2 ವರ್ಷಗಳಿಂದ ನನ್ನ ಗಂಡ ಲೈಂಗಿಕ ಸಂಪರ್ಕ ಬೆಳೆಸಿಲ್ಲ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
"ನನಗೆ 31 ಮೇ 2021 ರಂದು ಮದುವೆಯಾಗಿತ್ತು. ಆದರೆ ಮದುವೆಯಾದ ದಿನದಿಂದ ನನ್ನ ಗಂಡ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿಲ್ಲ. ಈ ಕುರಿತು ನಾನು ಪತಿಯೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದೆ. ಆದರೆ ಆತ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ" ಎಂದು ಮಹಿಳೆ ಹೇಳಿಕೊಂಡಿದ್ದಾಳೆ
ಬಿಹಾರ: ಕಳೆದ ಎರಡು ವರ್ಷಗಳಿಂದ ಪತ್ನಿ ಪತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಕಾದು ಕುಳಿತ್ತಿದ್ದಾಳೆ. ಆದರೆ ಪತಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿಲ್ಲ. ಇದರಿಂದಾಗಿ ನೊಂದು ಮಹಿಳೆ ನೇರವಾಗಿ ಪೊಲೀಸ್ ಠಾಣೆಯ ಹೋಗಿ ಪತಿಯ ವಿರುದ್ಧ ಕೇಸು ದಾಖಲಿಸಿದ್ದಾಳೆ. ಈ ವಿಚಿತ್ರ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, “ನನಗೆ 31 ಮೇ 2021 ರಂದು ಮದುವೆಯಾಗಿತ್ತು” ಎಂದು ಸಂತ್ರಸ್ತೆ ಹೇಳಿದ್ದಾರೆ. ಮದುವೆಯ ನಂತರ ನಾನು ನನ್ನ ಅತ್ತೆಯ ಮನೆಗೆ ಹೋಗಿದ್ದೆ. ಮದುವೆಯಾಗಿ ಎರಡು ವರ್ಷಗಳವರೆಗೆ ನನ್ನ ಪತಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿರಲಿಲ್ಲ. ನಂತರ ನಾನು ನನ್ನ ಅತ್ತೆಯವರಿಗೆ ಹೇಳಿದೆ. ಆದರೆ ಅವರಿಂದ ನನಗೆ ಯಾವುದೇ ಸಹಾಯ ಸಿಕ್ಕಿಲ್ಲ. ಈ ಕುರಿತು ನಾನು ನನ್ನ ಪತಿಯೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದೆ. ಆದರೆ ಆತ ನನ್ನ ಮೇಲೆ ಹಲ್ಲೆ ನಡೆಸಿ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ಬರೆಯಲಾಗಿದೆ.
ಇದೀಗಾ ಮಹಿಳೆಯ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 498A, 379, 504, 506, 34 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ವೇಶ್ಯೆಯನ್ನು 140 ಬಾರಿ ಇರಿದು ಕೊಂದಿದ್ದ ಭಾರತೀಯ; 30 ವರ್ಷದ ಬಳಿಕ ಜೀವಾವಧಿ ಶಿಕ್ಷೆ
ಸಾಕಷ್ಟು ನೊಂದಿದ್ದ ಪತ್ನಿ ವಿಚ್ಛೇಧನ ಪಡೆಯುವುದಾಗಿ ನಿರ್ಧರಿಸಿ, ತನ್ನ ತವರು ವೈಶಾಲಿ ಜಿಲ್ಲೆಯಲ್ಲಿರುವ ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಆದರೆ ಅದಕ್ಕೂ ಆಕೆಯ ಪತಿ ಹಾಗೂ ಆತನ ಪೋಷಕರು ಬಿಡಲಿಲ್ಲ. ಮನೆಬಿಟ್ಟು ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ಸದ್ಯ ಈ ಆಘಾತಕಾರಿ ಪರಿಸ್ಥಿತಿಯಿಂದ ಪಾರಾಗಲು ಪೊಲೀಸರ ಸಹಾಯವನ್ನು ಪಡೆದಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ