ರೋಗಿಗಳ ಶೂಶ್ರಷೆಯಲ್ಲಿ ತೊಡಗಿಸಿಕೊಳ್ಳುವ ದಾದಿಯರನ್ನು ತಾಯಿಯ ರೂಪವಾಗಿ ಅಥವಾ ದೇವರ ರೂಪವಾಗಿ ನೋಡಲಾಗುತ್ತದೆ. ಆದರೆ ಇಲೊಬ್ಬಳು ನರ್ಸ್ ಈ ಕೆಲಸಕ್ಕೆ ಕಳಂಕ ತಂದಿದ್ದಾಳೆ. ಹೌದು ತಾನು ಆರೈಕೆ ಮಾಡಬೇಕಾದ ರೋಗಿಯೊಂದಿಗೆ ಸುಮಾರು ಒಂದು ವರ್ಷದಿಂದ ನಿರಂತರ ಲೈಂಗಿಕ ಸಂಪರ್ಕದಲ್ಲಿದ್ದು, ಇತ್ತೀಚೆಗಷ್ಟೇ ಲೈಂಗಿಕ ಸಂಭೋಗದ ವೇಳೆ ರೋಗಿ ಸಾವನ್ನಪ್ಪಿದ್ದು, ಘಟನೆ ಬೆಳಕಿಗೆ ಬಂದಿದೆ. ಇದೀಗಾಗಲೇ ನರ್ಸ್ನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದೆ.
ಯುನೈಟೆಡ್ ಕಿಂಗ್‌ಡಮ್‌ನ ವೇಲ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನರ್ಸ್ ಪೆನೆಲೋಪ್ ವಿಲಿಯಮ್ಸ್(42) ಎಂದು ಗುರುತಿಸಲಾಗಿದೆ. ರೋಗಿಯು ವೇಲ್ಸ್‌ನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ನರ್ಸ್ ಜೊತೆ ಸಂಭೋಗದ ಸಮಯದಲ್ಲಿ ಕುಸಿದು ಬಿದ್ದದ್ದು, ವಿಷಯ ತಿಳಿದ ವೈದ್ಯಕೀಯ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ರೋಗಿಯು ಭಾಗಶಃ ಬೆತ್ತಲೆಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ: ವಿಭಿನ್ನವಾಗಿ ಫೋಟೊ ತೆಗೆಸಿಕೊಳ್ಳಲು ಯುವತಿಯ ಸಾಹಸ, ಕೈ ಬಿಟ್ಟ ಪ್ರಿಯಕರ ಆಕೆಯ ಸ್ಥಿತಿ ಏನಾಯ್ತು ನೋಡಿ
ಫಾಕ್ಸ್ ನ್ಯೂಸ್‌ನ ಪ್ರಕಾರ , ವಿಲಿಯಮ್ಸ್ ಆರಂಭದಲ್ಲಿ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ರೋಗಿಯನ್ನು ಭೇಟಿಯಾಗಲು ಹೋಗಿದ್ದೆ. ತಾನು ಕಾರಿನ ಹಿಂಭಾಗದಲ್ಲಿ ಕೇವಲ 30 ರಿಂದ 45 ನಿಮಿಷಗಳು ಮಾತನಾಡುತ್ತಿದ್ದೆವು ಎಂದು ನರ್ಸ್ ಹೇಳಿಕೊಂಡಿದ್ದಾಳೆ. ನಂತರದ ವಿಚಾರಣೆಯ ಸಮಯದಲ್ಲಿ ತನ್ನ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಳು ನಡೆಯುತ್ತಿದ್ದು, ಇದೀಗಾಗಲೇ ನರ್ಸ್ನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:14 pm, Tue, 25 June 24