದನೆಯ ಬೇಡಿಕೆಗಳ ಪಟ್ಟಿಯನ್ನೇ ನೀಡಿದ್ದಾನೆ. ಆದರೆ ಅದರಲ್ಲಿ ಬಹುತೇಕವು ಅವಾಸ್ತವಿಕ, ವಿರಳ, ಕಷ್ಟಸಾಧ್ಯ ಎನಿಸುವಂತಹವು. ಹಾಗಾಗಿಯೇ ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಏನು ಚೀನಾ ವರನ ಬೆಡಿಕೆಗಳು? ತನ್ನನ್ನು ಮದುವೆಯಾಗಲಿರುವ ಹುಡುಗಿ ಕೆಲಸದಲ್ಲಿರಬೇಕು. ಅಷ್ಟೇ ಅಲ್ಲ. ಒಂದು ಕಾರು ಮತ್ತು ಬಂಗಲೆಯನ್ನು ಸಹ ಹೊಂದಿರಬೇಕು. ಅದಲ್ಲದೆ, ಹುಡುಗಿ ಯಾವುದೇ ಬ್ಯಾಂಕ್ ಸಾಲಗಳನ್ನು ಹೊಂದಿರಬಾರದು. ಅಂತಹ ಹುಡುಗಿಯನ್ನು ಮಾತ್ರವೇ ತಾನು ಮದುವೆಯಾಗುವುದಾಗಿ ಚೀನಾದ ಹುಡುಗ ಹೇಳುತ್ತಾನೆ. ಇನ್ನಷ್ಟು ವಿವರಗಳು ಈ ಕೆಳಗಿನಂತಿವೆ.

ಚೀನಾದ ಗ್ಯಾಂಗ್ನ್ಯೂಂಗ್ ಪ್ರಾಂತ್ಯದ ಪೆನೆಸ್‌ನ ಯುವಕನೊಬ್ಬ ಕೈಯಲ್ಲಿ ಬ್ಯಾನರ್ ಹಿಡಿದು ಪಾರ್ಕ್‌ನಲ್ಲಿ ನಿಂತುಬಿಟ್ಟಿದ್ದಾನೆ. ಅದರಲ್ಲಿ ತಾನು ವಧುವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ, ಅದಕ್ಕಾಗಿ ಕೆಲವು ಷರತ್ತುಗಳನ್ನು ಹಾಕಿದ್ದಾನೆ. ಅವರ ಪ್ರಕಾರ.. ಹುಡುಗಿ ಮನೆಗೆಲಸದಲ್ಲಿ ಪರಿಣತಿ ಹೊಂದಿರಬೇಕು. ಅದರೊಂದಿಗೆ ಅವಳು ಸಂಪಾದಿಸುತ್ತಿರಬೇಕು. ಆಕೆಯ ವೇತನ ಕನಿಷ್ಠ 12 ಸಾವಿರ ಯುವಾನ್, ಭಾರತೀಯ ಕರೆನ್ಸಿಯಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿಯಷ್ಟಿರಬೇಕು ಎಂದೂ ಅವರು ಹೇಳಿದ್ದಾರೆ.

ಇದಲ್ಲದೆ, ಹುಡುಗಿ ಉತ್ತಮವಾದ ಕಾರು ಮತ್ತು ವಾಸಿಸಲು ಬಂಗಲೆಯನ್ನು ಹೊಂದಿರಬೇಕೆಂದು ಅವನು ಬಯಸಿದ್ದಾನೆ. ಅದಕ್ಕಿಂತ ಹೆಚ್ಚಾಗಿ, ಹುಡುಗಿಗೆ ಯಾವುದೇ ಸಾಲ ಇರಬಾರದು ಎಂದು ಸ್ಪಷ್ಟಪಡಿಸಿದ್ದಾನೆ. ಇಲ್ಲಿ ಇನ್ನೊಂದು ಟ್ವಿಸ್ಟ್.. 12 ಯುವಾನ್ ಸಂಬಳ ಕೇಳಿದ ಈ ವರಮಹಾಶಯನ ಸಂಬಳ ಎಷ್ಟು ಗೊತ್ತಾ? ಅದು ಕೇವಲ 6 ಸಾವಿರ ಯುವಾನ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 71 ಸಾವಿರ ರೂಪಾಯಿಯಷ್ಟೇ! ಇನ್ನು ಆತನಿಗೆ ಸ್ವಂತ ಮನೆಯಾಗಲಿ, ಕಾರು ಇತರೆ ವಾಹನವೇನೂ ಇಲ್ಲ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Wed, 17 May 23