Viral: ಇದೇನಪ್ಪಾ ವಿಚಿತ್ರ ಚೀನಾದಲ್ಲಿ ಕಾಣಿಸಿಕೊಂಡ ʼಅಂಡರ್‌ವೇರ್‌ʼ ಚಂಡ ಮಾರುತ

ಚೀನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಚಂಡಮಾರುತದ ರಭಸಕ್ಕೆ ಆಕಾಶದಲ್ಲಿ ಭಾರೀ ಪ್ರಮಾಣದ ಒಳ ಉಡುಪುಗಳು ಹಾರಿ ಹೋಗಿವೆ. ಒಳ ಉಡುಪುಗಳು ಹಾರಿ ಹೋಗುವುದನ್ನು ಕಂಡು ಅಲ್ಲಿನ ಜನ ಆಶ್ಚರ್ಯಚಕಿತರಾಗಿದ್ದಾರೆ. ಅಂಡರ್‌ವೇರ್‌ ಚಂಡ ಮಾರುತದ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

Viral: ಇದೇನಪ್ಪಾ ವಿಚಿತ್ರ ಚೀನಾದಲ್ಲಿ ಕಾಣಿಸಿಕೊಂಡ ʼಅಂಡರ್‌ವೇರ್‌ʼ ಚಂಡ ಮಾರುತ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2024 | 10:38 AM

ಪ್ರಸ್ತುತ ಚೀನಾದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಯ ಶಾಖವನ್ನು ತಡೆಯಲಾರದೆ ಜನ ಒದ್ದಾಡುತ್ತಿದ್ದು, ಮಳೆ ಬಂದ್ರೆ ಸಾಕಪ್ಪಾ ಎಂದು ಪ್ರಾರ್ಥನೆ ಮಾಡ್ತಿದ್ದಾರೆ. ಆದ್ರೆ ಈ ಸಮಯದಲ್ಲಿ ಮಳೆಯ ಬದಲಿಗೆ ಇಲ್ಲಿ ಆಕಾಶದಿಂದ ಅಂಡರ್‌ವೇರ್‌ ಮಳೆ ಸುರಿದಿದ್ದು, ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿನ ಜನ ಫುಲ್‌ ಶಾಕ್‌ ಆಗಿದ್ದಾರೆ. ಈ ಕುರಿತ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ವರದಿಗಳ ಪ್ರಕಾರ ಸೆಪ್ಟೆಂಬರ್‌ 2 ರಂದು ಚೀನಾದ ಚಾಂಗ್ಕಿಂಗ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಚಂಡ ಮಾರುತದಿಂದ ಉಂಟಾದ ಗಾಳಿಯ ರಭಸಕ್ಕೆ ಆಕಾಶದಲ್ಲಿ ರಾಶಿ ರಾಶಿ ಒಳ ಉಡುಪುಗಳು ಹಾರಿ ಹೋಗಿವೆ. ಚೀನಾದ ಚಾಂಗ್‌ಕಿಂಗ್‌ ನಗರದಲ್ಲಿ ಬಿಸಿಲಿನ ತಾಪ ತೀರಾ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಈ ಶಾಖದ ವಾತಾವರಣದಿಂದ ಜನರಿಗೆ ಕೊಂಚ ಮುಕ್ತಿ ನೀಡಲು ಅಧಿಕಾರಿಗಳು ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸಲು ನಿರ್ಧರಿಸಿದ್ದರು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಅದೇ ಸಮಯದಲ್ಲಿ ಉಂಟಾದ ಚಂಡ ಮಾರುತದ ಕಾರಣ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಜನರು ತಮ್ಮ ತಮ್ಮ ಮನೆಗಳ ಬಾಲ್ಕಣಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು ಹಾಗೂ ಭಾರೀ ಪ್ರಮಾಣದ ಒಳ ಉಡುಪುಗಳು ಹಾರಿ ಹೋಗಿವೆ. ಒಳ ಉಡುಪುಗಳ ಸಂಖ್ಯೆ ಎಷ್ಟಿತ್ತೆಂದರೆ ಆಕಾಶದಲ್ಲಿ ಬರಿ ಒಳ ಉಡುಪುಗಳೇ ಕಾಣುತ್ತಿದ್ದವು. ಇದರ ನಂತರ ಚೀನಾದ ಜನರು ಈ ಘಟನೆಯನ್ನು ʼ9/2 ಚಾಂಗ್ಕಿಂಗ್‌ ಅಂಡರ್‌ವೇರ್‌ ಕ್ರೈಸಿಸ್‌ʼ ಎಂದು ಹೆಸರಿಸಿದ್ದಾರೆ. ಘಟನೆಯ ನಂತರ ಈ ಚಂಡಮಾರುತವು ಮೋಡ ಬಿತ್ತನೆಯಿಂದಾಗಿ ಉಂಟಾಗಿಲ್ಲ, ಇದು ನೈಸರ್ಗಿಕರವಾಗಿಯೇ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ತೆ-ಮಾವ ಇರಬಾರ್ದು, ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು ಇಂಥಾ ಪತಿಯೇ ಬೇಕು, ಚರ್ಚೆ ಹುಟ್ಟುಹಾಕಿದ ಪೋಸ್ಟ್​

ಈ ಕುರಿತ ವಿಡಿಯೋವೊಂದನ್ನು NoToEvils ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಗಾಳಿಯ ರಭಸಕ್ಕೆ ಎಲ್ಲೆಂದರಲ್ಲಿ ಒಳ ಉಡುಪುಗಳು ಹಾರಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಇದೇನಪ್ಪಾ ವಿಚಿತ್ರ ಎಂದು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ