AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Shaurya: ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಪುಂಡನಿಗೆ ಕ್ಲಾಸ್​ ತೆಗೆದುಕೊಂಡ ನಾಗ ಶೌರ್ಯ; ವಿಡಿಯೋ ವೈರಲ್​

Naga Shaurya Viral Video: ಯುವತಿಯ ಮೇಲೆ ಹುಡುಗನೊಬ್ಬ ಕೈ ಮಾಡಿದ್ದಾನೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಗ ಶೌರ್ಯ ಅವರು ಆತನ ವಿರುದ್ಧ ಗರಂ ಆಗಿದ್ದಾರೆ.

Naga Shaurya: ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಪುಂಡನಿಗೆ ಕ್ಲಾಸ್​ ತೆಗೆದುಕೊಂಡ ನಾಗ ಶೌರ್ಯ; ವಿಡಿಯೋ ವೈರಲ್​
ನಾಗ ಶೌರ್ಯ
ಮದನ್​ ಕುಮಾರ್​
|

Updated on:Feb 28, 2023 | 7:51 PM

Share

ತೆಲುಗು ಚಿತ್ರರಂಗದಲ್ಲಿ ನಟ ನಾಗ ಶೌರ್ಯ (Naga Shaurya) ಅವರು ಹೀರೋ ಆಗಿ ಮಿಂಚುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅವರು 2023ರಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ವಿಶೇಷ ಏನೆಂದರೆ ಅವರು ರಿಯಲ್​ ಲೈಫ್​ನಲ್ಲಿಯೂ ಹೀರೋ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇಂದು (ಫೆ.28) ನಡೆದ ಒಂದು ಘಟನೆ. ನಡು ಬೀದಿಯಲ್ಲಿ ಯುವತಿಯೊಬ್ಬಳ ಮೇಲೆ ಪುಂಡನೊಬ್ಬ ಕೈ ಮಾಡಿದ್ದಾನೆ. ಅದನ್ನು ನೋಡಿದ ನಾಗ ಶೌರ್ಯ ಅವರು ಕೂಡಲೇ ಆ ಹುಡುಗಿಯ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೇ, ಹಲ್ಲೆ (Assault) ಮಾಡಿದ ಹುಡುಗನಿಗೆ ಚಳಿ ಬಿಡಿಸಿದ್ದಾರೆ. ಈ ವಿಡಿಯೋ (Naga Shaurya Viral Video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಏನಿದು ಘಟನೆ?

ನಾಗ ಶೌರ್ಯ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ರಸ್ತೆಯಲ್ಲಿ ಇಬ್ಬರು ಜಗಳ ಮಾಡುತ್ತಿರುವುದು ಅವರ ಗಮನಕ್ಕೆ ಬಂತು. ಯುವತಿಯ ಮೇಲೆ ಹುಡುಗನೊಬ್ಬ ಕೈ ಮಾಡಿದ್ದಾನೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಗ ಶೌರ್ಯ ಅವರು ಆತನಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಯುವತಿಯನ್ನು ರಕ್ಷಿಸಿದ ಬಳಿಕ ಆಕೆಯ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಇದು ಪ್ರೇಮಿಗಳ ಜಗಳ:

ರಸ್ತೆಯಲ್ಲಿ ಹೀಗೆ ಕಿತ್ತಾಡಿಕೊಂಡಿರುವುದು ಯಾರೋ ಅಪರಿಚಿತರಲ್ಲ. ಅವರಿಬ್ಬರು ಪ್ರೇಮಿಗಳು. ಆಕೆಗೆ ಯಾಕೆ ಹೊಡೆದೆ ಎಂದು ನಾಗ ಶೌರ್ಯ ಕೇಳಿದ್ದಕ್ಕೆ, ‘ಅವಳು ನನ್ನ ಲವರ್​’ ಎಂದು ಯುವಕ ಎಗರಾಡಿದ್ದಾನೆ. ‘ಲವರ್​ ಆದ ಮಾತ್ರಕ್ಕೆ ನಡು ರಸ್ತೆಯಲ್ಲಿ ಹುಡುಗಿಯ ಮೇಲೆ ಕೈ ಮಾಡುತ್ತೀಯಾ?’ ಎಂದು ನಾಗ ಶೌರ್ಯ ಗರಂ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅನುಷಾ ಶೆಟ್ಟಿ-ನಾಗ ಶೌರ್ಯ ಮದುವೆ; ವೈರಲ್​ ಆಯ್ತು ವಿವಾಹದ ವಿಡಿಯೋ

ಕ್ಷಮೆ ಕೇಳಿ ಜಾಗ ಖಾಲಿ ಮಾಡಿದ ಯುವಕ:

ನಾಗ ಶೌರ್ಯ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ‘ಆಕೆಯ ಕ್ಷಮೆ ಕೇಳು’ ಎಂದು ಯುವಕನ ಕೈ ಹಿಡಿದು ತಾಕೀತು ಮಾಡಿದ್ದಾರೆ. ಸುತ್ತಲೂ ಸೇರಿದ್ದ ಜನರು ಕೂಡ ಆ ಹುಡುಗನ ವಿರುದ್ಧ ಗರಂ ಆಗಿದ್ದಾರೆ. ಬಳಿಕ ವಿಧಿ ಇಲ್ಲದೇ ಕ್ಷಮೆ ಕೇಳಿ ಆತ ಜಾಗ ಖಾಲಿ ಮಾಡಿದ್ದಾನೆ. ತನ್ನ ಪಾಗಲ್​ ಪ್ರೇಮಿಯನ್ನು ಕರೆದುಕೊಂಡು ಆ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ರಸ್ತೆಯಲ್ಲಿ ಯಾರಿಗಾದರೂ ತೊಂದರೆ ಆಗುತ್ತಿದ್ದರೆ ‘ನಮಗ್ಯಾಕೆ ಊರ ಉಸಾಬರಿ’ ಎಂದು ಮುಂದೆ ಸಾಗುವವರೇ ಹೆಚ್ಚು. ಆದರೆ ನಾಗ ಶೌರ್ಯ ಅವರು ಆ ಗುಂಪಿಗೆ ಸೇರಿದವರಲ್ಲ. ಹುಡುಗಿಯ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ತಪ್ಪಿಸಲು ಅವರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 pm, Tue, 28 February 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ