ಪಂಜಾಬ್​ನಲ್ಲಿದ್ದ ತಂದೆಯನ್ನು ಪತ್ತೆಹಚ್ಚಲು 20 ವರ್ಷಗಳ ಬಳಿಕ ಜಪಾನ್​ನಿಂದ ಬಂದಿಳಿದ ಮಗ

|

Updated on: Aug 29, 2024 | 3:48 PM

ಜಪಾನಿನ ಮಗ 20 ವರ್ಷಗಳ ನಂತರ ಪಂಜಾಬಿ ತಂದೆಯೊಂದಿಗೆ ಮತ್ತೆ ಸೇರಿದ್ದಾನೆ. 21 ವರ್ಷ ವಯಸ್ಸಿನ ರಿನ್ ಟಕಾಹಟಾ ತನ್ನ ತಂದೆ ತಮ್ಮನ್ನು ಬಿಟ್ಟುಹೋದಾಗ ಆತನಿಗೆ ಕೇವಲ 1 ವರ್ಷವಾಗಿತ್ತು. ಇದೀಗ ಆತ ತನ್ನ ತಂದೆಯ ಹೆಸರೊಂದನ್ನೇ ತಿಳಿದುಕೊಂಡು ಗೂಗಲ್ ಮ್ಯಾಪ್ ಮೂಲಕ ಅಪ್ಪನನ್ನು ಹುಡುಕುತ್ತಾ ಜಪಾನ್​ನಿಂದ ಪಂಜಾಬ್​ಗೆ ತಲುಪಿದ್ದಾನೆ.

ಪಂಜಾಬ್​ನಲ್ಲಿದ್ದ ತಂದೆಯನ್ನು ಪತ್ತೆಹಚ್ಚಲು 20 ವರ್ಷಗಳ ಬಳಿಕ ಜಪಾನ್​ನಿಂದ ಬಂದಿಳಿದ ಮಗ
ಅಪ್ಪನ ಪತ್ತೆಹಚ್ಚಲು ಜಪಾನ್​ನಿಂದ ಪಂಜಾಬ್​ಗೆ ತಲುಪಿದ ಬಾಲಕ
Follow us on

ಚಂಡೀಗಢ: 20 ವರ್ಷಗಳ ನಂತರ ಜಪಾನಿನ ರಿನ್ ತಕಹಟಾ ಎಂಬ ಹುಡುಗ ಪಂಜಾಬ್‌ನ ಅಮೃತಸರದಲ್ಲಿ ವಾಸಿಸುವ ತನ್ನ ತಂದೆ ಸುಖಪಾಲ್ ಸಿಂಗ್‌ನನ್ನು ಪತ್ತೆ ಹಚ್ಚಿದ್ದಾನೆ. ಅವರ ಕುಟುಂಬ ವೃಕ್ಷವನ್ನು ಪೂರ್ಣಗೊಳಿಸಲು ಅಗತ್ಯವಿರುವ ಕಾಲೇಜು ಅಸೈನ್​ಮೆಂಟ್​ನ ಭಾಗವಾಗಿ ಆತ ತನ್ನ ತಂದೆಯ ಹುಡುಕಾಟವನ್ನು ಆರಂಭಿಸಿದನು.

ಆಗಸ್ಟ್ 18ರಂದು ಜಪಾನ್‌ನ ಒಸಾಕಾ ಯೂನಿವರ್ಸಿಟಿ ಆಫ್ ಆರ್ಟ್ಸ್‌ನ 21 ವರ್ಷದ ವಿದ್ಯಾರ್ಥಿ ರಿನ್ ತನ್ನ ತಂದೆಯ ಹೆಸರು, ಹಳೆಯ ವಿಳಾಸ ಮತ್ತು ತನ್ನ ತಾಯಿ ಸಚಿಯೆ ತಕಹತಾ ಬಳಿಯಿದ್ದ ಫೋಟೋದೊಂದಿಗೆ ಅಮೃತಸರವನ್ನು ತಲುಪಿದನು. ಅವನ ತಂದೆಯ ಹಳೆಯ ವಿಳಾಸದಲ್ಲಿ ಫತೇಘರ್ ಚುರಿಯನ್ ರಸ್ತೆಯ ವಿಳಾಸವನ್ನು ನೀಡಲಾಗಿತ್ತು. ಆದರೆ ಅವರೆಲ್ಲರೂ ಅಲ್ಲಿಂದ ಬೇರೆಡೆ ವಾಸಿಸುತ್ತಾ ಬಹಳ ವರ್ಷಗಳಾಗಿತ್ತು. ಕೊನೆಗೂ ಆತ ಲೋಹರ್ಕಾ ರಸ್ತೆಯ ತನ್ನ ತಂದೆಯ ಹೊಸ ವಿಳಾಸವನ್ನು ಪಡೆಯುವಲ್ಲಿ ಯಶಸ್ವಿಯಾದನು. 20 ವರ್ಷಗಳ ಬಳಿಕ ಕೊನೆಗೂ ಆತ ತನ್ನ ತಂದೆಯನ್ನು ಭೇಟಿಯಾದನು. ರಿನ್ ಕೇವಲ ಒಂದು ವರ್ಷದವನಾಗಿದ್ದಾಗ, ಅವನ ತಂದೆ ಜಪಾನ್ ಬಿಟ್ಟು ಭಾರತಕ್ಕೆ ವಾಪಾಸ್ ಬಂದಿದ್ದರು. ಅದಾದ ನಂತರ ಅವನ ತಂದೆ-ತಾಯಿಯ ನಡುವೆ ಯಾವುದೇ ಸಂಪರ್ಕ ಇರಲಿಲ್ಲ.

ಇದನ್ನೂ ಓದಿ: Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್

ಈ ಕತೆ ಯಾವ ಸಿನಿಮಾ ಕತೆಗೂ ಕಡಿಮೆಯೇನಿಲ್ಲ. ಜಪಾನ್‌ನ ಒಸಾಕಾ ಯೂನಿವರ್ಸಿಟಿ ಆಫ್ ಆರ್ಟ್ಸ್‌ನಲ್ಲಿ ಅವರ ಪಠ್ಯಕ್ರಮದ ಆಧಾರದ ಮೇಲೆ ಕುಟುಂಬ ವೃಕ್ಷವನ್ನು ನಿರ್ಮಿಸುವ ಅಸೈನ್​ಮೆಂಟ್​ನಿಂದಾಗಿ ರಿನ್ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಹುಡುಕಲು ನಿರ್ಧರಿಸಿದ. ಆದರೆ ಅವರ ತಂದೆ ಸುಖಪಾಲ್ ಸಿಂಗ್ ಎಲ್ಲಿದ್ದಾನೆಂದು ಆತನಿಗೆ ಖಚಿತವಾಗಿ ಗೊತ್ತಿರಲಿಲ್ಲ. ಅಪ್ಪನನ್ನು ಕಂಡುಹಿಡಿಯುತ್ತೇನೆಂದು ಅಮ್ಮನ ಬಳಿಯಿದ್ದ ಅಪ್ಪನ ಹಳೇ ಫೋಟೋ, ಹಳೆಯ ವಿಳಾಸವನ್ನು ತೆಗೆದುಕೊಂಡ ಭಾರತಕ್ಕೆ ಬಂದ ರಿನ್ ಪಂಜಾಬ್​ನಲ್ಲಿ ಕೊನೆಗೂ ಅಪ್ಪನ ಹೊಸ ವಿಳಾಸವನ್ನು ಪತ್ತೆಹಚ್ಚಿದ್ದಾನೆ.


ಹಳೆಯ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ ಸುಖಪಾಲ್​ನ ಹಳೇ ಫೋಟೋ ನೋಡಿದ ಕೆಲವರು ಆತನನ್ನು ಗುರುತು ಹಿಡಿದರು. ಅವರು ರಿನ್​ಗೆ ಆತನನ್ನು ಪತ್ತೆಹಚ್ಚಲು ಸಹಾಯ ಮಾಡಿದರು. ಆಗಸ್ಟ್ 19ರಂದು ‘ರಕ್ಷಾ ಬಂಧನ’ದ ದಿನ ರಿನ್ ತನ್ನ ತಂದೆ ಮತ್ತು ಮಲ ಸಹೋದರಿ ಅವ್ಲೀನ್ ಕೌರ್ ಅವರನ್ನು ಭೇಟಿಯಾದನು.

ಜಪಾನ್‌ನಲ್ಲಿ ರಿನ್ ತನ​ಗೆ ಕೇವಲ ಒಂದು ವರ್ಷದವರಾಗಿದ್ದಾಗ ಅವರ ತಾಯಿ ಮತ್ತು ತಂದೆ ಸುಖಪಾಲ್ ಆತನನ್ನು ಎತ್ತಿಕೊಂಡಿದ್ದ ಹಳೆಯ ಕುಟುಂಬದ ಫೋಟೋಗಳನ್ನು ತಂದಿದ್ದ. ಅದನ್ನು ನೋಡಿ ಸುಖಪಾಲ್ ಮಗನನ್ನು ಗುರುತು ಹಿಡಿದಿದ್ದಾರೆ. ನನ್ನ ಜೀವನದಲ್ಲಿ ಇಂತಹ ಘಟನಾವಳಿಗಳು ಬರುತ್ತವೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಸುಖಪಾಲ್ ಸಿಂಗ್ ಹೇಳಿದ್ದಾರೆ.

ಅವರು ಈಗ ಗುರ್ವಿಂದರ್ಜಿತ್ ಕೌರ್ ಅವರೊಂದಿಗೆ ಎರಡನೇ ವಿವಾಹವಾಗಿದ್ದು, ಅವರಿಬ್ಬರೂ ಅವ್ಲೀನ್ ಕೌರ್ ಎಂಬ ಮಗಳನ್ನು ಹೊಂದಿದ್ದಾರೆ. ಅವರ ಪತ್ನಿ ಮತ್ತು ಮಗಳು ಇಬ್ಬರೂ ರಿನ್ ಅವರನ್ನು ಪೂರ್ಣ ಹೃದಯದಿಂದ ತಮ್ಮ ಕುಟುಂಬಕ್ಕೆ ಸ್ವಾಗತಿಸಿದರು. ರಿನ್ ಅವರ ಯೋಗಕ್ಷೇಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಚಿಯೆ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ ಎಂದು ಸಿಂಗ್ ಹೇಳಿದರು. ಅವರು ಅವರನ್ನು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಲು ಕರೆದೊಯ್ದರು ಮತ್ತು ಅವರು ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ವೀಕ್ಷಿಸಿದರು.

ಇದನ್ನೂ ಓದಿ: Viral Video: ರಸ್ತೆಯಲ್ಲಿ ಓಡಾಡುವ ಕುಡುಕರಿಗೆ ಪೊರಕೆಯಲ್ಲಿ ಥಳಿಸಿದ ಮಹಿಳೆಯರು; ವಿಡಿಯೋ ವೈರಲ್

ತನ್ನ ಹಿಂದಿನದನ್ನು ವಿವರಿಸುತ್ತಾ, ಸುಖಪಾಲ್ ಅವರು ಸಚಿಯೆ ಅವರನ್ನು ಥೈಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು ಮತ್ತು 2002ರಲ್ಲಿ ಜಪಾನ್‌ನಲ್ಲಿ ಅವರನ್ನು ವಿವಾಹವಾದರು. ಅದಾಗಿ 1 ವರ್ಷದ ನಂತರ ರಿನ್ ಜನಿಸಿದ. ಸಚಿಯೆ ಭಾರತವನ್ನು ನೋಡಲು ಅಮೃತಸರಕ್ಕೆ ಬಂದು ನನ್ನ ಕುಟುಂಬದೊಂದಿಗೆ ಹದಿನೈದು ದಿನಗಳ ಕಾಲ ಇದ್ದಳು. ನಾವು ಸ್ಥಳೀಯ ಪ್ರವಾಸಿ ಸ್ಥಳಗಳಲ್ಲದೆ ಕೆಂಪು ಕೋಟೆ ಮತ್ತು ತಾಜ್ ಮಹಲ್‌ಗೆ ಭೇಟಿ ನೀಡಿದ್ದೆವು. ನಂತರ 2002ರಲ್ಲಿ ನಾವು ಮದುವೆಯಾದೆವು” ಎಂದು ಸುಖದೇವ್ ಹೇಳಿದ್ದಾರೆ.

ನಾನು ಜಪಾನೀಸ್ ಕಲಿತು ಅಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ನಾವು ಚೆನ್ನಾಗಿ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ನಾನು ಭಾರತಕ್ಕೆ ಮರಳಿದೆ ಎಂದು ಸಿಂಗ್ ಹೇಳಿದ್ದಾರೆ. ನಾವಿಬ್ಬರೂ 2004ರಲ್ಲಿ ಪರಸ್ಪರ ವಿಚ್ಛೇದನ ಪಡೆದೆವು. ನಂತರ ನಾನು 2007ರಲ್ಲಿ ಭಾರತಕ್ಕೆ ಹಿಂತಿರುಗಿ ಮರುಮದುವೆಯಾದೆ. ಆದರೆ, ರಿನ್​ನ ತಾಯಿ ಕೊನೆಗೆ 2ನೇ ಮದುವೆಯಾಗದೆ ಹಾಗೇ ಉಳಿದಳು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ