Naga Shaurya Marriage: ಬೆಂಗಳೂರಲ್ಲಿ ಅನುಷಾ ಶೆಟ್ಟಿ-ನಾಗ ಶೌರ್ಯ ಮದುವೆ; ವೈರಲ್ ಆಯ್ತು ವಿವಾಹದ ವಿಡಿಯೋ
Naga Shaurya Anusha Shetty Marriage: ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದ ಸ್ನೇಹಿತರಿಗಾಗಿ ಶೀಘ್ರವೇ ಹೈದರಾಬಾದ್ನಲ್ಲಿ ರಿಸೆಪ್ಷನ್ ಏರ್ಪಡಿಸಲಾಗುವುದು.
ಟಾಲಿವುಡ್ ನಟ ನಾಗ ಶೌರ್ಯ (Naga Shaurya) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಅನುಷಾ ಶೆಟ್ಟಿ (Anusha Shetty) ಜೊತೆ ಅವರು ಹಸೆಮಣೆ ಏರಿದ್ದಾರೆ. ಭಾನುವಾರ (ನ.20) ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಮದುವೆಗೆ ಕೇವಲ ಆಪ್ತರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅನುಷಾ ಶೆಟ್ಟಿ ಮತ್ತು ನಾಗ ಶೌರ್ಯ ಮದುವೆಯ (Naga Shaurya Anusha Shetty Wedding) ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನವ ದಂಪತಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ನಾಗ ಶೌರ್ಯ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 2011ರಿಂದಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದಾರೆ. ಟಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಈಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಹೈದರಾಬಾದ್ನಲ್ಲಿ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಸ್ನೇಹಿತರಿಗಾಗಿ ರಿಸೆಪ್ಷನ್ ಏರ್ಪಡಿಸಲಾಗುವುದು.
ನವೆಂಬರ್ 19ರಂದು ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ಜೋಡಿಯ ಮೆಹಂದಿ ಶಾಸ್ತ್ರ ನೆರವೇರಿತು. ನಂತರ ಎಲ್ಲ ಆಹ್ವಾನಿತರಿಗೆ ಕಾಕ್ಟೇಲ್ ಪಾರ್ಟಿ ಆಯೋಜಿಸಲಾಯುತು. ಆ ಸಂದರ್ಭದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದೆ. ನಾಗ ಶೌರ್ಯ ಪತ್ನಿ ಅನುಷಾ ಶೆಟ್ಟಿ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಇಂಟೀರಿಯರ್ ಡಿಸೈನರ್ ಆಗಿ ಅನುಷಾ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.
Congrats to new couple #NagaShaurya and #AnushaShetty on entering into new phase of life together ?@IamNagashaurya #NagaShauryaWedsAnushaShetty pic.twitter.com/s6U2hoFf00
— Vamsi Kaka (@vamsikaka) November 20, 2022
Glimpse of @IamNagashaurya and #AnushaShetty at the Pre wedding celebrations ✨#LetsGoShaan ❤️ pic.twitter.com/gtOSspcffT
— Vamsi Kaka (@vamsikaka) November 20, 2022
ನಾಗ ಶೌರ್ಯ ನಟನೆಯ ‘ಕೃಷ್ಣ ವೃಂದಾ ವಿಹಾರಿ’ ಸಿನಿಮಾ ಸೆಪ್ಟೆಂಬರ್ 23ರಂದು ತೆರೆಕಂಡಿತು. ಆ ಬಳಿಕ ಅವರು ಮದುವೆ ತಯಾರಿಗಾಗಿ ಬ್ರೇಕ್ ಪಡೆದುಕೊಂಡರು. ಅವರ ಕೈಯಲ್ಲಿ ಹಲವು ಆಫರ್ಗಳಿವೆ. ತಮ್ಮ 24ನೇ ಚಿತ್ರಕ್ಕೆ ಅವರು ಕೆಲವೇ ದಿನಗಳ ಹಿಂದೆ ಸಹಿ ಮಾಡಿದರು. ಆ ಸಿನಿಮಾವನ್ನು ಎಸ್ಎಸ್ ಅರುಣಾಚಲಂ ನಿರ್ದೇಶನ ಮಾಡಲಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ ‘ಎನ್ಎಸ್24’ ಎಂದು ಕರೆಯಲಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಯಿತು. ಇದು ಸಾಹಸ ಪ್ರಧಾನ ಸಿನಿಮಾ ಆಗಿರಲಿದ್ದು, ಹಿಂದೆಂದೂ ಮಾಡಿರದ ಪಾತ್ರಕ್ಕೆ ನಾಗ ಶೌರ್ಯ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.