500 ರೂ. ನೋಟಗಳನ್ನು ಮೈ ಮೇಲೆ ಸುರಿದು ಮಲಗಿರುವ ರಾಜಕಾರಣಿ; ಫೋಟೋ ವೈರಲ್​​​

|

Updated on: Mar 28, 2024 | 1:06 PM

ಅಸ್ಸಾಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡ ಬೆಂಜಮಿನ್ ಬಸುಮತಾರಿ 500 ರೂಪಾಯಿ ಮುಖ ಬೆಲೆ ರಾಶಿ ರಾಶಿ ನೋಟುಗಳನ್ನು ಮೈ ಮೇಲೆ ಹಾಕಿಕೊಂಡು ಮಲಗಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

500 ರೂ. ನೋಟಗಳನ್ನು ಮೈ ಮೇಲೆ ಸುರಿದು ಮಲಗಿರುವ ರಾಜಕಾರಣಿ; ಫೋಟೋ ವೈರಲ್​​​
Benjamin Basumatary
Follow us on

ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕಾರಣಿಯೊಬ್ಬರ ಫೋಟೋವೊಂದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಅಸ್ಸಾಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡ ಬೆಂಜಮಿನ್ ಬಸುಮತಾರಿ  ಅವರು 500 ರೂಪಾಯಿ ಮುಖ ಬೆಲೆ ರಾಶಿ ರಾಶಿ ನೋಟುಗಳನ್ನು ಮೈ ಮೇಲೆ ಹಾಕಿಕೊಂಡು ಮಲಗಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗೂ ಕಾರಣವಾಗಿದೆ. ಬೆಂಜಮಿನ್ ಬಸುಮತಾರಿ ಅವರ ವೈರಲ್​​ ಆದ ಫೋಟೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು

@rishi_raj93 ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​ 27 ರಂದು ಈ ಫೋಟೋ ಹಂಚಿಕೊಳ್ಳಲಾಗಿದೆ. ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಬಸುಮತಾರಿ “ಇದು ಹಳೆಯ ಫೋಟೋ, ಈ ನಗದು ನನ್ನದಲ್ಲ,ನನ್ನ ಸಹೋದರನ ಮನೆಯಲ್ಲಿ ಪಾರ್ಟಿಯ ವೇಳೆಯಲ್ಲಿ ಈ ರೀತಿ ಫೋಟೋ ತೆಗೆಯಲಾಗಿದೆ” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ