Viral Video: ಚಲಿಸುತ್ತಿದ್ದ ಮೆಟ್ರೋ ಬಾಗಿಲು ತೆರೆದು ಜಿಗಿದ ಯುವಕ, ಮುಂದೇನಾಯ್ತು ನೋಡಿ

|

Updated on: May 29, 2023 | 2:24 PM

ಚಲಿಸುತ್ತಿದ್ದ ಮೆಟ್ರೋ(Metro) ರೈಲಿನ ಬಾಗಿಲು ತೆರೆದು ಯುವಕನೊಬ್ಬ ಹಾರಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕೆಲವರಿಗೆ ರೈಲು ಅಥವಾ ಬಸ್ಸು ಯಾವುದೇ ವಾಹನಗಳು ನಿಲ್ಲುವವರೆಗೆ ಕಾಯುವಷ್ಟು ತಾಳ್ಮೆ ಇರುವುದಿಲ್ಲ.

Viral Video: ಚಲಿಸುತ್ತಿದ್ದ ಮೆಟ್ರೋ ಬಾಗಿಲು ತೆರೆದು ಜಿಗಿದ ಯುವಕ, ಮುಂದೇನಾಯ್ತು ನೋಡಿ
ವೈರಲ್ ಸುದ್ದಿ
Follow us on

ಚಲಿಸುತ್ತಿದ್ದ ಮೆಟ್ರೋ(Metro) ರೈಲಿನ ಬಾಗಿಲು ತೆರೆದು ಯುವಕನೊಬ್ಬ ಹಾರಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕೆಲವರಿಗೆ ರೈಲು ಅಥವಾ ಬಸ್ಸು ಯಾವುದೇ ವಾಹನಗಳು ನಿಲ್ಲುವವರೆಗೆ ಕಾಯುವಷ್ಟು ತಾಳ್ಮೆ ಇರುವುದಿಲ್ಲ. ಅದಕ್ಕೂ ಮುನ್ನವೇ ಜಿಗಿದು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡಿದ್ದು, ಮತ್ತೊಬ್ಬರು ಮನೆಯಂತೆ ಟವೆಲ್​ ಸುತ್ತಿಕೊಂಡಿದ್ದಿದ್ದು, ಇನ್ನೂ ಕೆಲವರು ಹಲ್ಲುಜ್ಜಿದ್ದು ಇಂತಹ ಅನೇಕ ಘಟನೆಗಳು ನಡೆದಿದ್ದವು. ವ್ಯಕ್ತಿಯೊಬ್ಬ ಚಲಿಸುತ್ತಿರುವ ಮೆಟ್ರೋದ ಬಾಗಿಲು ತೆರೆದು ಅದರಿಂದ ಜಿಗಿದಿರುವ ವಿಡಿಯೋ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಚಲಿಸುವಾಗ ಮೆಟ್ರೋದ ಬಾಗಿಲು ಮುಚ್ಚಿರುತ್ತದೆ. ರೈಲು ನಿಲ್ದಾಣವನ್ನು ತಲುಪಿದ ನಂತರವೇ ತೆರೆಯುತ್ತದೆ. ಅದರ ನಂತರವೇ ಪ್ರಯಾಣಿಕರು ಮೆಟ್ರೋವನ್ನು ಹತ್ತಬಹುದು ಮತ್ತು ಇಳಿಯಬಹುದು. ಸದ್ಯಕ್ಕೆ ಹೊರಬಿದ್ದಿರುವ ವಿಡಿಯೋ ನ್ಯೂಯಾರ್ಕ್ ಮೆಟ್ರೋ ಎಂದು ಹೇಳಲಾಗುತ್ತಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಪ್ಲಾಟ್‌ಫಾರ್ಮ್ ತಲುಪುವ ಮೊದಲು ಮೆಟ್ರೋದ ಬಾಗಿಲು ತೆರೆದು ಕೆಳಗೆ ಇಳಿಯಲು ಹಾರಿದ್ದಾರೆ.

ಮತ್ತಷ್ಟು ಓದಿ: Viral Video: ರಸ್ತೆಯಲ್ಲಿ ನೃತ್ಯ ಮಾಡುತ್ತಾ ಹೋಗುತ್ತಿದ್ದ ವ್ಯಕ್ತಿಯ ಕಾಲು ಕಚ್ಚಿದ ನಾಯಿ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಔಟ್ ಆಫ್ ಕಾಂಟೆಕ್ಸ್ಟ್ ಹ್ಯೂಮನ್ ರೇಸ್ ಹೆಸರಿನ ಪ್ರೊಫೈಲ್‌ನಿಂದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಚಲಿಸುತ್ತಿರುವ ಮೆಟ್ರೋದ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬಾಗಿಲು ತೆರೆದ ನಂತರ, ಆತ ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲುವ ಮೊದಲೇ ಕೆಳಗೆ ಜಿಗಿದ. ಇದರ ಪರಿಣಾಮ ಮೆಟ್ರೋ ನಿಲ್ದಾಣದಲ್ಲಿರುವ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.

ವೀಡಿಯೋದಲ್ಲಿ ಮೆಟ್ರೋ ಒಳಗೆ ಕುಳಿತವರು ಆ ವ್ಯಕ್ತಿಯನ್ನು ಹಾಗೆ ಮಾಡಬೇಡಿ ಎಂದು ಜೋರಾಗಿ ಕೇಳುತ್ತಿದ್ದಾರೆ. ಇವೆಲ್ಲವೂ ಆ ವ್ಯಕ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿಯವರೆಗೆ 2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಿಸಲಾಗಿದೆ. ನ್ಯೂಯಾರ್ಕ್ ಮೆಟ್ರೋದಲ್ಲಿ ಇದು ಸಾಮಾನ್ಯ ವಿಷಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಯಾರೂ ಕೂಡ ಇಂತಹ ಸಾಹಸ ಮಾಡಲು ಹೋಗಲಾರರು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:23 pm, Mon, 29 May 23