Guinness Records: ಮೂಗಿನೊಳಗೆ 68 ಬೆಂಕಿ ಕಡ್ಡಿಗಳನ್ನು ತುರುಕಿಸಿ ವಿಶ್ವ ದಾಖಲೆ ಬರೆದ ವ್ಯಕ್ತಿ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ವ್ಯಕ್ತಿಯ ಹೆಸರು ಪೀಟರ್ ವ್ಯಾನ್ ಟಾಂಗೆನ್ ಬಾಸ್ಕೋವ್. ಪೀಟರ್ ತನ್ನ ಮೂಗಿನ ಹೊಳ್ಳೆಗಳಲ್ಲಿ 68 ಕಡ್ಡಿಗಳನ್ನು ತುರುಕಿಸಿದ್ದಾನೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ.

Guinness Records: ಮೂಗಿನೊಳಗೆ 68 ಬೆಂಕಿ ಕಡ್ಡಿಗಳನ್ನು ತುರುಕಿಸಿ ವಿಶ್ವ ದಾಖಲೆ ಬರೆದ ವ್ಯಕ್ತಿ
ಮೂಗಿನೊಳಗೆ 68 ಬೆಂಕಿ ಕಡ್ಡಿಗಳನ್ನು ತುರುಕಿಸಿ ವಿಶ್ವ ದಾಖಲೆ ಬರೆದ ವ್ಯಕ್ತಿImage Credit source: Twitter
Follow us
|

Updated on: Feb 22, 2024 | 6:39 PM

ಡೆನ್ಮಾರ್ಕ್ ನ ವ್ಯಕ್ತಿಯೊಬ್ಬ ವಿಶ್ವ ದಾಖಲೆ ಸೃಷ್ಟಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈತ ತನ್ನ ಮೂಗಿನೊಳಗೆ 68 ಬೆಂಕಿ ಕಡ್ಡಿಗಳನ್ನು ತುರುಕಿಸಿ ಗಿನ್ನಿಸ್​​ ವಿಶ್ವ ದಾಖಲೆ(Guinness World Records) ಬರೆದಿದ್ದಾನೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ವ್ಯಕ್ತಿಯ ಹೆಸರು ಪೀಟರ್ ವ್ಯಾನ್ ಟಾಂಗೆನ್ ಬಾಸ್ಕೋವ್. ಪೀಟರ್ ಈ ವಿಶ್ವ ದಾಖಲೆಯನ್ನು ಸಾಧಿಸಿದ್ದು ಮಾತ್ರವಲ್ಲದೆ ಈ ದಾಖಲೆಯನ್ನು ಸಾಧಿಸಿದ ವಿಶ್ವದ ಮೊದಲ ವ್ಯಕ್ತಿ ಕೂಡ ಹೌದು. ಅಂದರೆ ಪೀಟರ್ ಗಿಂತ ಮೊದಲು ಯಾರೂ ಕೂಡ ಈ ರೀತಿಯ ಸಾಹಸಕ್ಕೆ ಕೈ ಹಾಕಿಲ್ಲ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ದಾಖಲೆಯನ್ನು ಸ್ಥಾಪಿಸಲು ಕನಿಷ್ಠ 45 ಕಡ್ಡಿಗಳನ್ನು ಮೂಗಿನಲ್ಲಿ ತುಂಬಿಕೊಳ್ಳಬೇಕು. ಆದರೆ ಪೀಟರ್ ತನ್ನ ಮೂಗಿನ ಹೊಳ್ಳೆಗಳಲ್ಲಿ 68 ಕಡ್ಡಿಗಳನ್ನು ತುರುಕಿಸಿದ್ದಾನೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ.

ಇದನ್ನೂ ಓದಿ: ತನ್ನ ಮೂಗಿನಿಂದ ಕೆಲವೇ ಸೆಕೆಂಡುಗಳಲ್ಲಿ ಇಂಗ್ಲೀಷ್​​​ ವರ್ಣಮಾಲೆ ಟೈಪ್​​ ಮಾಡಿ ಗಿನ್ನೆಸ್​​ ದಾಖಲೆ ಬರೆದ ವ್ಯಕ್ತಿ

ಪೀಟರ್ ಯಾವಾಗಲೂ ಜೀವನದ ಆಸಕ್ತಿದಾಯಕ ಮತ್ತು ವಿಶಿಷ್ಟ ಅಂಶಗಳನ್ನು ಪ್ರಯತ್ನಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ. ಅಷ್ಟೊಂದು ಬೆಂಕಿಕಡ್ಡಿಗಳನ್ನು ಮೂಗಿಗೆ ಹಾಕಿಕೊಂಡರೂ ತನಗೆ ಯಾವುದೇ ತೊಂದರೆಯಾಗಿಲ್ಲ. ಮೂಗು ತುಂಬಾ ದೊಡ್ಡದಾಗಿದೆ ಮತ್ತು ಅವರ ಚರ್ಮವು ತುಂಬಾ ಮೃದುವಾಗಿರುವುದರಿಂದ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಲು ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ