AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಮಗನ ಪ್ಲೇ ಸ್ಕೂಲ್ ಫೀಸ್ 4.3 ಲಕ್ಷ ರೂ.; ಫೀಸ್​​ ಸ್ಕ್ರೀನ್‌ಶಾಟ್ ಹಂಚಿಕೊಂಡ ತಂದೆ

ಅಕಾಶ್ ಕುಮಾರ್ ಎಂಬವರು ತಮ್ಮ ಟ್ವಿಟರ್​​ ಖಾತೆಯಲ್ಲಿ ತಮ್ಮ ಮಗನ ಸ್ಕೂಲ್ ಫೀಸ್​​ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. "ನನ್ನ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಈ ಫೀಸ್​​ಗಿಂತ​​ ಕಡಿಮೆ ಹಣದಲ್ಲಿ ನನ್ನ ಸಂಪೂರ್ಣ ಶಿಕ್ಷಣವೇ ಮುಗಿದು ಹೋಗಿತ್ತು" ಎಂದು ಪೋಸ್ಟ್​​​ಗೆ ಕ್ಯಾಪ್ಷನ್​ ಬರೆದಿದ್ದಾರೆ.

Viral Post: ಮಗನ ಪ್ಲೇ ಸ್ಕೂಲ್ ಫೀಸ್ 4.3 ಲಕ್ಷ ರೂ.; ಫೀಸ್​​ ಸ್ಕ್ರೀನ್‌ಶಾಟ್ ಹಂಚಿಕೊಂಡ ತಂದೆ
ಮಗನ ಪ್ಲೇ ಸ್ಕೂಲ್ ಫೀಸ್ 4.3 ಲಕ್ಷ ರೂ.
ಅಕ್ಷತಾ ವರ್ಕಾಡಿ
|

Updated on:Apr 13, 2024 | 12:24 PM

Share

ದೆಹಲಿ: ಈಗಾಗಲೇ ಶಾಲೆ, ಕಾಲೇಜುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೀಗ ದೆಹಲಿ ವ್ಯಕ್ತಿಯೊಬ್ಬರು ತನ್ನ ಮಗನ ಸ್ಕೂಲ್​​​ ಫೀಸ್​​ 4.3 ಲಕ್ಷ ರೂ. ಕಂಡು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಮಗ ಏನೂ ಎಂಬಿಎ, ಎಂಬಿಬಿಎಸ್​​​ ಅಥವಾ ಇಂಜಿನಿಯರಿಂಗ್​​ ಮಾಡುತ್ತಿರಬಹುದು ಅಂತ ನೀವು ಅಂದುಕೊಂಡಿರಬಹುದು. ಆದರೆ ಇದ್ಯಾವುದೂ ಅಲ್ಲ ಈ ವ್ಯಕ್ತಿಯ 3ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಸದ್ಯ ಮಗನ 2024-25ರ ಪ್ಲೇಸ್ಕೂಲ್ ಫೀಸ್​​ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲಡೆ ವೈರಲ್​​ ಆಗಿದೆ.

ವೃತ್ತಿಯಲ್ಲಿ ಸಿಎ ಆಗಿರುವ ಅಕಾಶ್ ಕುಮಾರ್ ಅವರು ಏಪ್ರಿಲ್​​ 12ರಂದು ತಮ್ಮ ಟ್ವಿಟರ್​​ ಖಾತೆಯಲ್ಲಿ(@AkashTrader) ತಮ್ಮ ಮಗನ ಸ್ಕೂಲ್ ಫೀಸ್​​ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. “ನನ್ನ ಮೂರು ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಈ ಫೀಸ್​​ಗಿಂತ​​ ಕಡಿಮೆ ಹಣದಲ್ಲಿ ನನ್ನ ಸಂಪೂರ್ಣ ಶಿಕ್ಷಣವೇ ಮುಗಿದು ಹೋಗಿತ್ತು” ಎಂದು ಪೋಸ್ಟ್​​​ಗೆ ಕ್ಯಾಪ್ಷನ್​ ಬರೆದಿದ್ದಾರೆ.

ಇದನ್ನೂ ಓದಿ: ಅಮ್ಮನ ಕಛೇರಿಯಲ್ಲಿ ಬೇಸಿಗೆ ರಜೆ ಕಳೆದ ಐಎಎಸ್ ಅಧಿಕಾರಿಯ ತುಂಟ ಮಗ, ಇಲ್ಲಿದೆ ವಿಡಿಯೋ

ವೈರಲ್​​ ಫೋಟೋದಲ್ಲಿ ರಿಜಿಸ್ಟ್ರೇಶನ್​​ ಫೀಸ್​​ 10 ಸಾವಿರದಿಂದ ಪ್ರಾರಂಭವಾಗಿ ವಾರ್ಷಿಕ ಮೊತ್ತ 25,000 ರೂಪಾಯಿ ಹಾಗೆಯೇ ಒಟ್ಟು ಮೊತ್ತ 4ಲಕ್ಷದ 30 ಸಾವಿರನ್ನು ನಮೂದಿಸಿರುವುದನ್ನು ಕಾಣಬಹುದಾಗಿದೆ. ಈಫೀಸ್​​​ ಕಂಡು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದು, “ನಿಮ್ಮ ಮಗ ಪ್ಲೇ ಸ್ಕೂಲ್​​​ನಲ್ಲೇ ವಿರಾಟ್​​ ಕೊಹ್ಲಿ ರೀತಿ ಸೆಂಚುರಿ ಹೊಡೆಯುತ್ತಾನೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಸರ್ಕಾರಿ ಶಾಲೆಯೇ ಬೆಸ್ಟ್​​​” ಎಂದು ಕಾಮೆಂಟ್​​ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:24 pm, Sat, 13 April 24

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್