ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್​​​ ವೇಷ ತೊಟ್ಟು ಬಂದ ಅಣ್ಣ

ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಮದನ್​​​​ ಸೆಲ್ಯೂಟ್​​ ಹೊಡೆದಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಕಿಶೋರ್ ಅವರಿಗೆ ಆತನ ಮೇಲೆ ಕೊಂಚ ಅನುಮಾನ ಬಂದಿದೆ. ಕೂಲಂಕಷ ತನಿಖೆ ಮಾಡಿದ ನಂತರ ಆತನ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಆತನನ್ನು ಬಂಧಿಸಿ 1982ರ ಕಾಯ್ದೆಯ ಸೆಕ್ಷನ್ 417, 419, 170, 171 ಮತ್ತು ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್​​​ ವೇಷ ತೊಟ್ಟು ಬಂದ ಅಣ್ಣ

Updated on: Feb 23, 2024 | 11:21 AM

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ತಂಗಿ ಪಿಯು ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದೇ ನಕಲಿ  ಪೊಲೀಸ್ ಸಮವಸ್ತ್ರದಲ್ಲಿ ಪರೀಕ್ಷಾ ಕೊಠಡಿಗೆ ಬಂದಿದ್ದಾನೆ. ಆದರೆ ಅಲ್ಲಿದ್ದ ಪೊಲೀಸ್​​​ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಅನುಪಮ್ ಮದನ್ ಖಂಡಾರೆ (24) ಎಂದು ಗುರುತಿಸಲಾಗಿದ್ದು, ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆ ಪತ್ತೆಯಾಗಿದೆ. ಸದ್ಯ ಮಾಡಿದ ತಪ್ಪಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲಿನಲ್ಲಿದ್ದಾನೆ.

ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯ ಪಿಯುಸಿಯ ಮೊದಲ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಮದನ್​​​​, ತನ್ನ ತಂಗಿ ಕಾಪಿ ಮಾಡಲು ಸಹಾಯವಾಗಲೆಂದು ಉತ್ತರ ಪ್ರತಿಗಳನ್ನು ಕಳ್ಳಸಾಗಣೆ ಮಾಡಲು ‘ನಕಲಿ’ ಪೊಲೀಸ್ ಆಗಿ ವೇಷ ತೊಟ್ಟು ಬಂದಿದ್ದ. ಆದಾಗ್ಯೂ, ಅವರ ಕುತಂತ್ರವು ಹೆಚ್ಚು ಕಾಲ ಮುಂದುವರೆಯಲಿಲ್ಲ.

ಇದನ್ನೂ ಓದಿ: ಅರ್ಜೆಂಟ್ ಡಾಕ್ಟರ್ ಸಾಹೇಬ್ರನ್ನ ನೋಡ್ಬೇಕಿತ್ತು; ಆಸ್ಪತ್ರೆ ವಾರ್ಡ್​​ಗೆ ಬಂದ ಗೂಳಿ 

ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಮದನ್​​​​ ಸೆಲ್ಯೂಟ್​​ ಹೊಡೆದಿದ್ದಾನೆ. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಅವರಿಗೆ ಆತನ ಮೇಲೆ ಕೊಂಚ ಅನುಮಾನ ಬಂದಿದೆ. ಜೊತೆಗೆ ಆತನ ಸಮವಸ್ತ್ರದ ಮೇಲಿನ ನಾಮಫಲಕ ಬೇರೆ ರೀತಿ ಇರುವುದರಿಂದ ತನಿಖೆ ನಡೆಸಿದಾಗ ಆತ ನಿಜವಾದ ಪೊಲೀಸ್​​ ಅಲ್ಲ ಎಂಬುದು ತಿಳಿದುಬಂದಿದೆ. ಕೂಲಂಕಷ ತನಿಖೆಯ ನಂತರ, ಪೊಲೀಸರು ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷಾ ಪತ್ರಿಕೆಯ ಪ್ರತಿಯನ್ನು ಪತ್ತೆಹಚ್ಚಿದಾಗ ವ್ಯಕ್ತಿಯ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಮದನ್​​ನನ್ನು ಬಂಧಿಸಿ ಅವರ ವಿರುದ್ಧ 1982ರ ಕಾಯ್ದೆಯ ಸೆಕ್ಷನ್ 417, 419, 170, 171 ಮತ್ತು ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ