ಮಹಾರಾಷ್ಟ್ರ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ಬೆಚ್ಚಿಬಿದ್ದ ವೈದ್ಯರು
ಸಿಸೇರಿಯನ್ ಮಾಡಿ ನಾಲ್ಕು ತಿಂಗಳು ಕಳೆದರೂ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಿಸಿದ ವೇಳೆ ಹೊಟ್ಟೆಯೊಳಗೆ ಬಟ್ಟೆಯೊಂದು ಇರುವುದು ಪತ್ತೆಯಾಗಿದೆ. ಸಿ-ಸೆಕ್ಷನ್ ಸಮಯದಲ್ಲಿ ವೈದ್ಯರು ರಕ್ತವನ್ನು ಸ್ವಚ್ಛಗೊಳಿಸಲು ಬಳಸಲಾದ ಬಟ್ಟೆಯನ್ನು ಹಾಗೆಯೇ ಮರೆತು ಹೊಲಿಗೆ ಹಾಕಿರುವುದು ತಿಳಿದುಬಂದಿದೆ.
ಮಹಾರಾಷ್ಟ್ರ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ವೈದ್ಯರು ಬೆಚ್ಚಿಬಿದ್ದ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ. ಮಹಿಳೆಗೆ ಈ ಹಿಂದೆ ಲಾತೂರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಆಗಿದ್ದು, ಈ ವೇಳೆ ಬಳಸಿದ ಬಟ್ಟೆಯೊಂದನ್ನು ಸಿಸೇರಿಯನ್ ಮಾಡಿದ ವೈದ್ಯರು ಹೊಟ್ಟೆಯೊಳಗೆ ಹಾಗೆಯೇ ಮರೆತು ಹೊಲಿಗೆ ಹಾಕಿದ್ದಾರೆ. ಇದರಿಂದ ಮಹಿಳೆ ತೀವ್ರ ಹೊಟ್ಟೆ ನೋವು ಉಂಟಾಗಿದ್ದು, ಇದೀಗ CT ಸ್ಕ್ಯಾನ್ ವೇಳೆ ಹೊಟ್ಟೆಯೊಳಗೆ ಬಟ್ಟೆಯಿರುವುದು ಪತ್ತೆಯಾಗಿದೆ.
ಸಿಸೇರಿಯನ್ ಮಾಡಿ ನಾಲ್ಕು ತಿಂಗಳು ಕಳೆದರೂ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಎಷ್ಟೋ ಬಾರಿ ಔಷಧೋಪಚಾರ ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ.
महाराष्ट्र के लातूर से एक सरकारी अस्पताल का बेहद ही हैरान करने वाला मामला सामने आया है
यहां सिजेरियन ऑपरेशन के दौरान ब्लड साफ करने वाला कपड़ा महिला के पेट में ही छोड़ दिया.
चार महीने बाद जब महिला के पेट में दर्द शुरू हुआ तो उसे एक निजी अस्पताल ले जाया गया, जहां सीटी स्कैन में… pic.twitter.com/CNBOEiEGm5
— Priya singh (@priyarajputlive) September 11, 2024
ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ಕಾಣಿಸಿಕೊಂಡ ಹೆರಿಗೆ ನೋವು; ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡ
ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಸಿ-ಸೆಕ್ಷನ್ ಸಮಯದಲ್ಲಿ ವೈದ್ಯರು ರಕ್ತವನ್ನು ಸ್ವಚ್ಛಗೊಳಿಸಲು ಬಳಸಲಾದ ಬಟ್ಟೆಯನ್ನು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಒಂದೂವರೆ ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಮಹಿಳೆಯ ಹೊಟ್ಟೆಯಿಂದ ಬಟ್ಟೆಯನ್ನು ಹೊರತೆಗೆದಿದ್ದಾರೆ. ಏತನ್ಮಧ್ಯೆ, ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ