Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Vieo: ಶರವೇಗದಲ್ಲಿ ಓಡಿ ಪುಟ್ಟ ಪ್ರಾಣಿಯನ್ನು ಬೇಟೆಯಾಡಿದ ಚೀತಾ; ಧೂಳು ಎಬ್ಬಿಸಿದ ವಿಡಿಯೋ ವೈರಲ್

ಚೀತಾ ಶರವೇಗದಲ್ಲಿ ಬೇಟೆಯಾಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚೀತಾ ಬೇಟೆಯ ವಿಡಿಯೋ ವೈರಲ್ ಆಗಿದೆ. ಆದ್ರೆ ಚೀತಾದ ಈ ದಾಳಿ ವಿಭಿನ್ನವಾಗಿದೆ.

Viral Vieo: ಶರವೇಗದಲ್ಲಿ ಓಡಿ ಪುಟ್ಟ ಪ್ರಾಣಿಯನ್ನು ಬೇಟೆಯಾಡಿದ ಚೀತಾ; ಧೂಳು ಎಬ್ಬಿಸಿದ ವಿಡಿಯೋ ವೈರಲ್
ಚೀತಾ ಬೇಟೆಯ ವೈರಲ್ ವಿಡಿಯೋ ದೃಶ್ಯಗಳು
Follow us
ಆಯೇಷಾ ಬಾನು
|

Updated on:Mar 06, 2023 | 11:29 AM

ಡಿಸ್ಕವರಿ ಚಾನೆಲ್ ನೋಡುವವರಿಗೆ ಕಾಡು ಪ್ರಾಣಿಗಳ ಬೇಟೆ, ದಾಳಿ, ಚಲನ-ವಲನ ಸೇರಿದಂತೆ ವನ್ಯಜೀವಿಗಳ ಬಗ್ಗೆ ಸ್ವಲ್ಪ ಆದರೂ ಮಾಹಿತಿ ಇರುತ್ತೆ. ದೂರದರ್ಶನಗಳಲ್ಲಿ ಪ್ರಸಾರ ಆಗುವ ಈ ಕಾರ್ಯಕ್ರಮಗಳು ಪ್ರಕೃತಿ ಮತ್ತು ಅದರ ಸೃಷ್ಟಿಯ ಬಗ್ಗೆ ಸಾಕಷ್ಟು ಜ್ಞಾನ ಮತ್ತು ಮಾಹಿತಿಯನ್ನು ನೀಡುತ್ತವೆ. ಈ ಕಾರ್ಯಕ್ರಮಗಳು ನಮಗೆ ಅನೇಕ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಇತ್ಯಾದಿಗಳ ಜೀವನಶೈಲಿ, ಆವಾಸಸ್ಥಾನ, ಗುಣಲಕ್ಷಣಗಳು ಮತ್ತು ವಿಶಿಷ್ಟ ಲಕ್ಷಣಗಳನ್ನು ಕಲಿಸಿಕೊಡುತ್ತವೆ. ಸಿಂಹಗಳು, ಹುಲಿಗಳು, ಹದ್ದುಗಳು, ಗೂಬೆಗಳು, ಚಿರತೆಗಳು ಸೇರಿದಂತೆ ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳ ಬೇಟೆಯ ಕೌಶಲ್ಯವು ಅತ್ಯಂತ ಆಸಕ್ತಿದಾಯಕ ಮತ್ತು ಆಕರ್ಷಕ ಭಾಗಗಳಲ್ಲಿ ಒಂದಾಗಿದೆ. ಚೀತಾ ಶರವೇಗದಲ್ಲಿ ಬೇಟೆಯಾಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚೀತಾ ಬೇಟೆಯ ವಿಡಿಯೋ ವೈರಲ್ ಆಗಿದೆ. ಆದ್ರೆ ಚೀತಾದ ಈ ದಾಳಿ ವಿಭಿನ್ನವಾಗಿದೆ.

ಚೀತಾವನ್ನು ಬೆಕ್ಕಿನ ಜಾತಿಯ ದೊಡ್ಡ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಇವು ಹೆಚ್ಚಾಗಿ ಆಫ್ರಿಕಾ ಮತ್ತು ನೈಋತ್ಯ ಏಷ್ಯಾದಲ್ಲಿ ಕಂಡುಬರುತ್ತದೆ. ಇದು 110 ಕಿಮೀ ವೇಗವನ್ನು ತಲುಪುವ ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ. ಇವುಗಳು ತಮ್ಮ ಶರವೇಗದ ಓಟದ ಮೂಲಕವೇ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುತ್ತವೆ. ಇವು ಹೆಚ್ಚಾಗಿ ಬೇಟೆಯಾಡಲು ವೇಗವನ್ನು ಅವಲಂಬಿಸಿದೆ. ಚಿರತೆಯ ಬೇಟೆಯ ಹಲವು ವಿಡಿಯೋಗಳನ್ನು ನಾವು ನೋಡಿದ್ದೇವೆ ಆದರೆ ಈ ವೈರಲ್ ವಿಡಿಯೋದಲ್ಲಿ ಸೆರೆಯಾಗಿರುವುದು ಬಹುತೇಕ ನೈಜ ಸಮಯದಲ್ಲಿ ಚೀತಾ ನಂಬಲಾಗದ ವೇಗ, ಚುರುಕುತನ ಮತ್ತು ನಿಖರತೆಯ ಮೂಲಕ ಮತ್ತೊಂದು ಪ್ರಾಣಿಯನ್ನು ಬೇಟೆಯಾಡುವ ದೃಶ್ಯ. ಇದು ಇತರೆ ವಿಡಿಯೋಗಳಿಗಿಂತ ಭಿನ್ನವಾಗಿದೆ.

ಇದನ್ನೂ ಓದಿ:  Viral Video: ಇದ್ದಕಿಂದಂತೆ ಶೋರೂಮ್​ಗೆ ನುಗ್ಗಿದ ಪಾರ್ಕಿಂಗ್​ನಲ್ಲಿ ನಿಂತಿದ್ದ ಟ್ರಾಕ್ಟರ್​; ಎದೆ ಜಲ್ ಎನಿಸುವ ದೃಶ್ಯಾವಳಿ, ಮುಂದೇನಾಯ್ತು? 

Solo para Curiosos @Solocuriosos_1 ಎಂಬ ಟ್ವಿಟರ್ ಖಾತೆಯಲ್ಲಿ “Velocidad y fuerza (ವೇಗ ಮತ್ತು ಶಕ್ತಿ)” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಚೀತಾ ವೇಗವಾಗಿ ಓಡುತ್ತಿರುವ ಚಿಕ್ಕದೊಂದು ಪ್ರಾಣಿಯನ್ನು ಬೆನ್ನಟ್ಟು ಓಡುತ್ತೆ. ಬಳಿಕ ತಕ್ಷಣವೇ ಸಡನ್ ಬ್ರೇಕ್ ಹಾಕಿ ತನ್ನ ಶರವೇಗದ ಓಟವನ್ನು ನಿಯಂತ್ರಿಸಿ ಹಿಂತಿರುಗಿ ಆ ಚಿಕ್ಕ ಸರಿಸೃಪವನ್ನು ಹಿಡಿಯುತ್ತೆ. ಈ ವಿಡಿಯೋ ಯೋಚಕವಾಗಿದ್ದು ಅನೇಕರು ಮೆಚ್ಚಿಕೊಂಡಿದ್ದಾರೆ. ಹಾಗೂ ಚೀತಾದ ವೇಗಕ್ಕೆ ಮನಸೋತಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:29 am, Mon, 6 March 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ