Radhika Merchant: ಭಾವಿ ಸೊಸೆಗೆ ಅಂಬಾನಿ ಕುಟುಂಬ ನೀಡಿರುವ ವಿಶೇಷ ಗಿಫ್ಟ್ ಏನು ಗೊತ್ತಾ?
ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾರಣೆ ನಡೆಯಲಿದೆ. ಮುಖೇಶ್ ಮತ್ತು ನೀತಾ ಅಂಬಾನಿ ದಂಪತಿಗಳು ತಮ್ಮ ಭಾವಿ ಸೊಸೆ ರಾಧಿಕಾ ಮರ್ಚೆಂಟ್ಗೆ ನೀಡಿರುವ ಆ ವಿಶೇಷ ಗಿಫ್ಟ್ ಏನು ಗೊತ್ತಾ?
ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಗಳ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹಕ್ಕೆ ಅದ್ದೂರಿಯಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ. ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ವಿವಾಹ ಪೂರ್ವ ಸಂಭ್ರಮಾರಣೆ ನಡೆಯಲಿದೆ. ಜನವರಿ 2023 ರಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ನಡೆದಿತ್ತು. ಹಿಂದಿನಿಂದಲೂ ತನ್ನ ಮಗನನ್ನು ವರಿಸಿ ಬರುವ ಸೊಸೆಗೆ ಗಂಡನ ಮನೆಯಲ್ಲಿ ವಿಶೇಷ ಉಡುಗೊರೆಯನ್ನು ನೀಡುವ ಪದ್ಧತಿ ಇದೆ. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ಸೊಸೆಯಂದಿರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುವ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿದ್ದಾರೆ. ಭಾವಿ ಸೊಸೆ ರಾಧಿಕಾ ಮರ್ಚೆಂಟ್ಗೆ ನೀಡುವ ಆ ವಿಶೇಷ ಗಿಫ್ಟ್ ಏನು ಗೊತ್ತಾ?
ನೀತಾ ಅಂಬಾನಿಯಿಂದ ಬೆಳ್ಳಿ ಲಕ್ಷ್ಮಿ-ಗಣೇಶ ಮೂರ್ತಿ ಗಿಫ್ಟ್ ಹ್ಯಾಂಪರ್:
ನೀತಾ ಅಂಬಾನಿ ತನ್ನ ಭಾವಿ ಸೊಸೆ ರಾಧಿಕಾ ಮರ್ಚೆಂಟ್ಗೆ ಸೊಗಸಾದ ಬೆಳ್ಳಿಯ ಲಕ್ಷ್ಮಿಹಾಗೂ ಗಣೇಶನ ವಿಗ್ರಹವಿರುವ ಗಿಫ್ಟ್ ಹ್ಯಾಂಪರ್ ನೀಡಿದ್ದಾರೆ. ಎರಡು ಬೆಳ್ಳಿಯ ತುಳಸಿ ಪಾತ್ರೆಗಳನ್ನು ಒಳಗೊಂಡಿತ್ತು, ಜೊತೆಗೆ ಲಕ್ಷ್ಮಿ-ಗಣೇಶ ವಿಗ್ರಹಗಳ ಒಂದು ಸೆಟ್ ಅಗರಬತ್ತಿಯ ಸ್ಟ್ಯಾಂಡ್‌ನೊಂದಿಗೆ ಇತ್ತು. ಇದು ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ
ಮುಖೇಶ್ ಅಂಬಾನಿಯಿಂದ ಭಾವಿ ಸೊಸೆಗೆ ಐಷಾರಾಮಿ ಕಾರು:
2023 ಜನವರಿಯಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ನಡೆದಿತ್ತು. ಈ ಸಮಯದಲ್ಲಿ ಮುಖೇಶ್ ಅಂಬಾನಿ ಸುಮಾರು 4.5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅಮೀರ್ ಖಾನ್ ಅವರಂತಹ ಆಯ್ದ ಕೆಲವರ ಒಡೆತನದ ಈ ವಿಶೇಷವಾದ ಬ್ರಿಟಿಷ್-ತಯಾರಿಸಿದ ಕಾರು , ಅವಳಿ-ಟರ್ಬೋಚಾರ್ಜ್ಡ್ 6.0-ಲೀಟರ್ W12 ಎಂಜಿನ್ ಅನ್ನು ಹೊಂದಿದೆ, ಇದು ಕೇವಲ 3.6 ಸೆಕೆಂಡುಗಳಲ್ಲಿ 0-60 mph ನಿಂದ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ.
ನೀತಾ ಅಂಬಾನಿ ಹಿರಿ ಸೊಸೆ ಶೋಕ್ಲಾ ಮೆಹ್ತಾಗೆ ನೀಡಿದ್ದ ಉಡುಗೊರೆ:
2019 ರ ಮಾರ್ಚ್ ನಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಗಳ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶೋಕ್ಲಾ ಮೆಹ್ತಾ ಹಸೆಮಣೆ ಏರಿದ್ದರು. ಈ ಸಮಯದಲ್ಲಿ ನೀತಾ ಅಂಬಾನಿ ತನ್ನ ಸೊಸೆ ಶೋಕ್ಲಾ ಮೆಹ್ತಾ ಅವರಿಗೆ ವಿಶ್ವದ ಅತ್ಯಂತ ದುಬಾರಿ ವಜ್ರದ ನೆಕ್ಲೇಸ್ನ್ನು ಉಡುಗೊರೆಯಾಗಿ ನೀಡಿದ್ದರು. ಈ ವಜ್ರದ ನೆಕ್ಲೇಸ್ನ ಬೆಲೆ ಬರೋಬ್ಬರೀ 450 ಕೋಟಿ ರೂಪಾಯಿ.ಈ ವಜ್ರದ ನೆಕ್ಲೇಸ್ನ ಪೆಡೆಂಟ್ ಹಳದಿ ಬಣ್ಣದಿಂದ ಕೂಡಿದ್ದು, ಇದು ಪರಿಶುದ್ಧವಾದ ಅಂದರೆ ವಿಶ್ವದ ಆಂತರಿಕವಾಗಿ ದೋಷರಹಿತವಾದ ವಜ್ರವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Thu, 22 February 24