ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದ ಯುವತಿಯೊಬ್ಬಳು ಇದೀಗ ಶ್ರೀ ಕೃಷ್ಣನ ಮೂರ್ತಿಯನ್ನೇ ವಿವಾಹವಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈಕೆಯ ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾಳೆ.
ಗ್ವಾಲಿಯರ್ ನಗರದ ನ್ಯೂ ಬ್ರಜ್ ವಿಹಾರ್ ಕಾಲೋನಿಯ ಶಿವಾನಿ ಪರಿಹಾರ್ (23) ಬಿಕಾಂ ಮುಗಿಸಿದ್ದಾರೆ. ಆಕೆಯ ತಂದೆ ರಾಮ್ ಪ್ರತಾಪ್ ಪರಿಹಾರ್ ಮತ್ತು ತಾಯಿ ಮೀರಾ ಪರಿಹಾರ್ ಅವರು ಮದುವೆಯನ್ನು ಪ್ರಾರಂಭದಲ್ಲಿ ವಿರೋಧಿಸಿದ್ದರು. ಆದರೆ ಅವರ ಮಗಳ ಹಠಮಾರಿತನದಿಂದಾಗಿ ಅವರೂ ಕೊನೆಗೆ ಒಪ್ಪಬೇಕಾಯಿತು. ಎಪ್ರಿಲ್ 18 ರಂದು ಶಿವಾನಿಯ ವಿವಾಹವು ಕೃಷ್ಣನೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿತು.
ಇದನ್ನೂ ಓದಿ: ಮಹಿಳಾ ರಿಪೋರ್ಟರ್ಗೆ ಬಲವಂತವಾಗಿ ಹಿಜಾಬ್ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ
ಏಪ್ರಿಲ್ 15ರಂದು ಶಿವಾನಿ ಮದುವೆ ಸಂಭ್ರಮ ಶುರುವಾಗಿತ್ತು. ಮೊದಲ ದಿನ 16 ರಂದು ಮಂಟಪಕ್ಕೆ ಹಳದಿ ಹೂ ಹಾಕುವ ಕಾರ್ಯಕ್ರಮ, ಏಪ್ರಿಲ್ 17 ರಂದು ಮದುವೆ ಮೆರವಣಿಗೆ ಮತ್ತು ಏಪ್ರಿಲ್ 18 ರಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಯಿತು. ಶಿವಾನಿಯ ಪೋಷಕರು ತಮ್ಮ ಮಗಳನ್ನು ಸಂತೋಷದಿಂದ ಕಳುಹಿಸುತ್ತಾರೆ. ಇಂತಹ ಅಪರೂಪದ ವಿವಾಹ ಸಮಾರಂಭವನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ನೆರೆದಿದ್ದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ