ಗಂಡನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದು 26 ವರ್ಷದ ಯುವತಿಯೊಂದಿಗೆ ಮದುವೆ ಮಾಡಿದ ಖ್ಯಾತ ಗಾಯಕಿ

ಗಾಯಕಿಯಾಗಿ ಗುರುತಿಸಿಕೊಂಡಿರುವ ಈಕೆ ದೇಶ ವಿದೇಶ, ಬೇರೆ ಬೇರೆ ಊರುಗಳಿಗೆ ಸುತ್ತುತ್ತಾ ಇರುತ್ತಾಳೆ. ಇದರಿಂದಾಗಿ ಮನೆಯಲ್ಲಿ ಸಮಯ ಕಳೆಯುವುದು ತೀರಾ ಕಡಿಮೆ. ಪತಿ ಸದಾ ಒಂಟಿಯಾಗಿ ಇರುವುದರಿಂದ ಆತನ ಒಂಟಿತನವನ್ನು ನಿವಾರಿಸಲು ಸಂಗಾತಿ ಹುಡುಕಿ ಮದುವೆ ಮಾಡಿಸಿದ್ದಾಳೆ.

ಗಂಡನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದು 26 ವರ್ಷದ ಯುವತಿಯೊಂದಿಗೆ ಮದುವೆ ಮಾಡಿದ ಖ್ಯಾತ ಗಾಯಕಿ
Malaysian singer Azline Ariffin
Image Credit source: instagram

Updated on: Apr 06, 2024 | 5:26 PM

ಮಲೇಷ್ಯಾದ ಖ್ಯಾತ ಗಾಯಕಿಯೊಬ್ಬಳು ತನ್ನ ಗಂಡನೊಂದಿಗೆ ಸಮಯ ಕಳೆಯಲು ಸಾಧ್ಯವಾಗದ ಕಾರಣ 47 ವರ್ಷದ ಪತಿ ಮೊಹಮ್ಮದ್ ಹಫೀಜಮ್ ಗೆ 26 ವರ್ಷದ ವಧುವನ್ನು ಹುಡುಕಿ ಅದ್ಧೂರಿಯಾಗಿ ವಿವಾಹ ಮಾಡಿಸಿದ್ದಾಳೆ. “ತನ್ನ ಬ್ಯೂಸಿ ಲೈಫ್​ ಮಧ್ಯೆ ತನ್ನ ಗಂಡನನ್ನು ಖಷಿಯಿಂದ ನೋಡಿಕೊಳ್ಳಲು, ಆತನ ಆಸೆಗಳನ್ನು ಪೂರೈಸಲು ತನ್ನಿಂದ ಸಾಧ್ಯವಿಲ್ಲ. ಅದಕ್ಕಾಗಿಯೇ ಗಂಡನಿಗೆ ಮತ್ತೊಂದು ಮದುವೆ ಮಾಡಲು ನಿರ್ಧರಿದೆ” ಎಂದು ಗಾಯಕಿ ಹೇಳಿಕೊಂಡಿರುವುದು ವರದಿಯಾಗಿದೆ. ಈಕೆಯ ಈ ನಿರ್ಧಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಗಂಡನಿಗೆ ಎರಡನೇ ಮದುವೆ ಮಾಡಿಸಿದ ಗಾಯಕಿಯ ಹೆಸರು ಅಜಲೈನ್ ಎರಿಫಿನ್(42). ಗಾಯಕಿಯಾಗಿ ಗುರುತಿಸಿಕೊಂಡಿರುವ ಈಕೆ ದೇಶ ವಿದೇಶ, ಬೇರೆ ಬೇರೆ ಊರುಗಳಿಗೆ ಹೋಗುತ್ತಾ ಇರುತ್ತಾಳೆ. ಇದರಿಂದಾಗಿ ಮನೆಯಲ್ಲಿ ಸಮಯ ಕಳೆಯುವುದು ತೀರಾ ಕಡಿಮೆ. ಪತಿ ಸದಾ ಒಂಟಿಯಾಗಿ ಇರುವುದರಿಂದ ಆತನ ಒಂಟಿತನವನ್ನು ನಿವಾರಿಸಲು ಸಂಗಾತಿ ಹುಡುಕಿ ಮದುವೆ ಮಾಡಿಸಿದ್ದಾಳೆ.

ಇದನ್ನೂ ಓದಿ: ಕಾರಿಗೆ ಚಿಪ್ಸ್ ಪ್ಯಾಕೆಟ್​​​​ನಿಂದ ಅಲಂಕಾರ, ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಮದುಮಗ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಗಾಯಕಿ ಅಜಲೈನಾ ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದು, ಇತ್ತೀಚೆಗಷ್ಟೇ ತನ್ನ ಗಂಡನಿಗೆ ಮದುವೆ ಮಾಡಿಸಿರುವುದರ ಕುರಿತು ಬಹಿರಂಗ ಪಡಿಸಿದ್ದಾಳೆ. “ಪತಿಗೆ ಮರು ಮದುವೆ ಮಾಡಿಸಿದ ಮೇಲೂ ನಾನು ನನ್ನ ಪತಿ ಖುಷಿಯಾಗಿದ್ದೀವಿ. ನಾವು ಮೂವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನ್ನ ಬಿಡುವಿನ ಸಮಯದಲ್ಲಿ ಆತನೊಂದಿಗೆ ಸಮಯ ಕಳೆಯುತ್ತೇನೆ” ಎಂದು ಹೇಳಿಕೊಂಡಿದ್ದಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ