Viral Video: ಅಮ್ಮನ ಕಛೇರಿಯಲ್ಲಿ ಬೇಸಿಗೆ ರಜೆ ಕಳೆದ ಐಎಎಸ್ ಅಧಿಕಾರಿಯ ತುಂಟ ಮಗ, ಇಲ್ಲಿದೆ ವಿಡಿಯೋ
ಐಎಎಸ್ ಅಧಿಕಾರಿ ಪಮೇಲಾ ಸತ್ಪತಿ ತನ್ನ ಮಗ ಬೇಸಿಗೆಯ ರಜೆಯಲ್ಲಿ ಕಚೇರಿಗೆ ಬಂದು ಹೇಗೆಲ್ಲಾ ತುಂಟತನ ಮಾಡುತ್ತಾನೆ ಎಂದು ತೋರಿಸುವ ಮುದ್ದಾದ ವಿಡಿಯೋವೊಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ದೃಶ್ಯ ಇದೀಗ ನೆಟ್ಟಿಗರ ಮನ ಗೆದ್ದಿದೆ.
ಬೇಸಿಗೆ ರಜೆ ಆರಂಭವಾಗಿದೆ. ಈ ರಜಾ ದಿನಗಳಲ್ಲಿ ತುಂಟ ಮಕ್ಕಳನ್ನು ನಿಭಾಯಿಸುವುದೇ ಒಂದು ಕಷ್ಟದ ಕೆಲಸ. ಅದರಲ್ಲೂ ಹೊರಗಡೆ ಕೆಲಸಕ್ಕೆ ಹೋಗುವ ಅಮ್ಮಂದಿರು ಕೆಲಸ ಮತ್ತು ಮಕ್ಕಳನ್ನು ಒಟ್ಟಾಗಿ ನಿಭಾಯಿಸಲು ಹೆಣಗಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ತಮ್ಮ ಒತ್ತಡದ ಕೆಲಸದ ನಡುವೆಯೂ ವೃತ್ತಿ ಮತ್ತು ಮಗ ಈ ಎರಡೂ ಅಂಶವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವಂತಹ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು ಐಎಎಸ್ ಅಧಿಕಾರಿ ತಮ್ಮ ಮಗ ಬೇಸಿಗೆ ರಜೆಯನ್ನು ಆನಂದಿಸುತ್ತಿರುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ದೃಶ್ಯ ನೆಟ್ಟಿಗರ ಮನ ಗೆದ್ದಿದೆ. ವಿಡಿಯೋವನ್ನು ಐಎಎಸ್ ಅಧಿಕಾರಿ ಪಮೇಲಾ ಸತ್ಪತಿ (@PamelaSatpathy) ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
The most awaited time of the year has now become the most dreaded time of the year. SUMMER VACATION 🤕🤒
POV: You are a Boy Mum🥹#parenting #vacations pic.twitter.com/Fi8UIcimKN
— Pamela Satpathy (@PamelaSatpathy) April 11, 2024
ಇದನ್ನೂ ಓದಿ: 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ
ವೈರಲ್ ವಿಡಿಯೋದಲ್ಲಿ ಐಎಎಸ್ ಅಧಿಕಾರಿ ಪಮೇಲಾ ಸತ್ಪತಿಯವರು ತಮ್ಮ ಕಛೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ವೇಳೆ, ಬೇಸಿಗೆ ರಜೆಯಲ್ಲಿರುವ ಅವರ ಮಗ ನೀಲಿ ಹಾಗೂ ಕೆಂಪು ಬಣ್ಣದ ಸೂಪರ್ ಮ್ಯಾನ್ ಬಟ್ಟೆ ತೊಟ್ಟು ಮೇಜಿನ ಮೇಲೆ ಆಟವಾಡುತ್ತಾ, ತುಂಟತನ ಮಾಡುತ್ತಿರುವುದನ್ನು ಕಾಣಬಹುದು.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪುಟ್ಟ ಹುಡುಗನ ತುಂಟಾಟಕ್ಕೆ ನೋಡುಗರು ಮನಸೋತಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ