Viral Video : ಅಯ್ಯಯ್ಯೋ! 500 ರೂಪಾಯಿ ನೋಟನ್ನು ಎಗರಿಸಿದ ಖತರ್ನಾಕ್ ಕಾಗೆ, ಮುಂದೇನಾಯಿತು?

ಪ್ರಾಣಿ ಪಕ್ಷಿಗಳು ಮಾಡುವ ಕುಚೇಷ್ಟೆಗಳು ಒಂದೆರಡಲ್ಲ. ಇಂತಹ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದನ್ನು ನೋಡುತ್ತೇವೆ. ಇದೀಗ ಇಂತಹ ವಿಡಿಯೋವೊಂದು ಕಾಗೆಯೊಂದು 500 ರೂಪಾಯಿ ಎಗರಿಸಿ, ಕೊನೆಗೆ ದ್ರಾಕ್ಷಿ ಹಣ್ಣು ಖರೀದಿ ಮಾಡಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Viral Video : ಅಯ್ಯಯ್ಯೋ! 500 ರೂಪಾಯಿ ನೋಟನ್ನು ಎಗರಿಸಿದ ಖತರ್ನಾಕ್ ಕಾಗೆ, ಮುಂದೇನಾಯಿತು?
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2024 | 6:14 PM

ದಿನಬೆಳಗಾದರೆ ಮನೆಯ ಅಂಗಳದಲ್ಲಿ ಹಾರಾಡುತ್ತಾ ಕಾ ಕಾ ಎಂದು ಕೂಗುವ ಈ ಕಾಗೆಗಳನ್ನು ನೋಡುತ್ತಲೇ ಇದೆ. ತನಗೆ ಏನಾದರೂ ಆಹಾರ ಸಿಕ್ಕರೆ ತನ್ನ ಬಳಗವನ್ನು ಕರೆದು ಒಟ್ಟಿಗೆ ತಿನ್ನುವ ಗುಣ ಕಾಗೆಯದ್ದು. ಏನಾದರೂ ಆಹಾರ ಬಿದ್ದದ್ದು ಕಂಡರೆ ಹಾರಿ ಹೋಗಿ ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗಿ ತಿನ್ನುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಾಗೆಯು ಮಹಿಳೆಯು ಇಟ್ಟಿದ್ದ 500 ರೂಪಾಯಿಯನ್ನು ಎಗರಿಸಿದೆ. ಕೊನೆಗೆ ಬುದ್ದಿವಂತಿಕೆಯಿಂದ 500 ರೂಪಾಯಿ ಕೊಟ್ಟು ದ್ರಾಕ್ಷಿ ಹಣ್ಣು ಖರೀದಿ ಮಾಡಿದೆ.

ಮಂಗಳೂರಿನ ರಜನಿ ಶೆಟ್ಟಿಯವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡ ವಿಡಿಯೋ ಇದಾಗಿದೆ. ಈ ವಿಡಿಯೋಗೆ “ನನ್ನ ಕಾಗೆ ಶಾಪಿಂಗ್ ಹೋಗಲು ರೆಡಿಯಾಗಿದೆ ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ರಜನಿಶೆಟ್ಟಿಯವರು, ಮರದ ದಿಮ್ಮಿಯ ಮೇಲೆ 500 ರೂಪಾಯಿ ನೋಟನ್ನು ಇಟ್ಟು ಏನೋ ಕೆಲಸ ಮಾಡಲು ಮುಂದಾಗಿದ್ದಾರೆ. ಆದರೆ ಹಾರುತ್ತಾ ಬಂದ ಕಾಗೆಯು ಆ ನೋಟನ್ನು ಕೊಕ್ಕಿನಲ್ಲಿ ಎತ್ತಿಕೊಂಡು ಹಾರಿಹೋಗಿದೆ.

ಇದನ್ನೂ ಓದಿ: ಗಂಡನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದು 26 ವರ್ಷದ ಯುವತಿಯೊಂದಿಗೆ ಮದುವೆ ಮಾಡಿದ ಖ್ಯಾತ ಗಾಯಕಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮುಂದೇನು ಮಾಡಬೇಕೆಂದು ಗೊತ್ತಾಗದೇ 500 ರೂಪಾಯಿಯನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ಪ್ಲಾನ್ ಮಾಡಿದ್ದಾರೆ. ಆ ಬಳಿಕ ಕಾಗೆಗೆ ಕಲ್ಲಂಗಡಿ ಹಣ್ಣನ್ನು ನೀಡಿದ್ದಾರೆ. ಆದರೆ ಈ ಕಾಗೆ ಮಾತ್ರ ಏನು ಕೊಟ್ಟರೂ 500 ರೂಪಾಯಿ ಬಿಡಲ್ಲ ಎನ್ನುವಂತೆ ಕೂತಿದೆ. ಕೊನೆಗೆ ಕಾಗೆಗೆ ದ್ರಾಕ್ಷಿ ಹಣ್ಣನ್ನು ನೀಡಿದ್ದು, ಕೊಕ್ಕಿನಲ್ಲಿದ್ದ 500 ರೂಪಾಯಿಯನ್ನು ಬಿಟ್ಟು ದ್ರಾಕ್ಷಿಯನ್ನು ತೆಗೆದುಕೊಂಡಿದೆ. 500 ರೂಪಾಯಿ ಸಿಕ್ಕಿತ್ತಲ್ಲ ಎಂದು ರಜನಿ ಶೆಟ್ಟಿಯವರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ