AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ‘ಅಪ್ಪಾ… ಇದು ಕಾಶ್ಮೀರ ಅಲ್ಲ, ಸ್ವರ್ಗ’; ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..

ಮಂಜಿನಲ್ಲಿ ಮುಳುಗಿದ ಕಾಶ್ಮೀರವನ್ನು ಕಂಡು ಪುಟ್ಟ ಬಾಲಕಿಯೊಬ್ಬಳು ಖುಷಿಯಿಂದ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಅಪ್ಪಾ... ಇದು ಕಾಶ್ಮೀರ ಅಲ್ಲ, ಇದು ಸ್ವರ್ಗ ಎಂದು ಬಾಲಕಿ ಹೇಳುತ್ತಿರುವುದು ವಿಡಿಯೋ ಸೆರೆಯಾಗಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

ಅಕ್ಷತಾ ವರ್ಕಾಡಿ
|

Updated on: Jun 25, 2024 | 6:13 PM

Share

ಶ್ರೀನಗರ: ಪುಟ್ಟ ಬಾಲಕಿಯೊಬ್ಬಳು ಕಾಶ್ಮೀರದ ಸೌಂದರ್ಯವನ್ನು ತನ್ನ ಮುದ್ದಾದ ದ್ವನಿಯಿಂದ ಹೊಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ. ಪಿಹು ಎಂಬ ಪುಟ್ಟ ಬಾಲಕಿ ದಾಲ್​​ ಸರೋವರದಲ್ಲಿನ ಶಿಕಾರಾ ಸವಾರಿಯನ್ನು ಆನಂದಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ನಾವು ಎಲ್ಲಿದೇವೆ? ಎಂದು ಬಾಲಕಿಯ ತಂದೆ ಕೇಳಿದಾಗ ನಾವು ಕಾಶ್ಮೀರದಲ್ಲಿದ್ದೇವೆ ಎಂದು ಉತ್ತರಿಸುತ್ತಾಳೆ. ಮೂಲತಃ ಪಂಜಾಬ್​​ನ ಜಲಂಧರ್​ನಲ್ಲಿ ಈ ಕುಟುಂಬ ಬಿಸಿಲಿನ ಬೇಗೆಯಲ್ಲಿ ಬೇಸತ್ತು ಹೇಗಿತ್ತು. ಬಿಸಿಲಿನಿಂದಾಗಿ ಈ ಪುಟ್ಟ ಬಾಲಕಿ ಪ್ರತೀ ದಿನ ಕಾಶ್ಮೀರಕ್ಕೆ ಹೋಗುವ ಎಂದು ತಂದೆಯನ್ನು ಹಠ ಹಿಡಿಯುತ್ತಿತ್ತು. ಮಗುವಿನ ಆಸೆಯಂತೆ ಕುಟುಂಬ ಕಾಶ್ಮೀರಕ್ಕೆ ಬಂದಿದೆ. ಪುಟ್ಟ ಬಾಲಕಿ ಖುಷಿ ತಡೆಯಲಾರದೇ ಕಾಶ್ಮೀರ ಸುಂದರವಾಗಿ ವರ್ಣಿಸಿದ್ದಾಳೆ. “ಪಾಪಾ , ಕಾಶ್ಮೀರ್​​​ ನಹೀ ಹೈ, ಜನ್ನತ್​ ಹೈ ಜನ್ನತ್​​​ (ಪಾಪಾ, ಇದು ಕಾಶ್ಮೀರ್ ಅಲ್ಲ, ಇದು ಸ್ವರ್ಗ) ಎಂದು ಪುಟ್ಟ ಬಾಲಕಿ ಖುಷಿಯಿಂದ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಮುಗ್ಧ ಮಗುವಿನ ಮಾತು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ​​​​​

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು