Viral Video: ಪ್ರಾಣಿ, ಪಕ್ಷಿಗಳಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆ ಅಲ್ವಾ, ಇಲ್ಲಿದೆ ಹೃದಯಸ್ಪರ್ಶಿ ವಿಡಿಯೊ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿಗಳ ಕುರಿತು ನಿಮ್ಮನ್ನು ನಗಿಸುವ ಹಾಗೂ ಹೃದಯಸ್ಪರ್ಶಿ ವೀಡಿಯೊವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಪ್ರಾಣಿ, ಪಕ್ಷಿಗಳಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆ ಅಲ್ವಾ, ಇಲ್ಲಿದೆ ಹೃದಯಸ್ಪರ್ಶಿ ವಿಡಿಯೊ
ವೈರಲ್ ವಿಡಿಯೊ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 06, 2023 | 11:59 AM

ಪ್ರಾಣಿ ಪಕ್ಷಿಗಳನ್ನು ಪಂಜರದಿಂದ ಬಿಡಿಸಿ ಅವುಗಳ ಆವಾಸಸ್ಥಾನವಾದ ಅರಣ್ಯಗಳಲ್ಲಿ ಅವುಗಳನ್ನು ಸ್ವಚ್ಛಂದವಾಗಿ ಓಡಾಡಲು ಸ್ವಾತಂತ್ರ್ಯ ನೀಡಿದರೆ ಆ ಮುಗ್ಧ ಜೀವಿಗಳು ಎಷ್ಟು ಸಂತೋಷ ಪಡುತ್ತದೆ ಅಲ್ವಾ. ಅಂತಹದ್ದೆ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನುಷ್ಯನಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ತನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯವಿದೆ. ಆದರೆ ಮನುಷ್ಯನಾದವನು ಕಾಡಿನಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡು, ಓಡಾಡಿಕೊಂಡು ಇರಬೇಕಾಗಿದ್ದ ಪ್ರಾಣಿ ಪಕ್ಷಿಗಳನ್ನು ಪ್ರಾಣಿ ಸಂಗ್ರಹಾಲಯಗಳಲ್ಲಿ ಪಂಜರಗಳಲ್ಲಿಟ್ಟು, ಮುಗ್ಧ ಪ್ರಾಣಿಗಳ ಸ್ವಾತಂತ್ರ್ಯವನ್ನು ಕಸಿದಿದ್ದಾನೆ. ಅದೃಷ್ಟವಶಾತ್ ಈ ಜೀವಿಗಳ ರಕ್ಷಣೆಯನ್ನು ಮಾಡುವ ಒಳ್ಳೆಯ ಮನಸ್ಸಿನ ಮನುಷ್ಯರೂ ಕೂಡಾ ಇದ್ದಾರೆ. ಇಂತಹ ಮನ ಮುಟ್ಟುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇತ್ತೀಚಿಗೆ, ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿಗಳ ಕುರಿತು ನಿಮ್ಮನ್ನು ನಗಿಸುವ ಹಾಗೂ ಹೃದಯಸ್ಪರ್ಶಿ ವೀಡಿಯೊವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸುಂದರವಾದ ವೀಡಿಯೊ ಕ್ಲಿಪ್ ಪ್ರಾಣಿ ಪಕ್ಷಿಗಳನ್ನು ಅವುಗಳ ರಕ್ಷಕರು ಪಂಜರದಿಂದ ಕಾಡಿಗೆ ಬಿಡುವುದನ್ನು ಹಾಗೂ ಆ ಮುಗ್ಧ ಸ್ವಾತಂತ್ರ್ಯ ಸಂತೋಷವನ್ನು ತೋರಿಸುತ್ತದೆ. ‘ಸ್ವಾತಂತ್ರ್ಯವು ಈ ರೀತಿಯಾಗಿ ಕಾಣುತ್ತದೆ’ ಎಂಬ ಶೀರ್ಷಿಕೆಯಡಿಯಲ್ಲಿ ಐಎಫ್‌ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 2 ನಿಮಿಷಗಳ ಈ ವೀಡಿಯೊ ಕ್ಲಿಪ್ ಪ್ರಾಣಿಗಳ ಗುಂಪನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುವುದನ್ನು ತೋರಿಸುತ್ತದೆ.

ಇದನ್ನೂ ಓದಿ: Viral Vieo: ಶರವೇಗದಲ್ಲಿ ಓಡಿ ಪುಟ್ಟ ಪ್ರಾಣಿಯನ್ನು ಬೇಟೆಯಾಡಿದ ಚೀತಾ; ಧೂಳು ಎಬ್ಬಿಸಿದ ವಿಡಿಯೋ ವೈರಲ್

ವೈರಲ್ ಆಗಿರುವ ಈ ವಿಡಿಯೊ ಕ್ಲಿಪ್ 13 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 24 ಸಾವಿರ ಲೈಕ್ಸ್ ಮತ್ತು 3900 ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೊ ನೆಟ್ಟಿಗರ ಮನಗೆದ್ದಿದೆ. ಜೊತೆಗೆ ಅನೇಕರು ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಜೀವನದ ಸ್ವಾತಂತ್ರ್ಯವು ಪ್ರಪಂಚದ ಪ್ರತಿಯೊಬ್ಬ ಜೀವಿಗೂ ಇದೆ. ಯಾರು ಎಂದಿಗೂ ಪಂಜರದಲ್ಲಿರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಸುಂದರ ವೀಡಿಯೊ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೂ ಹೆಚ್ಚಿನವರು ಪ್ರತಿಯೊಂದು ಜೀವಿಗೂ ಈ ಭೂಮಿಯ ಮೇಲೆ ತನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.

Published On - 11:57 am, Mon, 6 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್