ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಟ್ರಾಕ್ಟರ್, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಶೂ ಶಾಪ್ ಹೊರಗೆ ನಿಂತಿದ್ದ ಟ್ರಾಕ್ಟರ್ ಡ್ರೈವರ್ ಇಲ್ಲದೇ ಏಕಾಏಕಿ ಸ್ಟಾರ್ಟ್ ಆಗಿದೆ. ಮುಂದೇನಾಯಿತು? ಇಲ್ಲಿದೆ ನೋಡಿ ವೈರಲ್ ವಿಡಿಯೋ.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಶೂ ಶಾಪ್ ಹೊರಗೆ ನಿಂತಿದ್ದ ಟ್ರಾಕ್ಟರ್ ಡ್ರೈವರ್ ಇಲ್ಲದೇ ಏಕಾಏಕಿ ಸ್ಟಾರ್ಟ್ ಆಗಿದೆ. ಮುಂದೇನಾಯಿತು? ಇಲ್ಲಿದೆ ನೋಡಿ ವೈರಲ್ ವಿಡಿಯೋ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಟ್ರ್ಯಾಕ್ಟರ್ ಮುಂದೆ ಪಾರ್ಕ್ ಮಾಡಲಾದ ಗಾಡಿಗಳಿಗೆ ಹಾನಿ ಮಾಡಿ, ಅಂಗಡಿಯ ಗಾಜಿಯ ಬಾಗಿಲನ್ನು ಒಡೆದು ಒಳಗೆ ಬಂದಿರುವುದನ್ನು ಕಾಣಬಹುದು. ಘಟನೆ ಹೇಗೆ ನಡೆಯಿತು ಮತ್ತು ಟ್ರಾಕ್ಟರ್ ದೆವ್ವ ಹಿಡಿದಿದೆಯೇ ಎಂದು ಹಲವರು ಆಶ್ಚರ್ಯ ಪಡುವಂತೆ ಮಾಡಿದೆ.
#टैक्टर_पर_भूत…!#Bijnor में जूते के शो- रूम के सामने खड़ा ट्रैक्टर अचानक से अपने आप स्टार्ट होकर शीशा तोड़ते हुए शो- रूम में घुस गया,जबकि ट्रैक्टर पर कोई बैठा नहीं था. पूरी घटना #CCTV फुटेज में कैद…#Ghost pic.twitter.com/GOch3jruQf
— Tushar Rai (@tusharcrai) March 1, 2023
ಒಂದು ನಿಮಿಷದ ವೀಡಿಯೊದಲ್ಲಿ ಕೆಂಪು ಬಣ್ಣದ ಟ್ರಾಕ್ಟರ್ ತನ್ನ ವೇಗವನ್ನು ಹೆಚ್ಚಿಸಿಕೊಂಡು ಅದರ ಮುಂದೆ ನಿಂತಿದ್ದ ಬೈಕು ಮತ್ತು ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ನಂತರ ಅಂಗಡಿಯವನು ಹೊರಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ, ಏಕೆಂದರೆ ಟ್ರ್ಯಾಕ್ಟರ್ ಗಾಜಿನ ಬಾಗಿಲುಗಳನ್ನು ಒಡೆದು ಶೂ ಸ್ಟ್ಯಾಂಡ್‌ಗೆ ಸಿಲುಕಿಕೊಂಡಿತು. ಟ್ರಾಕ್ಟರ್ ನಿಲ್ಲಿಸಲು ಶೋರೂಂನಲ್ಲಿರುವ ಕೆಲಸಗಾರರರು ಹೊರಗೆ ಧಾವಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡ ಈ ಶ್ವಾನದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ವಿಡಿಯೋ
ನಂತರ ಬ್ರೇಕ್ ಹಾಕಿ ಟ್ರ್ಯಾಕ್ಟರ್ ನಿಲ್ಲಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೇಳಿಬರುತ್ತಿದೆ. ತಂತಿಗಳನ್ನು ಕತ್ತರಿಸಿ ಟ್ರಾಕ್ಟರ್‌ನ ಇಂಜಿನ್ ಆಫ್ ಮಡಲಾಗಿದೆ. ಹಾನಿಗೆ ಪರಿಹಾರ ನೀಡುವಂತೆ ಶೋರೂಂ ಮ್ಯಾನೇಜರ್ ಟ್ರ್ಯಾಕ್ಟರ್ ಮಾಲೀಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:48 am, Sun, 5 March 23