ಸುಮಾರು 20 ರಿಂದ 30 ವರ್ಷಗಳ ಕಾಲ ತಂದೆಯ ಆಸರೆಯಲ್ಲಿ ಬೆಳೆದಿರುವ ಹೆಣ್ಣುಮಕ್ಕಳಿಗೆ ಮದುವೆಯಾಗಿ ಹೋಗುವ ಗಂಡನ ಮನೆ ತನ್ನ ತಂದೆಯ ಮನೆಗಿಂತ ಅನುಕೂಲವಾಗಿರಬೇಕು ಎಂದು ಬಯಸುವುದು ಸಾಮಾನ್ಯ ಯಾಕೆಂದರೆ ಉಳಿದ ಆಯಸ್ಸನ್ನು ಅವರು ಆ ಮನೆಯಲ್ಲೇ ಕಳೆಯುತ್ತಾರೆ.
ಈಗ ಆನ್ಲೈನ್ನಲ್ಲಿ ವೈರಲ್ ಆಗಿರುವ ಪೋಸ್ಟ್ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಈಗಿನ ಹೆಣ್ಣುಮಕ್ಕಳು ತನ್ನ ಗಂಡನಾಗುವವನಿಗೆ ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು, ಅತ್ತೆ ಮಾವ ಇರಬಾರದು, 3 ಬಿಎಚ್ಕೆ ಮನೆ ಇರಬೇಕು ಎಂದು ಬಯಸುತ್ತಾರೆ ಎನ್ನುವುದನ್ನು ಆ ಪೋಸ್ಟ್ ಹೇಳುತ್ತದೆ.
ಈ ಪೋಸ್ಟ್ ಮಾಡಿರುವ ಮಹಿಳೆ ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಗಳಿಸುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆ, ಭಾರತ, ಯುಎಸ್ ಅಥವಾ ಯುರೋಪ್‌ನಲ್ಲಿ ನೆಲೆಸಿರುವ ಸಂಗಾತಿ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಹೊಂದಿರಬೇಕು ಎಂದು ಹುಡುಕುತ್ತಿದ್ದಾರೆ.
ಇನ್ನು ತಂದೆ ತಾಯಿಯಂತೂ ಇರಲೇಬಾರದು, ವಾಸಿಸಲು 3 ಬಿಎಚ್ಕೆ ಸ್ವಂತ ಮನೆ ಇರಬೇಕು, ಮನೆಗೆಲಸವನ್ನು ತಾನು ಮಾಡುವುದಿಲ್ಲ, ಅದಕ್ಕೂ ಕೆಲಸದವರಿರಬೇಕು. ಅತ್ತೆ-ಮಾವ ಇದ್ದರೂ ಪ್ರತ್ಯೇಕವಾಗಿರಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Viral: ಅಬ್ಬಬ್ಬಾ ಎಂಥಾ ಫ್ರೆಂಡ್‌ಶಿಪ್ ನೋಡಿ, ಬೆಸ್ಟ್ ಫ್ರೆಂಡ್ ಕಚ್ಚಿದ ಗುರುತಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ
ಅವರು ಸಾಫ್ಟ್ವೇರ್ ಎಂಜಿನಿಯರ್, ಎಂಬಿಎ ಅಥವಾ ಎಂಎಸ್ ಓದಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.
ಇದು ಆನ್ಲೈನ್ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಆಕೆ ವಿಚ್ಛೇದಿತಳಾಗಿದ್ದರೂ, ಅವಿವಾಹಿತ ಯುವಕನನ್ನು ಹುಡುಕುತ್ತಿದ್ದಾಳೆ. ಆಕೆಯ ಪೋಷಕರು ಆಕೆಯೊಂದಿಗೆ ಇರುತ್ತಾರೆ, ಆದರೆ ಅತ್ತೆ-ಮಾವ ಅಲ್ಲ.
Her qualities and salary 🤡
Expected husbands qualities and salary🗿🗿 pic.twitter.com/NGgJvVvN9l— ShoneeKapoor (@ShoneeKapoor) September 10, 2024
ಆಕೆಯ ತಿಂಗಳ ವೇತನ 11000 ಮನೆಗೆಲಸದವರೂ ಈಕೆಗಿಂತ ಹೆಚ್ಚು ಹಣ ಗಳಿಸುತ್ತಾರೆ ಎಂದು ಬರೆದಿದ್ದಾರೆ.
ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ಮದುವೆ ವ್ಯಾಪಾರದ ಒಪ್ಪಂದದಂತಾಗಿದೆ ಎಂದು ಹೇಳಿದರೆ ಇನ್ನೊಬ್ಬರು ಆಕೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾಳೆ ಎಂದು ಬರೆದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 am, Thu, 12 September 24