ದೆಹಲಿ: ಈಗಾಗಲೇ ಶಾಲೆ, ಕಾಲೇಜುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೀಗ ದೆಹಲಿ ವ್ಯಕ್ತಿಯೊಬ್ಬರು ತನ್ನ ಮಗನ ಸ್ಕೂಲ್ ಫೀಸ್ 4.3 ಲಕ್ಷ ರೂ. ಕಂಡು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಮಗ ಏನೂ ಎಂಬಿಎ, ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ಮಾಡುತ್ತಿರಬಹುದು ಅಂತ ನೀವು ಅಂದುಕೊಂಡಿರಬಹುದು. ಆದರೆ ಇದ್ಯಾವುದೂ ಅಲ್ಲ ಈ ವ್ಯಕ್ತಿಯ 3ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಸದ್ಯ ಮಗನ 2024-25ರ ಪ್ಲೇಸ್ಕೂಲ್ ಫೀಸ್ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲಡೆ ವೈರಲ್ ಆಗಿದೆ.
ವೃತ್ತಿಯಲ್ಲಿ ಸಿಎ ಆಗಿರುವ ಅಕಾಶ್ ಕುಮಾರ್ ಅವರು ಏಪ್ರಿಲ್ 12ರಂದು ತಮ್ಮ ಟ್ವಿಟರ್ ಖಾತೆಯಲ್ಲಿ(@AkashTrader) ತಮ್ಮ ಮಗನ ಸ್ಕೂಲ್ ಫೀಸ್ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. “ನನ್ನ ಮೂರು ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಈ ಫೀಸ್ಗಿಂತ ಕಡಿಮೆ ಹಣದಲ್ಲಿ ನನ್ನ ಸಂಪೂರ್ಣ ಶಿಕ್ಷಣವೇ ಮುಗಿದು ಹೋಗಿತ್ತು” ಎಂದು ಪೋಸ್ಟ್ಗೆ ಕ್ಯಾಪ್ಷನ್ ಬರೆದಿದ್ದಾರೆ.
My son’s Playschool fee is more than my entire education expense 🙂
I hope vo ache se khelna seekhle yaha! pic.twitter.com/PVgfvwQDuy
— Akash Kumar (@AkashTrader) April 12, 2024
ಇದನ್ನೂ ಓದಿ: ಅಮ್ಮನ ಕಛೇರಿಯಲ್ಲಿ ಬೇಸಿಗೆ ರಜೆ ಕಳೆದ ಐಎಎಸ್ ಅಧಿಕಾರಿಯ ತುಂಟ ಮಗ, ಇಲ್ಲಿದೆ ವಿಡಿಯೋ
ವೈರಲ್ ಫೋಟೋದಲ್ಲಿ ರಿಜಿಸ್ಟ್ರೇಶನ್ ಫೀಸ್ 10 ಸಾವಿರದಿಂದ ಪ್ರಾರಂಭವಾಗಿ ವಾರ್ಷಿಕ ಮೊತ್ತ 25,000 ರೂಪಾಯಿ ಹಾಗೆಯೇ ಒಟ್ಟು ಮೊತ್ತ 4ಲಕ್ಷದ 30 ಸಾವಿರನ್ನು ನಮೂದಿಸಿರುವುದನ್ನು ಕಾಣಬಹುದಾಗಿದೆ. ಈಫೀಸ್ ಕಂಡು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದು, “ನಿಮ್ಮ ಮಗ ಪ್ಲೇ ಸ್ಕೂಲ್ನಲ್ಲೇ ವಿರಾಟ್ ಕೊಹ್ಲಿ ರೀತಿ ಸೆಂಚುರಿ ಹೊಡೆಯುತ್ತಾನೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಸರ್ಕಾರಿ ಶಾಲೆಯೇ ಬೆಸ್ಟ್” ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 13 April 24