Aditi Prabhudeva: ಅದಿತಿ ಪ್ರಭುದೇವ ಮದುವೆ ದಿನಾಂಕ ನಿಗದಿ; ನ.27ಕ್ಕೆ ಹಸೆಮಣೆ ಏರಲಿರುವ ‘ಶ್ಯಾನೆ ಟಾಪ್​’ ಹುಡುಗಿ

Aditi Prabhudeva Marriage: ಅದಿತಿ ಪ್ರಭುದೇವ-ಯಶಸ್ವಿ ಅವರ ವಿವಾಹದ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದೆ. ನವೆಂಬರ್​ 27ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.

Aditi Prabhudeva: ಅದಿತಿ ಪ್ರಭುದೇವ ಮದುವೆ ದಿನಾಂಕ ನಿಗದಿ; ನ.27ಕ್ಕೆ ಹಸೆಮಣೆ ಏರಲಿರುವ ‘ಶ್ಯಾನೆ ಟಾಪ್​’ ಹುಡುಗಿ
ಅದಿತಿ ಪ್ರಭುದೇವ, ಯಶಸ್ವಿ
Follow us
TV9 Web
| Updated By: ಮದನ್​ ಕುಮಾರ್​

Updated on:Nov 03, 2022 | 7:28 PM

ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಅದಿತಿ ಪ್ರಭುದೇವ (Aditi Prabhudeva) ಕೂಡ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಶಸ್ವಿ (ಯಶಸ್) ಎಂಬುವವರ​ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಅವರಿಬ್ಬರ ಮದುವೆ (Aditi Prabhudeva Marriage) ದಿನಾಂಕ ನಿಗದಿ ಆಗಿದೆ. ನವೆಂಬರ್​ 27ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಎಂಟ್ರಿ ನೀಡಲಿದೆ. ಅದಿತಿ ಪ್ರಭುದೇವ-ಯಶಸ್ವಿ ವಿವಾಹದ ಆಮಂತ್ರಣ ಪತ್ರಿಕೆಯ ಫೋಟೋ ಕೂಡ ಲಭ್ಯವಾಗಿದೆ. ಈ ಜೋಡಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟವರು ಅದಿತಿ ಪ್ರಭುದೇವ. 2017ರಲ್ಲಿ ಅವರ ಮೊದಲ ಸಿನಿಮಾ ‘ಧೈರ್ಯಂ’ ಬಿಡುಗಡೆ ಆಯಿತು. ಆ ಚಿತ್ರದಲ್ಲಿ ಅವರು ಅಜಯ್​ ರಾವ್​ ಜೊತೆ ನಟಿಸಿದ್ದರು. ಬಳಿಕ ‘ಬಜಾರ್​’, ‘ಸಿಂಗ’, ‘ರಂಗನಾಯಕಿ’, ‘ಒಂಬತ್ತನೇ ದಿಕ್ಕು’, ‘ಓಲ್ಡ್​ ಮಾಂಕ್​’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅದಿತಿ ಪ್ರಭುದೇವ ಮತ್ತು ಚಿರಂಜೀವಿ ಸರ್ಜಾ ಜೋಡಿಯಾಗಿ ನಟಿಸಿದ್ದ ‘ಸಿಂಗ’ ಚಿತ್ರದ ‘ಶಾನೆ ಟಾಪ್​ ಆಗವ್ಳೆ..’ ಹಾಡು ಸಿಕ್ಕಾಪಟ್ಟೆ ವೈರಲ್​ ಆಯಿತು. ನಂತರ ಅವರಿಗೆ ಹತ್ತು ಹಲವು ಅವಕಾಶಗಳು ಹರಿದುಬರಲು ಆರಂಭಿಸಿದವು.

ಅನೇಕ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿರುವಾಗಲೇ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥದ ಸುದ್ದಿ ಹೊರಬಿತ್ತು. ಅದು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದ್ದಂತೂ ನಿಜ. ಚಿತ್ರರಂಗದಲ್ಲಿ ಈಗತಾನೇ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಅವರು ಏಕಾಏಕಿ ಮದುವೆ ನಿರ್ಧಾರ ಮಾಡಿದ್ದರಿಂದ ಒಂದು ವರ್ಗದ ಫ್ಯಾನ್ಸ್​ ಬೇಸರ ಮಾಡಿಕೊಂಡರು. ಅದೇನೇ ಇರಲಿ, ಮದುವೆ ಎಂಬುದು ಅದಿತಿ ಅವರ ವೈಯಕ್ತಿಕ ನಿರ್ಧಾರ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
Image
Aditi Prabhudeva: 11ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅದಿತಿ ಪ್ರಭುದೇವ; ಸ್ಯಾಂಡಲ್​ವುಡ್ ಬೆಡಗಿಯ ಕ್ಯೂಟ್ ಫೋಟೋಗಳು ಇಲ್ಲಿವೆ
Image
ನೋವಾದರೂ ಅದನ್ನು ಮನಸ್ಸಲ್ಲೇ ಇಟ್ಟುಕೊಂಡ ನಟಿ ಅದಿತಿ ಪ್ರಭುದೇವ; ಅಚ್ಚರಿ ವಿಚಾರ ಬಿಚ್ಚಿಟ್ಟ ರವಿವರ್ಮ
Image
ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದಿತಿ ಪ್ರಭುದೇವ; ಯಾವ ಚಿತ್ರ?
Image
ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್​ವುಡ್​ ಸುಂದರಿಯ ಕ್ಯೂಟ್​ ಫೋಟೋ ಆಲ್ಬಂ

ಉದ್ಯಮಿ ಮತ್ತು ಕಾಫಿ ಪ್ಲಾಂಟರ್​ ಆಗಿರುವ ಯಶಸ್ವಿ ಜತೆ ಅದಿತಿ ಪ್ರಭುದೇವ ಅವರು ಮದುವೆ ಆಗಲಿದ್ದಾರೆ. ಅದಿತಿ ಅವರನ್ನು ಮೊದಲು ಇಷ್ಟಪಟ್ಟವರು ಯಶಸ್ವಿ​. ನಂತರ ಕುಟುಂಬದ ಹಿರಿಯರ ಮೂಲಕ ಅದಿತಿಗೆ ಈ ವಿಷಯ ತಿಳಿಯಿತು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತು. ಈಗ ಮದುವೆ ದಿನಾಂಕ ಕೂಡ ನಿಗದಿ ಆಗಿದೆ.

(ಅದಿತಿ ಪ್ರಭುದೇವ-ಯಶಸ್ವಿ ವಿವಾಹದ ಆಮಂತ್ರಣ ಪತ್ರಿಕೆ)

ನಟನೆ ಮತ್ತು ಗ್ಲಾಮರ್​ ಮೂಲಕ ಅದಿತಿ ಪ್ರಭುದೇವ ಅವರು ಬಣ್ಣದ ಲೋಕದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ‘ಅಂದೊಂದಿತ್ತು ಕಾಲ’, ‘ಮಾಫಿಯಾ’, ‘5ಡಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೇ ತಿಂಗಳು ಮದುವೆ ಇರುವುದರಿಂದ ಅವರು ಒಂದಷ್ಟು ದಿನಗಳ ಕಾಲ ನಟನೆಯಿಂದ ಬ್ರೇಕ್​ ಪಡೆದುಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:28 pm, Thu, 3 November 22