Shocking News: ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ ತಾಯಿ; ಇದು ನೀವು ಹಿಂದೆಂದೂ ಕೇಳಿರದ ಕತೆ

|

Updated on: Aug 21, 2024 | 10:30 PM

Viral News: ಮಗನ ಮದುವೆ ಮಾಡಬೇಕು, ತಮ್ಮ ಮನೆಗೆ ಸೊಸೆ ಬರಬೇಕೆಂಬುದು ಎಲ್ಲ ತಂದೆ-ತಾಯಿಯರ ಆಸೆ. ಇದೇ ರೀತಿ ಸಂತೋಷದಿಂದ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ತಾಯಿಗೆ ತನ್ನ ಮನೆಗೆ ಸೊಸೆಯಾಗಿ ಬರುತ್ತಿರುವವಳು ತಾನೇ ಹೆತ್ತ ಮಗಳು ಎಂಬುದು ಗೊತ್ತಾಗಿದೆ. ಆದರೂ ತನ್ನ ಮಗನಿಗೆ ತನ್ನ ಮಗಳೊಂದಿಗೆ ಆಕೆ ಮದುವೆ ಮಾಡಿಸಿದ್ದಾರೆ. ಈ ಕುರಿತು ಕುತೂಹಲಕಾರಿ ಸಂಗತಿ ಇಲ್ಲಿದೆ.

Shocking News: ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ ತಾಯಿ; ಇದು ನೀವು ಹಿಂದೆಂದೂ ಕೇಳಿರದ ಕತೆ
ಸಾಂದರ್ಭಿಕ ಚಿತ್ರ
Follow us on

ಬೀಜಿಂಗ್: ನಿಜ ಜೀವನದಲ್ಲಿ ಪವಾಡಗಳು ನಡೆಯುತ್ತವೆ ಎಂದು ನಂಬುವ ಅನೇಕ ಜನರು ಈ ಜಗತ್ತಿನಲ್ಲಿದ್ದಾರೆ. ಚೀನಾದಲ್ಲಿ ನಡೆದದ್ದು ಪವಾಡಕ್ಕಿಂತ ಕಡಿಮೆಯೇನಲ್ಲ. ತನ್ನ ಮಗನಿಗೆ ಮದುವೆ ಮಾಡಲು ಹೊರಟಿದ್ದ ತಾಯಿಗೆ ಆಘಾತಕಾರಿ ವಿಷಯವೊಂದು ಬಯಲಾಗಿದೆ. ತನ್ನ ಮಗನಿಗೆ ಮದುವೆ ಮಾಡಲು ಹೊರಟಿದ್ದ ಯುವತಿ ತನ್ನದೇ ಮಗಳು ಎಂಬುದು ಆಕೆಗೆ ಗೊತ್ತಾಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ. ಆಕೆ ಬಹಳ ಹಿಂದೆಯೇ ಕಳೆದುಹೋಗಿದ್ದ ತನ್ನ ಮಗಳನ್ನೇ ಮಗನ ಜೊತೆ ಮದುವೆ ಮಾಡಲು ನಿಶ್ಚಯಿಸಿದ್ದರು. ಈ ವಿಷಯ ತಿಳಿದ ನಂತರವೂ ಆ ತಾಯಿಯೇ ಮುಂದೆ ನಿಂತು ಈ ಮದುವೆ ಮಾಡಿಸಿದ್ದಾರೆ ಎಂಬುದು ಇನ್ನೊಂದು ಅಚ್ಚರಿಯ ಸಂಗತಿ.

20 ವರ್ಷಗಳ ಹಿಂದೆ ಆ ಯುವತಿ ತನ್ನ ತಾಯಿಯಿಂದ ದೂರವಾಗಿದ್ದಳು. 2021ರಲ್ಲಿ ಆಕೆಯ ಮದುವೆ ನಿಶ್ಚಯವಾಗಿದ್ದು, ಆಕೆ ತನಗೇ ಗೊತ್ತಿಲ್ಲದಂತೆ ತನ್ನ ಅಣ್ಣನನ್ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ತಾನು ಹುಟ್ಟಿದ ಮನೆಗೇ ಸೊಸೆಯಾಗಿ ಬರುವವಳಿದ್ದಳು. ಈ ಘಟನೆಯು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಇದನ್ನೂ ಓದಿ: Shocking Video: ದೇವಸ್ಥಾನದೊಳಗೆ ಅಶ್ಲೀಲ ಚಿತ್ರ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ; ಶಾಕಿಂಗ್ ವಿಡಿಯೋ ವೈರಲ್

ವರನ ತಾಯಿ ಮದುವೆಯ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಹೋದಾಗ ಅವರು ಆ ವಧುವಿನ ಕೈಯಲ್ಲಿ ವಿಶಿಷ್ಟವಾದ ಮಚ್ಚೆಯನ್ನು ಗಮನಿಸಿದರು. ಆ ಬಗ್ಗೆ ಕುತೂಹಲಗೊಂಡ ಅವರು ಆ ಹುಡುಗಿಯ ವಂಶಾವಳಿಯನ್ನು ಪ್ರಶ್ನಿಸಿದರು. ಆಗ ಆ ವಧುವಿನ ಪೋಷಕರು ಆಕೆಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವುದನ್ನು ಕಂಡು 20 ವರ್ಷದ ಹಿಂದೆ ಆಕೆಯನ್ನು ದತ್ತು ಪಡೆದಿದ್ದರು ಎಂದು ಗೊತ್ತಾಗಿದೆ. ಆಗ ವರನ ತಾಯಿಗೆ ತನ್ನ ಸೊಸೆಯಾಗಿ ಬರಬೇಕಾದವಳು ತನ್ನ ಬಹುಕಾಲದ ಹಿಂದೆ ಕಳೆದುಹೋದ ಮಗಳು ಎಂದು ಗೊತ್ತಾಗಿ ಆಶ್ಚರ್ಯಚಕಿತರಾಗಿದ್ದಾರೆ. ಈ ಕುರಿತು ಮನೆಯವರಿಗೆಲ್ಲ ಹೇಳಿದ ಆಕೆ ಮದುವೆಯನ್ನು ಖುಷಿಯಿಂದಲೇ ಮಾಡಿದ್ದಾರೆ!

ಇದನ್ನೂ ಓದಿ: Shocking News: ಅಮ್ಮನೊಂದಿಗೆ ಬೆಚ್ಚಗೆ ಮಲಗಿದ್ದ 3 ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ!

ಅರೆ, ಅಣ್ಣ-ತಂಗಿಯ ಮದುವೆ ಮಾಡಿದರಾ? ಎಂದು ಆಶ್ಚರ್ಯಪಡಬೇಡಿ. ತನ್ನ ಮಗಳು ಕಾಣೆಯಾದ ನಂತರ ಆ ಮಹಿಳೆ ಗಂಡು ಮಗುವೊಂದನ್ನು ದತ್ತು ಪಡೆದಿದ್ದರು. ಹೀಗಾಗಿ, ಅವರಿಬ್ಬರೂ ಸಂಬಂಧದಲ್ಲಿ ಅಣ್ಣ-ತಂಗಿಯಾದರೂ ಅವರಿಬ್ಬರ ನಡುವೆ ರಕ್ತಸಂಬಂಧ ಇಲ್ಲದ ಕಾರಣದಿಂದ ಈ ಮದುವೆಯನ್ನು ಮುಂದುವರೆಸಲಾಗಿದೆ. ಈ ಮೂಲಕ ಸೊಸೆಯಾಗಿ ಆ ಮನೆ ಸೇರಬೇಕಾಗಿದ್ದ ಯುವತಿ ಮನೆಯ ಮಗಳಾಗಿ ಮತ್ತೆ ತನ್ನ ಮನೆಗೆ ವಾಪಾಸ್ ತೆರಳಿದ್ದಾಳೆ. ಇಷ್ಟು ವರ್ಷ ಮನೆಯ ಮಗನಾಗಿದ್ದ ವರ ಇದೀಗ ಅಳಿಯನಾಗಿ ಅದೇ ಮನೆಯಲ್ಲಿ ವಾಸ ಮಾಡುವಂತಾಗಿದೆ! ತಾಯಿ ಮತ್ತು ಮಗಳ ಈ ಅದ್ಭುತ ಪುನರ್ಮಿಲನವು ಅನೇಕರನ್ನು ಮಂತ್ರಮುಗ್ಧರನ್ನಾಗಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ