ವೈದ್ಯೋ ನಾರಾಯಣೋ ಹರಿಃ ಅಂತಾರೆ, ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ, ಆದರೆ ವೈದ್ಯರು ಮಾಡುವ ತಪ್ಪಿನಿಂದ ರೋಗಿಯು ಜೀವನಪೂರ್ತಿ ನರಳುವಂತಾದರೆ, ಆಸ್ಪತ್ರೆಗೆ ಹೋಗಲು ರೋಗಿಗೆ ಧೈರ್ಯ ಬರುವುದೇ? ಗಡ್ಡೆ ಇದೆ ಎಂದು ಹೇಳಿ ಗುಪ್ತಾಂಗವನ್ನೇ ಕತ್ತರಿಸಿ ಬಳಿಕ ಕ್ಯಾನ್ಸರ್ ಇಲ್ಲ ಎಂದು ಹೇಳಿರುವ ಘಟನೆ ಇಟಲಿಯಲ್ಲಿ ನಡೆದಿದೆ. ವೈದ್ಯರು ನೀಡಿರುವ ಸಲಹೆಯಂತೆ, ಟ್ಯೂಮರ್ ಇರುವ ಶಂಕೆ ಮೇರೆಗೆ ರೋಗಿಯು ಗುಪ್ತಾಂಗದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದ.
ಶಸ್ತ್ರ ಚಿಕಿತ್ಸೆ ಬಳಿಕ ಗಡ್ಡೆಯಿಲ್ಲವೆಂದು ತಿಳಿದಾಗ ಶಾಕ್ ಆಗಿದ್ದಾನೆ. ಇಟಲಿಯ ವ್ಯಕ್ತಿಗೆ ಕೆಲ ದಿನಗಳಿಂದ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರು ಹಲವು ಪರೀಕ್ಷೆಗಳನ್ನು ಮಾಡಿದ ಬಳಿಕ ಗುಪ್ತಾಂಗದಲ್ಲಿ ಗಡ್ಡೆ ಬೆಳೆದಿದೆ ಶಸ್ತ್ರ ಚಿಕಿತ್ಸೆ ಮಾಡಿಯೇ ತೆಗೆಯಬೇಕು ಎಂದು ನಂಬಿಸಿದ್ದರು. ಅದಕ್ಕೊಪ್ಪಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಗಡ್ಡೆಯೇ ಇರಲಿಲ್ಲ ಎನ್ನುವ ಸಂಗತಿ ತಿಳಿದುಬಂದಿತ್ತು.
ಮತ್ತಷ್ಟು ಓದಿ: ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಟ್ರಾಕ್ಟರ್, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ
60 ವರ್ಷದ ವ್ಯಕ್ತಿಗೆ ಸಿಫಿಲಿಸ್ ಇತ್ತು ಅದನ್ನು ಔಷಧಿಗಳಿಂದ ಗುಣಪಡಿಸಬಹುದಿತ್ತು, ಆದರೆ ಗುಪ್ತಾಂಗವನ್ನೇ ಕಳೆದುಕೊಳ್ಳಬೇಕಾಯಿತು. ಇಟಲಿಯ ಆರೋಗ್ಯ ಇಲಾಖೆಯು ವೈದ್ಯರ ವಿರುದ್ಧ ತನಿಖೆ ಆರಂಭಿಸಿದೆ. ಮಾರ್ಚ್ 9 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಕಳೆದ ವರ್ಷ ಯುರೋಪ್ನಲ್ಲಿ ಇಂಥದ್ದೇ ಘಟನೆ ನಡೆದಿತ್ತು, ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ಜನನಾಂಗವನ್ನೇ ತೆಗೆದುಹಾಕಲಾಯಿತು. ರೋಗಿಯು ಕೋರ್ಟ್ ಮೆಟ್ಟಿಲೇರಿದಾಗ ವ್ಯಕ್ತಿಗೆ 62,000 ಯೂರೋ ಪರಿಹಾರವನ್ನು ಪಾವತಿಸಲು ಆದೇಶಿಸಿತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ