ಅತ್ತೆ-ಮಾವ ಇರಬಾರ್ದು, ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು ಇಂಥಾ ಪತಿಯೇ ಬೇಕು, ಚರ್ಚೆ ಹುಟ್ಟುಹಾಕಿದ ಪೋಸ್ಟ್​

ಪತಿ ಹೇಗಿರಬೇಕು ಎನ್ನುವ ಕುರಿತು ಮಹಿಳೆಯೊಬ್ಬಳು ಮಾಡಿದ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ. ತನ್ನ ತಂದೆತಾಯಿ ತನ್ನೊಂದಿಗಿರಬೇಕು ಎಂದು ಹೇಳುವ ಮಹಿಳೆ ಗಂಡನ ತಂದೆ-ತಾಯಿ ಜತೆಗಿರಬಾರದು ಎಂದು ಹೇಳಿದ್ದಾರೆ. ಈ ಪೋಸ್ಟ್​ ಕುರಿತು ಚರ್ಚೆ ಎದ್ದಿದೆ.

ಅತ್ತೆ-ಮಾವ ಇರಬಾರ್ದು, ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು ಇಂಥಾ ಪತಿಯೇ ಬೇಕು, ಚರ್ಚೆ ಹುಟ್ಟುಹಾಕಿದ ಪೋಸ್ಟ್​
ಮದುವೆImage Credit source: Marketwatch
Follow us
ನಯನಾ ರಾಜೀವ್
|

Updated on:Sep 12, 2024 | 10:21 AM

ಸುಮಾರು 20 ರಿಂದ 30 ವರ್ಷಗಳ ಕಾಲ ತಂದೆಯ ಆಸರೆಯಲ್ಲಿ ಬೆಳೆದಿರುವ ಹೆಣ್ಣುಮಕ್ಕಳಿಗೆ ಮದುವೆಯಾಗಿ ಹೋಗುವ  ಗಂಡನ ಮನೆ ತನ್ನ ತಂದೆಯ ಮನೆಗಿಂತ ಅನುಕೂಲವಾಗಿರಬೇಕು ಎಂದು ಬಯಸುವುದು ಸಾಮಾನ್ಯ ಯಾಕೆಂದರೆ ಉಳಿದ ಆಯಸ್ಸನ್ನು ಅವರು ಆ ಮನೆಯಲ್ಲೇ ಕಳೆಯುತ್ತಾರೆ.

ಈಗ ಆನ್​ಲೈನ್​ನಲ್ಲಿ ವೈರಲ್ ಆಗಿರುವ ಪೋಸ್ಟ್​ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಈಗಿನ ಹೆಣ್ಣುಮಕ್ಕಳು ತನ್ನ ಗಂಡನಾಗುವವನಿಗೆ ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು, ಅತ್ತೆ ಮಾವ ಇರಬಾರದು, 3 ಬಿಎಚ್​ಕೆ ಮನೆ ಇರಬೇಕು ಎಂದು ಬಯಸುತ್ತಾರೆ ಎನ್ನುವುದನ್ನು ಆ ಪೋಸ್ಟ್​ ಹೇಳುತ್ತದೆ.

ಈ ಪೋಸ್ಟ್​ ಮಾಡಿರುವ ಮಹಿಳೆ ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಗಳಿಸುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆ, ಭಾರತ, ಯುಎಸ್ ಅಥವಾ ಯುರೋಪ್‌ನಲ್ಲಿ ನೆಲೆಸಿರುವ ಸಂಗಾತಿ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಹೊಂದಿರಬೇಕು ಎಂದು ಹುಡುಕುತ್ತಿದ್ದಾರೆ.

ಇನ್ನು ತಂದೆ ತಾಯಿಯಂತೂ ಇರಲೇಬಾರದು, ವಾಸಿಸಲು 3 ಬಿಎಚ್​ಕೆ ಸ್ವಂತ ಮನೆ ಇರಬೇಕು, ಮನೆಗೆಲಸವನ್ನು ತಾನು ಮಾಡುವುದಿಲ್ಲ, ಅದಕ್ಕೂ ಕೆಲಸದವರಿರಬೇಕು. ಅತ್ತೆ-ಮಾವ ಇದ್ದರೂ ಪ್ರತ್ಯೇಕವಾಗಿರಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Viral: ಅಬ್ಬಬ್ಬಾ ಎಂಥಾ ಫ್ರೆಂಡ್‌ಶಿಪ್‌ ನೋಡಿ, ಬೆಸ್ಟ್‌ ಫ್ರೆಂಡ್‌ ಕಚ್ಚಿದ ಗುರುತಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ

ಅವರು ಸಾಫ್ಟ್​ವೇರ್​ ಎಂಜಿನಿಯರ್, ಎಂಬಿಎ ಅಥವಾ ಎಂಎಸ್ ಓದಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಇದು ಆನ್​ಲೈನ್​ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಆಕೆ ವಿಚ್ಛೇದಿತಳಾಗಿದ್ದರೂ, ಅವಿವಾಹಿತ ಯುವಕನನ್ನು ಹುಡುಕುತ್ತಿದ್ದಾಳೆ. ಆಕೆಯ ಪೋಷಕರು ಆಕೆಯೊಂದಿಗೆ ಇರುತ್ತಾರೆ, ಆದರೆ ಅತ್ತೆ-ಮಾವ ಅಲ್ಲ.

ಆಕೆಯ ತಿಂಗಳ ವೇತನ 11000 ಮನೆಗೆಲಸದವರೂ ಈಕೆಗಿಂತ ಹೆಚ್ಚು ಹಣ ಗಳಿಸುತ್ತಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ಮದುವೆ ವ್ಯಾಪಾರದ ಒಪ್ಪಂದದಂತಾಗಿದೆ ಎಂದು ಹೇಳಿದರೆ ಇನ್ನೊಬ್ಬರು ಆಕೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾಳೆ ಎಂದು ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:57 am, Thu, 12 September 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು