Optical Illusion: ದೇಹಕ್ಕೆ ಹೇಗೆ ವ್ಯಾಯಾಮ ಬೇಕೋ ಹಾಗೆ ಮೆದುಳಿಗೂ ಕಸರತ್ತು ಬೇಕಾಗುತ್ತದೆ. ದಿನವಿಡೀ ಚೈತನ್ಯದಿಂದ ಅದು ಕಾರ್ಯ ನಿರ್ವಹಿಸಬೇಕೆಂದರೆ ಕೆಲಸದ ಮಧ್ಯೆ ಸಣ್ಣಸಣ್ಣ ವಿರಾಮ ತೆಗೆದುಕೊಂಡು ಮೆದುಳಿಗೆ ಬೇಕಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ಬ್ರೇನ್ ಟೀಸರ್ ಗಮನಿಸಿ. ಉದ್ಯಾನವನದಲ್ಲಿ ಇಷ್ಟೊಂದು ಮಕ್ಕಳು ಬೇರೆ ಬೇರೆ ಆಟವಾಡುತ್ತಿದ್ದಾರೆ. ಆದರೆ ಒಬ್ಬ ಬಾಲಕ ಮಾತ್ರ ಕಾಗದದ ವಿಮಾನದೊಂದಿಗೆ ಆಡುವಲ್ಲಿ ಮಗ್ನನಾಗಿದ್ದಾನೆ. ಆ ಬಾಲಕನನ್ನು ನೀವು ಕಂಡುಹಿಡಿಯಬಹುದೆ?
ನೆಟ್ಟಿಗರಲ್ಲಿ ಕೆಲವರು ಸವಾಲನ್ನು ಪರಿಹರಿಸಿದ್ದಾರೆ. ಇನ್ನೂ ಕೆಲವರಿಗೆ ಸಾಧ್ಯವಾಗಿಲ್ಲ. ಆದರೆ ಇಂಥ ಸವಾಲುಗಳಲ್ಲಿ ಆಸಕ್ತರಾಗಿರುವ ನಿಮಗೆ ಇದು ಸುಲಭವೆನ್ನಿಸುತ್ತದೆ. ತಾಳ್ಮೆ ಮತ್ತು ಬುದ್ಧಿವಂತಿಕೆಯುಳ್ಳ ನೀವು ಈ ಬ್ರೇನ್ ಟೀಸರ್ಗೆ ಉತ್ತರ ಕಂಡುಕೊಳ್ಳಬಲ್ಲಿರಿ.
ಹುಡುಕಿ ಕಾಗದದ ವಿಮಾನದೊಂದಿಗೆ ಆಡುತ್ತಿರುವ ಬಾಲಕನನ್ನು.
ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳೆಂದು ನಮಗೆ ಗೊತ್ತು. ಸಮಯಮಿತಿ ಏನೂ ಇಲ್ಲ. ಆರಾಮಾಗಿ ಹುಡುಕಿ. ಈ ಲಿಂಕ್ ಅನ್ನು ನಿಮ್ಮ ಸಹೋದ್ಯೋಗಿ, ಸ್ನೇಹಿತರು ಮತ್ತು ಕುಟುಂಬದವರಿಗೆ ಕಳಿಸಿ ಅವರ ಮೆದುಳಿಗೂ ಕೆಲಸ ಕೊಡಿ. ಏನಂತೀರಿ? ಸುಳಿವು ಬೇಕಾ? ಚಿತ್ರದ ಎಡಭಾಗದಲ್ಲಿ ಗಮನಿಸಿ. ಆ ಹುಡುಗ ಸಿಕ್ಕರೂ ಸಿಗಬಹುದು. ಆ ಹುಡುಗನ ಪಕ್ಕ ಅಂಬೆಗಾಲಿಟ್ಟು ಆಡುತ್ತಿರುವ ಪುಟ್ಟ ಹುಡುಗನೂ ಇದ್ದಾನೆ. ಸರಿ ಬಹಳ ಕಷ್ಟವಾಗುತ್ತಿದೆಯಾ? ಈ ಕೆಳಗಿನ ಚಿತ್ರವನ್ನು ನೋಡಿ ಹಾಗಿದ್ದರೆ.
ಉತ್ತರ ಇಲ್ಲಿದೆ!
ಈಗ ಗೊತ್ತಾಯಿತಲ್ಲವಾ? ಹೌದು ಸ್ವಲ್ಪ ಕಷ್ಟವೇ. ಇಷ್ಟು ದೊಡ್ಡ ಪಾರ್ಕಿನಲ್ಲಿ ಆಡುತ್ತಿರುವ ಇಷ್ಟೊಂದು ಮಕ್ಕಳು ಮತ್ತು ಜೊತೆಗಿರುವ ದೊಡ್ಡವರ ಮಧ್ಯೆ ಕಾಗದದ ವಿಮಾನ ಹಾರಿಸುತ್ತಿರುವ ಹುಡುಗನನ್ನು ಹುಡುಕುವುದು. ಇರಲಿ ನಿಮ್ಮ ಪ್ರಯತ್ನಕ್ಕೆ ಧನ್ಯವಾದ. ಮತ್ತೊಂದು ಸವಾಲಿನೊಂದಿಗೆ ಮತ್ತೆ ಸಿಗೋಣ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:13 pm, Thu, 18 May 23