ಮುಸ್ಲಿಮರು ಒನ್‌ಸೈಡ್ ಮತ ಕೊಟ್ಟಿದ್ದಾರೆ: ಯೂಟರ್ನ್ ಹೊಡೆದ ಜಮೀರ್ ಅಹ್ಮದ್
Zameer Ahmed Khan controversial statement: ಲೋಕಸಭಾ ಚುನಾವಣೆಯಲ್ಲಿ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದ ಗೆದ್ದಿದ್ದಾರೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಚಿವರು ಮುಸ್ಲಿಮರ ಕೆಲಸ ಮಾಡಲೇಬೇಕು ಎಂದು ಹೇಳಿದ್ದ ಜಮೀರ್ ಅಹ್ಮದ್ ಇದೀಗ ಯೂಟರ್ನ್ ಹೊಡೆದಿದ್ದಾರೆ.
ಬೀದರ್, (ಜೂನ್ 25): ಮುಸ್ಲಿಂಮರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ (Eshwar Khandre) ತಲೆಬಾಗಿ ಮಾಡಬೇಕಾಗುತ್ತದೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ (Loksabha Elections 2024) ಬೀದರ್‌ನಲ್ಲಿ(Bidar) ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ (Sagar Khandre) ಮುಸ್ಲಿಮರ ಮತಗಳಿಂದ ಗೆದ್ದಿದ್ದಾರೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan ) ವಿವದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ ಇದರ ಬೆನ್ನಲ್ಲೇ ಇದೀಗ ಜಮೀರ್ ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮತದಿಂದ ಮಾತ್ರ ಬೀದರ್ ಕ್ಷೇತ್ರ ಗೆದ್ದಿದ್ದು: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಜಮೀರ್
ಬೀದರ್‌ನಲ್ಲಿ ಸ್ಪಷ್ಟನೆ ನೀಡಿರುವ ಜಮೀರ್, ಮುಸ್ಲಿಮರು ಒನ್‌ಸೈಡ್ ಮತ ನೀಡಿದ್ರು ಎಂದಿದ್ದೇನೆ. ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್‌ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ. ಕೇವಲ ಮುಸ್ಲಿಮರು ಮಾತ್ರವಲ್ಲ, ನೀವೆಲ್ಲ ಸೇರಿ ಮತ ನೀಡಿದ್ದೀರಿ. ಎಂಪಿನೂ ನಮ್ಮವರೂ, ಸಚಿವರೂ ನಮ್ಮವರಿದ್ದಾರೆ. ಆ ಕಾರಣಕ್ಕೆ ಗೆದ್ದಿದ್ದಾರೆ ಎಂದು ಹೇಳಿದ್ದೇನೆ. ಇಷ್ಟು ವರ್ಷ ನಮ್ಮ ಎಂಪಿ ಇರಲಿಲ್ಲ, ಬಿಜೆಪಿ ಎಂಪಿ ಇದ್ದರು. ಈಗ ನಮ್ಮ ಎಂಪಿ ಬಂದಿದ್ದಾರೆ, ಕೆಲಸ ಮಾಡಿಸಿಕೊಳ್ಳಬಹುದು ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ