Viral Post: ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಬಿಕಿನಿ; ಫೋಸ್ಟ್​​ ವೈರಲ್

ದೆಹಲಿಯ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚಿಗಷ್ಟೇ ಬ್ಲಿಂಕಿಟ್ ಆಪ್ ಮೂಲಕ ಪುರುಷರ ಒಳಉಡುಪುಗಳನ್ನು ಆರ್ಡರ್​​ ಮಾಡಿದ್ದಾರೆ. ಅದರಂತೆ ಬ್ಲಿಂಕಿಟ್ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಪ್ರಿಯಾಂಶ್ ಒಳಉಡುಪು ಆರ್ಡರ್ ಮಾಡಿದ್ದು, ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ.

Viral Post: ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಬಿಕಿನಿ; ಫೋಸ್ಟ್​​ ವೈರಲ್
ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಬಿಕಿನಿImage Credit source: Twitter
Follow us
ಅಕ್ಷತಾ ವರ್ಕಾಡಿ
|

Updated on: Sep 10, 2024 | 12:42 PM

ಇತ್ತೀಚಿನ ಕೆಲವು ವರ್ಷಗಳಲ್ಲಿ, ಜನರಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಆಹಾರದಿಂದ ಹಿಡಿದು ಬಟ್ಟೆ ಬರೆ, ಎಲೆಕ್ಟ್ರಾನಿಕ್ ವಸ್ತುಗಳ ವರೆಗೆ ಎಲ್ಲವನ್ನು ಆನ್ಲೈನ್ನಲ್ಲಿ ಆರ್ಡರ್​​ ಮಾಡುವವರೇ ಹೆಚ್ಚು. ಆನ್‌ಲೈನ್ ಶಾಪಿಂಗ್‌ನಲ್ಲಿ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಪ್ರಸಂಗಗಳೂ ಇವೆ. ಇದೀಗ ಇಂತದ್ದೇ ಘಟನೆಯೊಂದು ನಡೆದಿದೆ. ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಬಿಕಿನಿ ಡೆಲಿವರಿ ಆಗಿದ್ದು, ಬಿಕಿನಿ ಕಂಡು ಈತ ತಲೆ ಮೇಲೆ ಕೈ ಇಟ್ಟು ಕುಳಿತ್ತಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಪೋಸ್ಟ್​​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

​​​ದೆಹಲಿಯ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚಿಗಷ್ಟೇ ಬ್ಲಿಂಕಿಟ್ ಆಪ್ ಮೂಲಕ ಪುರುಷರ ಒಳಉಡುಪುಗಳನ್ನು ಆರ್ಡರ್​​ ಮಾಡಿದ್ದಾರೆ. ಅದರಂತೆ ಬ್ಲಿಂಕಿಟ್ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಪ್ರಿಯಾಂಶ್ ಪುರುಷರ ಒಳಚಡ್ಡಿ ಆರ್ಡರ್ ಮಾಡಿದರೆ ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ. ಇದನ್ನು ಕಂಡು ಶಾಕ್​ ಆದ ಪ್ರಿಯಾಂಶ್ ತಕ್ಷಣ ಬ್ಲಿಂಕಿಟ್ ಕಸ್ಟಮರ್​​ ಕೇರ್​ಗೆ ಕರೆಮಾಡಿ ದೂರು ನೀಡಿದ್ದಾರೆ. ಹಣ ರೀಫಂಡ್ ಮಾಡುವಂತೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡದ ಕಾರಣ, ಇವರು ತಮಗಾದ ಅನುಭವವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಹದಿಹರೆಯದ ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ

@priyansh_who ಎಂಬ ಟ್ವಿಟರ್​ ಖಾತೆಯಲ್ಲಿ ಡೆಲಿವರಿ ಆದ ಬಿಕಿನಿಯ ಫೋಟೋ ಹಂಚಿಕೊಂಡು ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ. ಸೆ.07 ರಂದು ಹಂಚಿಕೊಂಡಿರುವ ಈ ಪೋಸ್ಟ್​ ಕೇವಲ ಮೂರು ದಿನದಲ್ಲಿ 3.7 ಮಿಲಿಯನ್​ ಅಂದರೆ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ಪೋಸ್ಟ್​​​​​ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ