Viral Video: ಕಾರು ಹರಿದು 3 ವರ್ಷದ ಮಗು ಸಾವು; ಭೀಕರ ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಮನೆಯ ಮುಂಭಾಗದ ರಸ್ತೆಯಲ್ಲಿ ಮಗು ಕುಳಿತು ಆಟವಾಡುತ್ತಿದ್ದ ವೇಳೆ ಕಾರು ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗುವಿನ ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾನ್ಪುರ : ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮನೆಯ ಮುಂಭಾಗದ ನಡು ರಸ್ತೆಯಲ್ಲೇ ಮಗು ಕುಳಿತು ಆಟವಾಡುತ್ತಿದ್ದ ವೇಳೆ ಕಾರು ಮಗುವಿನ ಮೇಲೆ ಹರಿದು ಹೋಗಿದ್ದು, ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಘಟನೆ ಮಂಗಳವಾರ (ಸೆಪ್ಟೆಂಬರ್ 10) ಬರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ರಾ 07 ರಲ್ಲಿ ಸಂಭವಿಸಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಗು ಕಿರಿದಾದ ಓಣಿಯಲ್ಲಿ ಕುಳಿತು ನಡುರಸ್ತೆಯಲ್ಲಿ ಕುಳಿತು ಆಟವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗು ಆಟವಾಡುತ್ತಿರುವ ರಸ್ತೆಯ ಬದಿಯಲ್ಲಿ ಆಟೋ ರಿಕ್ಷಾ ಕೂಡ ನಿಂತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
कानपुर में घर के बाहर सड़क पर खेल रही मासूम बच्ची को कार चालक ने रौंदा,मौके पर बच्ची की दर्दनाक मौत। बच्ची को कुचलकर कर कार चालक मौके से हुआ फरार। बर्रा थाना क्षेत्र की घटना।@kanpurnagarpol@dcpskanpur@Uppolice@shubham_kanpur#Kanpur pic.twitter.com/1ldShjCXk8
— Shyam Tiwari (@Shyamtiwariknp) September 11, 2024
ಇದನ್ನೂ ಓದಿ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ಬೆಚ್ಚಿಬಿದ್ದ ವೈದ್ಯರು
@Shyamtiwariknp ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೋಷಕರ ನಿರ್ಲಕ್ಷ್ಯದ ಕುರಿತು ಕೂಡ ನೆಟ್ಟಿಗರು ಕಿಡಿಕಾರಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ