ಗಂಡು ಬೊಂಬೆ ಜತೆ ಮದುವೆಯಾದ 25ರ ಯುವತಿ, ಹೆಣ್ಣು ಬೊಂಬೆ ಜತೆ ದೈಹಿಕ ಸಂಪರ್ಕ
ಈ ಜಗತ್ತಿನಲ್ಲಿ ಹಲವಾರು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂಹತ ಸಂಗತಿಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, 25 ವರ್ಷ ವಯಸ್ಸಿನ ಯುವತಿಯೊಬ್ಬಳು ಜೀವವಿಲ್ಲದ ಗಂಡು ಬೊಂಬೆಯನ್ನು ಮದುವೆಯಾಗಿದ್ದಾಳೆ.
ಈಗ ಕಾಲ ತುಂಬಾನೇ ಬದಲಾಗಿದೆ. ಮದುವೆಯ ವಿಚಾರದಲ್ಲೂ ಇದನ್ನು ನಾವು ಕಾಣಬಹುದು. ಹಿಂದೆಲ್ಲಾ ಒಂದು ಹೆಣ್ಣಿಗೆ ಒಂದು ಗಂಡು ಎಂಬ ಸಂಪ್ರದಾಯವಿತ್ತು. ಆದರೆ ಈಗ ಹೆಣ್ಣು ಹೆಣ್ಣು, ಗಂಡು ಗಂಡು ಮದುವೆಯಾಗುವಂತಹ ಸುದ್ದಿಗಳು ಕೇಳಿಬರುತ್ತಿವೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇಲ್ಲೊಬ್ಬಳು ಯುವತಿ ಜೀವವಿಲ್ಲದ ಗಂಡು ಬೊಂಬೆಯನ್ನೇ ಮದುವೆಯಾಗಿದ್ದಾಳೆ.
ಈ ಘಟನೆ ಅಮೇರಿಕಾದ ಮ್ಯಾಸಚುಸೆಟ್ಸ್ ನಲ್ಲಿ ನಡೆದಿದ್ದು, ಇಲ್ಲಿನ 25 ವರ್ಷ ವಯಸ್ಸಿನ ಯುವತಿಯಾದ ಫೆಲಿಸಿಟಿ ಕ್ಯಾಡ್ಲೆಕ್ ಎಂಬಾಕೆ ರಾಬರ್ಟ್ ಹೆಸರಿನ ಆರು ಅಡಿ ಎತ್ತರದ ಗಂಡು ಬೊಂಬೆಯನ್ನು ಮದುವೆಯಾಗಿದ್ದಾಳೆ. ಈ ಹಿಂದೆ ಆಕೆ 2018 ರಲ್ಲಿ ಕೆಲ್ಲಿ ರೊಸ್ಸಿ ಎಂಬ ಹೆಸರಿನ ಹೆಣ್ಣು ಬೊಂಬೆಯನ್ನು ಮದುವೆಯಾಗಿದ್ದಳು. ಇದೀಗ ಆಕೆ ಗಂಡು ಬೊಂಬೆಯಂದಿಗೆ ಎರಡನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾಳೆ.
ಇದನ್ನೂ ಓದಿ: ನಾವು ಸ್ವಲ್ಪ ಡಿಫರೆಂಟ್ ಕಣ್ರೀ, ಕೇಕ್ ಬದಲು ಪಪ್ಪಾಯಿ ಹಣ್ಣು ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವ್ಯಕ್ತಿ
ವೈರಲ್ ಫೋಟೋ ಇಲ್ಲಿದೆ:
Kelly’s new vessel. 🩷🩷 pic.twitter.com/qtkCue8ltJ
— Felicity Kadlec (@felicity_rossi) July 20, 2023
ಪ್ರೇಮಿಗಳ ದಿನದಂದು ಇವರಿಬ್ಬರ ಮದುವೆ ನಡೆದಿದ್ದು, ಈ ವಿಶಿಷ್ಟ ವಿವಾಹ ಸಮಾರಂಭವನ್ನು ಫೆಲಿಸಿಟಿಯ ಅಜ್ಜ ಆಯೋಜನೆ ಮಾಡಿದ್ದರು. ವರದಿಗಳ ಫೆಲಿಸಿಟಿ 2018 ರಲ್ಲಿ ಕೆಲ್ಲಿ ರೊಸ್ಸಿ ಎಂಬ ಹೆಣ್ಣು ಬೊಂಬೆಯನ್ನು ಮದುವೆಯಾದ ಸ್ವಲ್ಪ ಸಮಯದ ಬಳಿಕ ಹ್ಯಾಲೋವೀನ್ ಪ್ರಾಪ್ ವೆಬ್ಸೈಟ್ ಕ್ರೀಪಿ ಕಲೆಕ್ಷನ್ ಅಲ್ಲಿ, ರಾಬರ್ಟ್ ಹೆಸರಿನ ಬೊಂಬೆಯನ್ನು ನೋಡುತ್ತಾಳೆ. ಈ ಗೊಂಬೆಯ ಪ್ರೀತಿಯಲ್ಲಿ ಬಿದ್ದ ಫೆಲಿಸಿಟಿ, ಆ ಗೊಂಬೆಯನ್ನು 83 ಸಾವಿರ ರೂಪಾಯಿಗಳಿಗೆ ಖರೀದಿಸಿ ಇದೀಗ ಆ ಗೊಂಬೆಯನ್ನೇ ಮದುವೆಯಾಗಿದ್ದಾಳೆ. ಪ್ರಸ್ತುತ ಫೆಲಿಸಿಟಿ ಈ ಎರಡು ಬೊಂಬೆಗಳು ಮತ್ತು ತನ್ನ 10 ಬೊಂಬೆ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 10 April 24