Viral News:117 ವರ್ಷ ಬದುಕಿದ್ದ ವಿಶ್ವದ ಅತ್ಯಂತ ಹಿರಿಯ ಮಹಿಳೆ ನಿಧನ
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದ ಮಾರಿಯಾ ಬ್ರನ್ಯಾಸ್ ತನ್ನ 117 ನೇ ವಯಸ್ಸಿನಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ತನ್ನ ಇಳಿ ವಯಸ್ಸಿನಲ್ಲೂ ಕೊರೊನಾ ಮಹಾಮಾರಿ ಜಯಿಸಿ ಬಂದು ಮಾರಿಯಾ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುತ್ತಿದ್ದ ಮಾರಿಯಾ ಬ್ರನ್ಯಾಸ್ ಮೊರೆರಾ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 117 ವರ್ಷ 168 ದಿನ ಬದುಕಿದ್ದ ಮಾರಿಯಾ ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದರು. ಇದಲ್ಲದೇ ಮೂರು ವರ್ಷಗಳ ಹಿಂದೆ ತನ್ನ ಇಳಿ ವಯಸ್ಸಿನಲ್ಲೂ ಕೊರೊನಾ ಮಹಾಮಾರಿ ಜಯಿಸಿ ಬಂದು ಸಖತ್ ಸುದ್ದಿಯಾಗಿದ್ದರು. ಆದರೆ ಈಗ ಮಾರಿಯಾ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ಮಾರ್ಚ್ 4, 1907 ರಂದು ಅಮೆರಿಕದಲ್ಲಿ ಜನಿಸಿದ ಮಾರಿಯಾ ಬ್ರನ್ಯಾಸ್, ಬಳಿಕ ಅವರ ಕುಟುಂಬ ಸ್ಪೇನ್‌ಗೆ ತೆರಳಿ ಅಲ್ಲಿ ನೆಲೆಸಿತು. ತನ್ನ ಜೀವಿತಾವಧಿಯಲ್ಲಿ ಎರಡು ಮಹಾಯುದ್ಧಗಳನ್ನು ಕಂಡಿದ್ದ ಮರಿಯಾ ಚಿಕ್ಕ ವಯಸ್ಸಿನಿಂದಲೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರು.
View this post on Instagram
ಇದನ್ನೂ ಓದಿ: ಸೌಂದರ್ಯ ಹೆಚ್ಚಿಸಲು 6 ಲಕ್ಷ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು
ಇದೀಗ ಮಾರಿಯಾ ಸಾವಿನ ಬಳಿಕ ಜಪಾನ್‌ನ ಟೊಮಿಕಾ ಇಟುಕಾ (116 ವರ್ಷ) ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಇದಲ್ಲದೇ ಟೊಮಿಕಾ ಇಟುಕಾ ಪರ್ವತಾರೋಹಿ ಎಂದು ಪ್ರಸಿದ್ಧರಾಗಿದ್ದಾರೆ. ಏಕೆಂದರೆ ಟೊಮಿಕಾ ಇಟುಕಾ ಜಪಾನ್‌ನ 3,067 ಮೀಟರ್ ಎತ್ತರದ ಮೌಂಟ್ ಒಂಟೇಕ್ ಅನ್ನು ಎರಡು ಬಾರಿ ಏರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 am, Thu, 22 August 24