Viral Post: ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತ ಯುವಕ ಕಡೆಗೆ ಮಾಡಿದ್ದೇನು ಗೊತ್ತಾ?

ದೀಪೇಂದ್ರ ರಾಥೋಡ್ (29) ಸಾಕಷ್ಟು ವರ್ಷಗಳಿಂದ ವಧು ಹುಡುಕಾಟದ ಹಲವಾರು ಆ್ಯಪ್​ಗಳನ್ನು ಬಳಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದ. ಇದೀಗಾ ಹೊಸ ಪ್ಲಾನ್​​ ಒಂದನ್ನು ತಯಾರಿಸಿದ್ದು, ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಫೇಮಸ್​​ ಆಗಿದ್ದಾನೆ.

Viral Post: ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತ ಯುವಕ ಕಡೆಗೆ ಮಾಡಿದ್ದೇನು ಗೊತ್ತಾ?
ದೀಪೇಂದ್ರ ರಾಥೋಡ್Image Credit source: India Today
Follow us
ಅಕ್ಷತಾ ವರ್ಕಾಡಿ
|

Updated on:Feb 20, 2024 | 6:20 PM

ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತಿದ್ದ ಮಧ್ಯಪ್ರದೇಶದ 29 ವರ್ಷದ ಯುವಕನೊಬ್ಬ ಕಡೆಗೂ ತನಗಾಗಿ ವಧುವನ್ನು ಹುಡುಕುವಲ್ಲಿ ವಿಶಿಷ್ಟ ವಿಧಾನವನ್ನು ಅನುಸರಿಸಿದ್ದಾನೆ. ತನ್ನ ಹೆಸರಿನಿಂದ ಹಿಡಿದು ತನ್ನೆಲ್ಲಾ ಮಾಹಿತಿಗಳನ್ನೊಳಗೊಂಡ ಬ್ಯಾನರ್​​ ಒಂದನ್ನು ತಯಾರಿಸಿ ತನ್ನ ಆಟೋ ರಿಕ್ಷಾಕ್ಕೆ ಅಂಟಿಸಿಕೊಂಡಿದ್ದಾನೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ದೀಪೇಂದ್ರ ರಾಥೋಡ್ (29) ಸಾಕಷ್ಟು ವರ್ಷಗಳಿಂದ ವಧು ಹುಡುಕಾಟದ ಹಲವಾರು ಆ್ಯಪ್​ಗಳನ್ನು ಬಳಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದ. ಇದೀಗಾ ಹೊಸ ಪ್ಲಾನ್​​ ಒಂದನ್ನು ತಯಾರಿಸಿದ್ದು, ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಫೇಮಸ್​​ ಆಗಿದ್ದಾನೆ.ಇದಲ್ಲದೇ ತಾನು ಯಾವುದೇ ಜಾತಿ, ಧರ್ಮದ ಮಹಿಳೆಯನ್ನು ಮದುವೆಯಾಗಲು ಸಿದ್ಧನಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ‘Smile Designing’ Surgery: ಹಲ್ಲಿನ ಚಂದ ಹೆಚ್ಚಿಸಲು ಹೋಗಿ ಸಾವನ್ನಪ್ಪಿದ ಮದುಮಗ

ದೀಪೇಂದ್ರ ರಾಥೋಡ್ ಇಂಡಿಯಾ ಟುಡೇ ಜೊತೆ ಮಾತನಾಡಿ “ಸಮಾಜದಲ್ಲಿ ಮಹಿಳೆಯರ ಕೊರತೆ” ಯಿಂದಾಗಿ ಹೆಣ್ಣು ಹುಡುಕಲು ಕಷ್ಟವಾಗುತ್ತಿದೆ. ಜಾತಿ ಅಥವಾ ಧರ್ಮದ ವ್ಯತ್ಯಾಸವು ನನಗೆ ಸಮಸ್ಯೆಯಿಲ್ಲ ಮತ್ತು ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾನೆ.

ಆಟೋ ರಿಕ್ಷಾಕ್ಕೆ ಅಂಟಿಸಲಾಗಿರುವ ಪೋಸ್ಟರ್​​ನಲ್ಲಿ ದೀಪೇಂದ್ರ ರಾಥೋಡ್ ಅವರ ಎತ್ತರ, ಹುಟ್ಟಿದ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ‘ಗೋತ್ರ’ ಇತ್ಯಾದಿ ವಿವರಗಳಿವೆ. ರಾಥೋಡ್ ಅವರು ಪ್ರಸ್ತುತ ತಮ್ಮದೇ ಇ-ರಿಕ್ಷಾವನ್ನು ಓಡಿಸುವ ಮೂಲಕ ತಮ್ಮ ಕುಟುಂಬ ನಡೆಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Tue, 20 February 24

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್