ಬೀದಿ ಬದಿಯಲ್ಲಿ ಹಾಕಲಾಗಿದ್ದ ಜಾಹೀರಾತು ಪೋಸ್ಟರ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸ್ಥಳೀಯ ಮೊಮೊಸ್ ಅಂಗಡಿಗೆ ಹೆಲ್ಪರ್ ಬೇಕಾಗಿದ್ದು, ತಿಂಗಳಿಗೆ 25 ಸಾವಿರ ರೂ. ಸಂಬಳ ನೀಡುವುದಾಗಿ ಜಾಹೀರಾತಿನಲ್ಲಿ ಬರೆಯಲಾಗಿದೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ‘ಡಿಗ್ರಿ, ಪೋಸ್ಟ್ ಗ್ಯಾಜುವೇಶನ್ ಎಲ್ಲ ವೇಸ್ಟ್’ ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
@puttuboy25 ಎಂಬ ಟ್ವಿಟರ್ ಖಾತೆಯಲ್ಲಿ ಏಪ್ರಿಲ್ 08ರಂದು ಈ ಜಾಹೀರಾತಿನ ಪೋಸ್ಟ್ ಹಂಚಿಕೊಳ್ಳಲಾಗಿದೆ. ಫೋಟೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 90ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ‘ಡಿಗ್ರಿ, ಪೋಸ್ಟ್ ಗ್ಯಾಜುವೇಶನ್ ಮಾಡಿದವರಿಗೆ ಪ್ರಾರಂಭದಲ್ಲಿ ಕಂಪೆನಿಯಲ್ಲಿ ಸಿಗುವ ಸಂಬಳಕ್ಕಿಂತ ಈ ಸ್ಥಳೀಯ ಮೊಮೊ ಅಂಗಡಿಯು ಉತ್ತಮ ಪ್ಯಾಕೇಜ್ ನೀಡುತ್ತಾ ಇದೆ’ ಎಂದು ಪೋಸ್ಟ್ಗೆ ಕ್ಯಾಪ್ಷನ್ ಬರೆಯಲಾಗಿದೆ.
Damn this local momo shop is offering a better package than the average college in India these days pic.twitter.com/ectNX0mc18
— Amrita Singh (@puttuboy25) April 8, 2024
ಇದನ್ನೂ ಓದಿ: ನಾವು ಸ್ವಲ್ಪ ಡಿಫರೆಂಟ್ ಕಣ್ರೀ, ಕೇಕ್ ಬದಲು ಪಪ್ಪಾಯಿ ಹಣ್ಣು ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವ್ಯಕ್ತಿ
ಒಬ್ಬ ಬಳಕೆದಾರರು ತಮಾಷೆಯ ಧ್ವನಿಯಲ್ಲಿ ಕಾಮೆಂಟ್ ಮಾಡಿದ್ದಾರೆ, ನಾನು ಸಹೋದರನನ್ನು ಸೇರಿಸಲು ಹೋಗುತ್ತಿದ್ದೇನೆ. ಓದಿದರೂ ಅಷ್ಟು ಸಂಬಳ ಸಿಗಲಿಲ್ಲ. ಇನ್ನೊಬ್ಬರು ಹೇಳಿದರೆ, ನಾನು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮೊದಲ ಸಂಬಳ 10 ಸಾವಿರ ರೂ. ಈ ಜಾಹೀರಾತನ್ನು ನೋಡಿದರೆ ಮೊಮೊಸ್ ಅಂಗಡಿಯಿಂದಲೇ ಕೆಲಸ ಶುರು ಮಾಡಬೇಕಿತ್ತು ಎನಿಸುತ್ತದೆ. ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ, ನಮ್ಮ ಪ್ರದೇಶದಲ್ಲಿ ಪ್ಲಂಬರ್‌ಗಳು ಕೂಡ ತಿಂಗಳಿಗೆ 50 ಸಾವಿರ ರೂ. ಸಂಬಳ ಪಡೆಯುತ್ತಾನೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ