Viral Video: ಇದ್ದಕ್ಕಿದ್ದಂತೆ ಶೋರೂಮ್​ಗೆ ನುಗ್ಗಿದ ಟ್ರಾಕ್ಟರ್​; ಎದೆ ಝಲ್ ಎನಿಸುವ ದೃಶ್ಯಾವಳಿ, ಮುಂದೇನಾಯ್ತು?

ಚಪ್ಪಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಟ್ರಾಕ್ಟರ್ ಇದ್ದಕ್ಕಿದ್ದಂತೆ ತಾನಾಗಿಯೇ ಸ್ಟಾರ್ಟ್​ ಆಗಿ ಅಂಗಡಿಯೊಳಗೆ ನುಗ್ಗಿದೆ. ಘಟನೆಯಲ್ಲಿ ಶೋರೂಮ್‌ನ ಗ್ಲಾಸ್​ಗಳು ಪುಡಿ ಪುಡಿಯಾಗಿವೆ.

Viral Video: ಇದ್ದಕ್ಕಿದ್ದಂತೆ ಶೋರೂಮ್​ಗೆ ನುಗ್ಗಿದ ಟ್ರಾಕ್ಟರ್​; ಎದೆ ಝಲ್ ಎನಿಸುವ ದೃಶ್ಯಾವಳಿ, ಮುಂದೇನಾಯ್ತು?
ಅಂಗಡಿಗೆ ನುಗ್ಗಿದ ಚಾಲಕನಿಲ್ಲದ ಟ್ಯಾಕ್ಟರ್
Follow us
ಆಯೇಷಾ ಬಾನು
| Updated By: Digi Tech Desk

Updated on:Mar 07, 2023 | 10:47 AM

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವಂತಹ, ಭಯ ಭೀತರನ್ನಾಗಿಸುವ ವಿಡಿಯೋಗಳು ಹರಿದಾಡುತ್ತಿರುತ್ತವೆ. ಪಾರ್ಕ್ ಮಾಡಲಾಗಿದ್ದ ಟ್ರ್ಯಾಕ್ಟರ್​ ಇದ್ದಕ್ಕಿದ್ದಂತೆಯೇ ಸ್ಟಾರ್ಟ್​ ಆಗಿ ಅಂಗಡಿಯೊಂದಕ್ಕೆ ನುಗ್ಗಿ ಅಂಗಡಿಯ ಮುಂಭಾಗದ ಗಾಜನ್ನು ಪೀಸ್ ಪೀಸ್ ಮಾಡಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎದೆ ಜಲ್ ಎನಿಸುವಂತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಚಪ್ಪಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಟ್ರಾಕ್ಟರ್ ಇದ್ದಕ್ಕಿದ್ದಂತೆ ತಾನಾಗಿಯೇ ಸ್ಟಾರ್ಟ್​ ಆಗಿ ಅಂಗಡಿಯೊಳಗೆ ನುಗ್ಗಿದೆ. ಘಟನೆಯಲ್ಲಿ ಶೋರೂಮ್‌ನ ಗ್ಲಾಸ್​ಗಳು ಪುಡಿ ಪುಡಿಯಾಗಿವೆ. ಹಾಗೂ ಹಲವು ಸೈಕಲ್‌ಗಳು ಜಖಂಗೊಂಡಿವೆ. ಟ್ವಿಟ್ಟರ್ ಖಾತೆಯೊಂದರಲ್ಲಿ ಒಂದು ನಿಮಿಷದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಟ್ರಾಕ್ಟರ್ ಅಂಗಡಿಯೊಳಕ್ಕೆ ನುಗ್ಗುತ್ತಿರುವುದು ತಿಳಿಯುತ್ತಿದ್ದಂತೆ ಅಂಗಡಿಯವರು ಭಯದಿಂದ ಹೊರಗೆ ಓಡಿ ಟ್ರ್ಯಾಕ್ಟರ್ ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಅಷ್ಟರಲ್ಲಾಗಲೇ ಟ್ರ್ಯಾಕ್ಟರ್ ಮತ್ತಷ್ಟು ಮುಂದಕ್ಕೆ ಬಂದು ಅಂಗಡಿಯ ಗಾಜನ್ನು ಪುಡಿ ಮಾಡಿತ್ತು. ಕೊನೆಗೆ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಹೋಗಿ ಟ್ರ್ಯಾಕ್ಟರ್‌ ಎಂಜಿನ್ ಆಫ್‌ ಮಾಡುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಈ ಮಳಿಗೆಯವರಿಗೆ ಸಾಕಷ್ಟು ನಷ್ಟವಾಗಿದೆ. ಹಾಗೂ ಕೆಲವು ಸೈಕಲ್‌ಗಳು ಪುಡಿ ಪುಡಿಯಾಗಿವೆ.

ಇದನ್ನೂ ಓದಿ: Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್​​

ಸಮಾಧಾನ್ ದಿವಸ್ ಕಾರ್ಯಕ್ರಮ ನಡೆಯುತ್ತಿದ್ದ ಬಿಜ್ನೋರ್ ಕೊತ್ವಾಲಿ ಸಿಟಿ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಅನೇಕರು ತಮ್ಮ ಕಾರುಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಆ ಪ್ರದೇಶದಲ್ಲಿ ಪಾರ್ಕ್ ಮಾಡಿ ಕಾರ್ಯಕ್ರಮಕ್ಕೆ ತೆರಳಿದ್ದರು. ಕಿಶನ್ ಕುಮಾರ್ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಇಷ್ಟೊಂದು ಅವಘಡಕ್ಕೆ ಕಾರಣವಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:26 am, Mon, 6 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ